

ಬಾಡಿ ಹೋಗುವ ಮುನ್ನ
ಕಾಡು ಹೂವಿಗೊಂದು ಆಸೆ
ಅರಳಿಸಿದವನ್ಯಾರೋ..? ಅರಸಬೇಕು..
ಘೋರ ಕಾಡಿನ ನಡುವೆ
ಬಿರಿದು ನಿಂತಿರುವೆ
ಬಿಸಿಲು ಬೀಳಲಿ,ಬಿಡಲಿ
ಬೆಳಕಿನ ಕುರುಹು ಸಿಕ್ಕರೆ ಸಾಕು
ಅರಳಿ ಕಾದಿರುವೆ
ನೋಡುವ ಕುತೂಹಲ ಎಸಳಿನ
ಕಣ ಕಣದಲ್ಲಿ. ಕಣ್ಣಲ್ಲಿ..
ರವಿಯ ದರ್ಶನವಿಲ್ಲ
ಒಲವ ಸ್ಪರ್ಷವಿಲ್ಲ
ಮುಡಿಯ ಸೇರುವ ಮಾತು ಹಾಗಿರಲಿ
ನೋಡಿ ನಲಿಯುವವರಿಲ್ಲ
ಸೆಟೆದು ನಿಂತಿದೆ ಮರ
ನೆರಳು ನೀಡುತಿದೆಯಂತೆ.. ಧಿಮಾಕು
ಯಾರಿಗೆ ಬೇಕು?..
ಅಡ್ಡಿಯಾಗುತಿದೆಯೇಕೆ ಬರಲು ಬೆಳಕು
ಅರಳಿಸಿದವನ್ಯಾರಾದರೇನು
ಆಳುವವರಿಗೇನು ಕಮ್ಮಿಯಿಲ್ಲ
ಆಸೆಯ ಅದುಮಿಟ್ಟು
ಮಧುವನರಸಿ ಬಂದವರಿಗೆ
ಮೈ ನೀಡಬೇಕಂತೆ..
ಮೈ ತುಂಬಿದಾಗ ಹೂ ದುಂಬಿ
ಪ್ರಕೃತಿ ಧರ್ಮವಂತೆ..
ಆಸೆಯ ಮೇಲೆ ಅತ್ಯಾಚಾರ
ಬೆತ್ತಲಾದ ದೇಹದಲ್ಲಿ
ಬತ್ತಿಹೋಗಿದೆ ಮಕರಂದ
ದುಂಬಿಯೂ ಈಗ ದೂರ..
ಕಮರಿ ಹೋಗಿದೆ ಆಸೆ
ದೇಹದಂತೆ..
ಉದುರುತ್ತಿದ್ದೇನೆ!
ಕಾನನದಲ್ಲಿ ಕ್ರೌರ್ಯ..
ಹುಟ್ಟುವ ಕಾಯಿಗಾದರೂ
ಕಾಣಿಸುವನಾ...??
ಉತ್ತರಿಸುವವರ್ಯಾರು ?
ಮುಳುಗಿಹೋದ ಸೂರ್ಯ....

15 comments:
"ಆಸೆಯ ಮೇಲೆ ಅತ್ಯಾಚಾರ
ಬೆತ್ತಲಾದ ದೇಹದಲ್ಲಿ
ಬತ್ತಿಹೋಗಿದೆ ಮಕರಂದ
ದುಂಬಿಯೂ ಈಗ ದೂರ.."
sooper lines !!
chennaagide....
kavana super agidae.. tumba arthagarbithavagidae :)
super kavana kano
tumba ishta atu
super poem praveen ..........!! liked it :)
ತುಂಬಾ ಚೆನ್ನಾಗಿದೆ ...
"ಸೆಟೆದು ನಿಂತಿದೆ ಮರ
ನೆರಳು ನೀಡುತಿದೆಯಂತೆ.. ಧಿಮಾಕು
ಯಾರಿಗೆ ಬೇಕು?"
ಇ ಸಾಲುಗಳು ಇಷ್ಟಾ ಆದವು
'ಬಾಡಿ ಹೋಗುವ ಮುನ್ನ
ಕಾಡು ಹೂವಿಗೊಂದು ಆಸೆ'
Nice lines...
ಬಾಡಿ ಹೋಗುತ್ತಿರುವ ಕಾಡು ಹೂವಿನ ಮನದಳಲನ್ನು ಸೊಗಸಾಗಿ ಚಿತ್ರಿಸಿದ್ದೀರಿ.
ಹೂವಿನಂತೆ ಸೊಗಸಾಗಿದೆ...
ತುಂಬಾ ಚೆನಾಗಿದ್ದು. last but one para ರಾಶಿ ಇಷ್ಟ ಆತು ... :)
ತುಂಬಾ ಚನ್ನಾಗಿದೆ ಪ್ರವೀಣ್ ಇಂತಹ ಒಳ್ಳೆಯ ರಚನೆಗೆ ನನ್ನ ಹೃದಯ ಪೂರ್ವಕ ವಂದನೆಗಳು -- ಸತೀಶ್ ಬಿ ಕನ್ನಡಿಗ
ಒಳ್ಳೆ ಕವನ ಪ್ರವೀಣ್... ಭಾವನೆಗಳನ್ನ ವ್ಯಕ್ತಪಡಿಸಕ್ಕೆ ಉಪಯೋಗಿಸಿದ ಪದಗಳು ಚನ್ನಾಗಿದ್ದು :)
Good poem.. tumba chennagiddu..
SUNDARAVAAGIDE KAVITE..WOW..!
Dumbi doora .. matte hoovina gathi.. olle kavana praveenanna :)
ಕವನ ಚೆನ್ನಾಗಿ ಬರಿತೀರಾ....
Post a Comment