ಸರ್ವತಂತ್ರ ಸ್ವತಂತ್ರ ತಂದ ಸ್ವಾತಂತ್ರ
ಮಾಡಬೇಡಿ ಇದನು ಅತಂತ್ರ
ಪ್ರೀತಿ,ಸ್ನೇಹ,ಸಹಬಾಳ್ವೆ ಆಗಿರಲಿ ನಮ್ಮ ಮಂತ್ರ
ಕದಡದಿರಿ ಶಾಂತಿ ಕೊಳವ,ಮಾಡಿ ಕುತಂತ್ರ
ಆದರೆ ಸುಮ್ಮನಿರಬೇಡಿ ಹರಿಯುತಿರೆ
ಭಾರತೀಯರ ನೆತ್ತರ
ಜೀವ ತೆಗೆಯುತಿರೆ ಸುಮ್ಮನಿರೋ ಹೇಡಿ ನಾವಲ್ಲ
ಆಗ ಕ್ರಾಂತಿ ಅನಿವಾರ್ಯ
ಬನ್ನಿ ಗೆಳೆಯ ಗೆಳತಿಯರೆ ಕೂಡಿ ಆಚರಿಸುವ
ಅರವತ್ತೆರಡರ ಈ ಸ್ವತಂತ್ರೋತ್ಸವ
ದೇಶಕ್ಕಾಗಿ ದುಡಿವ ದೇಶಕ್ಕಾಗಿ ಮಡಿವ
ಭಾರತವ ರಕ್ಷಿಸುವೆನೆಂಬ ಪಣವ ತೊಡುವ
ಸಮಸ್ತ ಭಾರತೀಯರಿಗೆ ಸ್ವತಂತ್ರೋತ್ಸವದ ಶುಭಾಶಯ.
'ಮಂದಾರ' ದ ಪ್ರಶಸ್ತಿ ಪತ್ರಗಳು😍
-
2024ರ ಅಂತಿಮ ಭಾಗದಲ್ಲಿ ಫೇಸ್ಬುಕ್ ಮಿತ್ರರೊಬ್ಬರು ನನ್ನನ್ನು 'ಮಂದಾರ' ಸಾಹಿತ್ಯ
ಬಳಗಕ್ಕೆ ಆಹ್ವಾನಿಸಿದರು. ಪ್ರತಿದಿನವೂ ಒಂದೊಂದು ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಾ
ಅತ್ಯಂತ ಕ್ರಿ...
2 months ago
No comments:
Post a Comment