Tuesday, November 16, 2010

ಮುರಿದು ಮೌನ ಹಾಡು ಗಾನ






























ಮನದ
ಮಾಮರದಲ್ಲಿ
ಅಡಗಿರುವ ಕೋಗಿಲೆಯೇ
ಮೌನವೇಕೇ? ನಿನಗೆ ಮೌನವೇಕೇ?

ರೆಂಬೆ ಕೊಂಬೆಯಲೂ ಚೆಲುವು ಚಿಗುರಿತ್ತು ಅಂದು
ಮರದ ತುಂಬೆಲ್ಲಾ ಹಸಿರಿನಾ ಸಿಂಧು
ಎಲೆಗಳ ಮರೆಯಿಂದ ಕುಹೂ ಕುಹೂ ಗಾನ
ಹಾಡಿದ್ದ ಕೋಗಿಲೆಯೇ ಇಂದೇಕೆ ಮೌನ?

ಮನದ
ಮಾಮರದಲ್ಲಿ...

ಪ್ರೀತಿ ಹರಿದಿತ್ತು ಧಮನಿ ಧಮನಿಯಲೂ
ಭೀತಿಯಿರದೇ.. ಅದು ಸಂತಸದಾ ಬಾಳು
ಕಣ ಕಣದಲ್ಲೂ ವಸಂತನಾ ಆಗಮನ
ಅಂದು ಹಾಡಿದ್ದ ನೀನು ಇಂದೇಕೆ ಮೌನ ?

ಮನದ
ಮಾಮರದಲ್ಲಿ...

ಬಂದೆಯಾಕೇ ಬಾಳಿನಲ್ಲಿ ಶಿಶಿರ
ನಿಲ್ಲಿಸಲು ನನ್ನ ಪ್ರೀತಿ ಉಸಿರ..
ಬೆತ್ತಲಾಗಿದೆ ಮರವೀಗ ಎಲೆ ಉದುರಿ
ಬತ್ತಿ ಹೋಗಿದೆ ಮನ ಪ್ರೀತಿ ಚದುರಿ..

ಮನದ ಮಾಮರದಲ್ಲಿ...

ಹಾಡಲಾರೆಯಾ ಕೋಗಿಲೆಯೇ ಒಂದು ಸಲ
ಹುಡುಕಿ ಬರುವಂತೆ ವಸಂತ ನಿನ್ನ ಮೂಲ
ಹಾಡು ನೀ ಮತ್ತೆ ಚಿಗುರುವಂತೆ ಮರದ ಎಲೆ
ಹಾಡು ನೀ ಮತ್ತೆ ಹುಟ್ಟುವಂತೆ ಪ್ರೀತಿ ಸೆಲೆ

ಮನದ ಮಾಮರದಲ್ಲಿ
ಅಡಗಿರುವ ಕೋಗಿಲೆಯೇ..
ಮೌನವೇನಾ?ಮುರಿದು ಹಾಡು ಗಾನ




13 comments:

ಪ್ರಗತಿ ಹೆಗಡೆ said...

ಪ್ರವೀಣ್ ಅವರೇ... ನಿಮ್ಮ ಕವನ ಕೇಳಿಯಾದರೂ ಕೋಗಿಲೆ ಹಾಡಲೇ ಬೇಕು... ತುಂಬಾ ಸುಂದರ ಸಾಲುಗಳು..

Soumya. Bhagwat said...

ಮತ್ತೊಮ್ಮೆ ಮಗದೊಮ್ಮೆ ಹಾಡು ಕೋಗಿಲೆ ..:) ಕೋಗಿಲೆಗೆ ಓದಲು ಬರುತ್ತಿದ್ದಿದ್ದರೆ ನಿಮ್ಮ ಸಾಲುಗಳನ್ನು ಓದಿ ಹಾಡಲು ಶುರುವಿಡುತ್ತಿತ್ತು ...:) ಸುಂದರವಾದ ಕವನ ಪ್ರವೀಣ್ :)

ranju said...

tumba chennagidae nimma kavana...:) aa kogilae yaru?!!

Unknown said...

Hi Pravi,

Wonderful kavana. proactive lines... Keep it up!!! Hey ninge gottha!! kogilege, neenu hadoke shuru hachkondre adu ningitha chennagi hadutte gotta... try it out.. ;) n let me know ;)

Cheers
Pavi

Ammu said...

Hai Praveen sir.Tumba sundaravagi barediddira fentastic.
Kogileya dvanige maruhogi vasantha matte barabodu kandita bande bartane barutta priti seleyannu taruttane.

Nimminda sundara kavana matte moodibandide odhi santasavaytu.

sunaath said...

ಕೋಗಿಲೆ ಕನ್ನಡ ಕವಿಗಳಿಗೆ ಪ್ರಿಯವಾದ ಹಕ್ಕಿ. ನಿಮ್ಮ ಮನದಲ್ಲಿ ಅದು ಒಮ್ಮೆ ಇಂಚರಿಸಿದೆ. ಮತ್ತೊಮ್ಮೆಯೂ ಅದು ಹಾಡುವದರಲ್ಲಿ ಸಂದೇಹ ಬೇಡ. ಉತ್ತಮ ಕವನ.

Rajani said...

nice poem, last para super

ಚುಕ್ಕಿಚಿತ್ತಾರ said...

ಕೋಗಿಲೆ ಮೌನವಾಗಿರುವ ಕಾರಣ ಅದಕ್ಕೆ ಈ ವರ್ಷಾವಧಿ ಮಳೆಯಿ೦ದ ಗ೦ಟಲೇನಾದರೂ ಇನ್ಫೆಕ್ಶನ್ ಆಗಿರಬಹುದಾ...:)

ಕವಿತೆ ಚನ್ನಾಗಿದೆ..

Gubbachchi Sathish said...

ಪ್ರಗತಿ ಹೆಗಡೆಯವರು ಹೇಳಿದಂತೆ ಕೋಗಿಲೆ ಖಂಡಿತ ಹಾಡುತ್ತೆ.
ಒಳ್ಳೆಯ ಕವನ ಕೊಟ್ಟದ್ದಕ್ಕೆ ಧನ್ಯವಾದಗಳು.

V.R.BHAT said...

ನವೋದಯ ಪ್ರಾಕಾರದ ಒಂದು ಹಾಡು ಎನ್ನಬಹುದು, ಚೆನ್ನಾಗಿದೆ, ನಿಮ್ಮ ಮನದ ಭಾವನೆಗಳನ್ನು ಮುಕ್ತವಾಗಿ ಕವನಿಸಿದ್ದೀರಿ. ಮನವೆಂಬ ಕೋಗಿಲೆ ಮೌನ ಮುರಿದು ಹಾಡಲಿಲ್ಲವೇಕೆ ಎಂಬುದನ್ನುಪ್ರಶ್ನಿಸಿದ್ದೀರಿ, ಹೀಗೆ ಮುಂದೆ ಸಾಗಲಿ ಗಾಡಿ, ನಿಮಗೆ ಹಾರ್ದಿಕ ಶುಭಾಶಯಗಳು

ಪ್ರವೀಣ್ ಭಟ್ said...

ಎಲ್ಲರಿಗೂ ಧನ್ಯವಾದಗಳು..

ಕೋಗಿಲೆ ಮತ್ತೆ ಹಾಡುತ್ತಿದೆ ಶಿಶಿರದಲ್ಲೂ.... :)

ಪ್ರವಿ

Unknown said...

pravi,super kavite vasantana aagamanadalli kogile hoduvudu sahaja aadare manushyana manavemba kogile ge vasanta baruvudu ondo eerado sala vaste matomme magadomme adu haadalaradu


kavana super

ಮೌನ-ಮಾತು said...

First time visiting to your blog.. its awesome!! Nimma kavithe tumba chennagide.. Keep up the good work:)