ಕೋಲ್ಮಿಂಚು ಸಾಟಿಯೇ ?
ನಿನ್ನ ಕುಡಿನೋಟಕೆ
ಪೂರ್ಣ ಚಂದ್ರನೂ ಕಮ್ಮಿಯೇ
ನಿನ್ನ ಕಣ್ಣ ಹೊಳಪಿಗೆ
ಹಂಸವನೂ ಹಿಂದಿಕ್ಕಿತು
ಆ ನಿನ್ನ ನಡಿಗೆ
ಬಳ್ಳಿಯೂ ತಲೆಬಾಗಿತು
ನೀ ಬಳುಕುವ ಶೈಲಿಗೆ
ಕೋಗಿಲೆಯೂ ಕಂದಿತು
ಈ ನಿನ್ನ ಕಂಠಕೆ
ನವಿಲು ನಾಚಿ ನೀರಾಯಿತು
ನಿನ್ನ ಈ ನರ್ತನಕೆ
ಮಲ್ಲಿಗೆಯೂ ಮಂಕಾಯಿತು
ನಿನ್ನ ಈ ಬಣ್ಣಕೆ
ಹೋಲಿಕೆಯೇ ಹೊಳೆಯದು
ನಿನ್ನಯ ಸದ್ಗುಣಕೆ
ಉದಯವಾಣಿ'ಯ 'ಸಾಪ್ತಾಹಿಕ ಸಂಪದ'ದಲ್ಲಿ 'ನಾನೂ ನನ್ನ ತೂಕವೂ...'
-
ಉದಯವಾಣಿ'ಯ 'ಸಾಪ್ತಾಹಿಕ ಸಂಪದ'ದಲ್ಲಿ 'ನಾನೂ ನನ್ನ ತೂಕವೂ...'
ಆಗಸ್ಟ್10, 2025ರಂದು ಪ್ರಕಟವಾಗಿದೆ. ಓದಿ ಪ್ರತಿಕ್ರಿಯಿಸಿ🌼
🧘️ನಾನೂ ನನ್ನ ತೂಕವೂ...
ʼಭೂಮಿ ತೂಕದ ವ್ಯಕ...
1 month ago
3 comments:
ತು೦ಬಾ ಚೆನ್ನಗಿದೆ ನಿಮ್ಮ ಹೋಲಿಕೆ..keep writing :)
Nice One Praveen...
"ಹೋಲಿಕೆಯ ಹೊಳಪು ಕುಂದಿದೆ"ಈ ಸಾಲುಗಳು ಯಾಕೋ ಇಷ್ಟ ಆಯಿತು..
keep going..:)
ಈ ಕವನ ಓದಿದ ಮೇಲೆ ಎಂಥವರಿಗಾದ್ರು ತಾನು ಕವಿ ಆಗಬೇಕು ಅನ್ನಿಸದೇ ಇರಲ್ಲ, ಏನ್ ವೋಲಿಕೆ ಪ್ರವಿ ನಿಮ್ಮದು....ನಿಜಕ್ಕೂ ವಿಸ್ಮಯ ನಿಮ್ಮ ಕಲ್ಪನಾ ಚೈತನ್ಯ ಹೀಗೆ ಇರಲಿ ಅಂತ ಹರಸುವೆ.....
ಧನ್ಯವಾದಗಳು,
ರವಿ
Post a Comment