Monday, October 25, 2010

ಕಲ್ಪನೆಯ ಪ್ರೀತಿಪಾತ್ರಳಿಗೆ ಒಂದು ಪ್ರೀತಿ ಪತ್ರಹಾಯ್
ಗೆಳತಿ,

ಹೇಗಿದ್ದೀಯಾ? ಚೆನ್ನಾಗಿದ್ದೀಯ ನನಗೆ ಗೊತ್ತು ,ಜಸ್ಟ್ ನಿನಗೆ ಫೋನ್ ಮಾಡಿನೇ ನಾನು ಪತ್ರ ಬರೆಯಲು ಕೂತಿದ್ದು. ಇದೇನಿದು ಹತ್ತು ನಿಮಿಷಕ್ಕೊಂದು ಮೆಸ್ಸೇಜ್ ಗಂಟೆಗೊಂದು ಕಾಲ್ ಮಾಡುವವನು ಪತ್ರ ಬರೆಯುತ್ತಿದ್ದಾನ ಎಂದು ಆಶ್ಚರ್ಯ ಪಡಬೇಡ. ತುಂಡು ತುಂಡು
ಮೆಸ್ಸೇಜ್ ನಲ್ಲಿ ತುಂಡು ತುಂಡಾಗಿ ನನ್ನ ಮನಸಿನ ಭಾವನೆಗಳನ್ನು ಹೇಳಲಿಕ್ಕೆ ಸರಿ ಕಾಣಿಸಲಿಲ್ಲ.ಫೋನಿನಲ್ಲೂಹೇಳಲು ಇಸ್ಟವಾಗಲಿಲ್ಲ,ಫೋನ್ ಮಾಡಿದರೆ ನಿನ್ನ ಮಾತನ್ನು ಕೇಳುತ್ತಾ ಇರಬೇಕು ಅನ್ನಿಸುತ್ತೆ. ಇಂಪಾದ ದನಿ ಕೇಳಿದಸ್ಟೂಚಂದ. ಅದಕ್ಕೇ ಬೆರೇನನ್ನೂ ಹೇಳದೇ ಸುಮ್ಮನಿದ್ದುಬಿಡುವುದು.

ಹೇಯ್ ಪತ್ರ ಬರಿತಾ ಇರೋದು ಯಾಕೆ ಗೊತ್ತಾ? ನಾನು ಜಸ್ಟ್ ಜಡಿ ಮಳೆಯಲ್ಲಿ ತೋಯ್ದು ಬಂದು ಫ್ರೆಶ್ ಆದೆ.ನೀನದೆಸ್ಟುನೆನಪಾದೆ
ಗೊತ್ತಾ? ಜೊತೆಯಿರಬೇಕಿತ್ತು ಕಣೇ ! ಬೆಳ್ಳಗೆ ಹೊಳೆಯುತ್ತಿದ್ದ ಚಂದ್ರನನ್ನು ಕಾರ್ಮೋಡ ಕವಿದಾಗ ಧೋ ಎಂದು ಮಳೆ , ಚಂದ್ರನೇ ಅಳುತ್ತಿದ್ದಾನೋ ಎನ್ನುವಂತೆ.ನಿನ್ನನ್ನು ಮಿಸ್ ಮಾಡಿಕೊಂಡ ನನ್ನ ಕಣ್ಣಲ್ಲೂ ನೀರು, ನೀ ಜೊತೆಯಿಲ್ಲವಲ್ಲ ಎನ್ನುವದುಃಖಕ್ಕೆ ಇರಬೇಕು, ಕಾರಣ ನನಗೂ ಗೊತ್ತಾಗಲಿಲ್ಲ. ಕಣ್ಣೀರು ಬಂದಿದ್ದು ನನ್ನ ಮನಸ್ಸಿಗೆ ಗೊತ್ತಾಯಿತೇ ಹೊರತು ಜೋರು ಮಳೆಹನಿಯಲ್ಲಿ ಕೆನ್ನೆಗೆ ಅನುಭವವಾಗಲಿಲ್ಲ. ಆದರೆ ನಿನ್ನ ಬೆಟ್ಟದಸ್ಟು ಪ್ರೀತಿ ನೆನೆದಾಗ ತುಟಿಯಂಚಿನಲ್ಲಿ ಹೂ ನಗೆ ಬಂದಿದ್ದು ಮಾತ್ರಸುಳ್ಳಲ್ಲ. ಮಿಂಚು ಕೋರೈಸಿ ನಗುವಿನ ಹೊಳಪೇರಿಸಿತ್ತು.ಮೆಲ್ಲನೆ ಚಂದ್ರನೂ ಹೊರ ಬಂದು ನನಗೆ ಸಾಥ್ ನೀಡಿದ್ದ, ಜೊತೆನೇನೆಡೆದಿದ್ದ. ಮಳೆ ತುಂತುರಿಗೆ ಇಳಿದಿತ್ತು.

ರೂಮ್ ಸೇರುವ ಹೊತ್ತಿಗಾಗಲೇ ಮಳೆಯಿಂದ ಮೈ ಪೂರ್ತಿ ಒದ್ದೆ ..ಮನಸ್ಸೂ ಕೂಡ ನಿನ್ನ ನೆನಪಿನಿಂದ. ಜೊತೆ ಬರುತ್ತಿದ್ದ ಚಂದ್ರತುಂತುರು ಮಳೆ ಒಳಗೆ ಬರಲಿಲ್ಲ. ನೆನಪು ಮಾತ್ರ ಬಿರುಗಾಳಿಯಂತೆ ಮತ್ತೆ ನುಗ್ಗಿ ಬಂತು. ನೀನಿರಬೇಕಿತ್ತು ಕಣೆ.. ಗರಿ ಗರಿ ಟವೆಲ್ನಲ್ಲಿ ತಲೆ ಒರೆಸುತ್ತಾ ನೀನೂ ಮೈಯನ್ನು ಒದ್ದೆ ಮಾಡಿಕೊಂಡು .. ಪ್ರೀತಿ ಬೆರೆತ ಬಿಸಿ ಬಿಸಿ ಕಾಫಿಯನ್ನು ನೀನೊಂದು ಸಿಪ್ಪುನಾನೊಂದು ಸಿಪ್ಪು ಹೀರುತ್ತಾ... ಆಫೀಸಿನಲ್ಲಿ ನಡೆದುದ್ದೆಲ್ಲಾ ನಾ ನಿನಗೆ ಹೇಳುತ್ತಾ.. ಬೆಳಗ್ಗೆಯಿಂದ ಒಬ್ಬಳೇ ಬೇಸರವಾಗಿಫೋನಾಯಿಸಿದ ನಿನ್ನ ಗೆಳತಿಯರ ಸಂಸಾರದ ಬಗ್ಗೆ ಕೇಳುತ್ತಾ.. ಕೊನೆಗೆ ಹೇಳೋ,ನೀನಿಲ್ಲದೇ ಎಷ್ಟು ಕಷ್ಟ ಗೊತ್ತಾ ಕಳೆಯೋದುಎನ್ನುವ ಮಾತಿಗೆ ಕಾಯುತ್ತಾ.. ಎಸ್ಟೆಲ್ಲಾ ಆಸೆಯಾಯ್ತು ಗೊತ್ತಾ? ನೀನಿದ್ದಲ್ಲಿಗೆ ಓಡಿ ಬಂದು ಮತ್ತೊಂದು ಸಲ ಇಬ್ಬರೂ ಕೈ ಕೈಹಿಡಿದು ಮಳೆಯಲ್ಲಿ ನೆನೆಯಬೇಕೆನಿಸುವಸ್ಟು.ಕುಂತಲ್ಲೆ ಸಾವಿರ ಕನಸುಗಳು.

ಮುಂದಿನ ವರುಷ ಸಮಯಕ್ಕೆ ಕನಸುಗಳೆಲ್ಲಾ ನನಸಾಗಿರುತ್ತವೆ ತಾನೆ? ಇಬ್ಬರ ಮನೆಯಲ್ಲೂ ಒಪ್ಪಿರುವಾಗ , ಮನಸುಗಳೆರಡೂ ಕಲೆತಿರುವಾಗ.. ಒಂದು ವರ್ಷ ಕಸ್ಟವೇ.. ಆದರೂ ನಿನ್ನ ಓದು.. ನಿನ್ನ ಆಸೆ ನಾನು ಹೇಗೆ ಬೇಡ ಎನ್ನಲಿ . ನಿನ್ನಓದಿಗೆ ಶುಭ ಕೋರುತ್ತಾ .. ಮುಂದಿನ ವರ್ಷ ನನಸಾಗುವ ಕನಸಿನಲ್ಲಿ ಮುಳುಗುತ್ತಿದ್ದೇನೆ.. ಆಂ ಏನಂದೇ .. ಅದಕ್ಕೂ ಮುಂದಿನವರ್ಷ..? .. ಗೊತ್ತಾಯ್ತು ಬಿಡು.. ಛೀ ಕಳ್ಳಿ !!!!

ಕಷ್ಟ ಸುಖ ಫೋನಿನಲ್ಲಿ ಮಾತನಾಡೋಣ. ಮೆಸ್ಸೇಜ್ ನಲ್ಲಿ ಕಾಲೆಳೆಯುವುದಂತೂ ಇದ್ದೇ ಇದೆ.

internals ಆದ ಮೇಲೆ ನೀನು ಒಂದು ಪತ್ರ ಬರೆಯುತ್ತೀಯಲ್ಲಾ? ನಿನ್ನ ಮನದ ಭಾವನೆಯನ್ನು ಬಸಿದು..

ನಿನ್ನ ಪತ್ರಕ್ಕೆ ಕಾಯುತ್ತಿರುವ ನಿನ್ನ ಹೃದಯದ ಕಳ್ಳ

ಪ್ರವಿ

35 comments:

Doddamanimanju said...

ಪ್ರವೀಣ್ ಎಲ್ಲೋ ಏನೋ ಹೆಚ್ಚು ಕಡಿಮೆ ಮಾಡಿಕೊಂಡಿದಿಯ ಅನಿಸುತ್ತೆ ಹೃದಯ ಬೇರೆ ಕದ್ದಿದಿಯ ಅಂತಿಯಾ ಏನೋ ನಾವು ಚಿಕ್ಕವರು ನಮಗೆ ಈ ಪ್ರೀತಿ ಪ್ರೇಮದ ಬಗ್ಗೆ ಗೊತ್ತಾಗೊಲ್ಲ ಅದ್ರು ಪತ್ರ ತುಂಬಾ ಚಂದಾ ಇದೇ..!

ಪ್ರವೀಣ್ ಭಟ್ said...

Ha ha manju.. enu hechchu kammi madkondilvo.. neevella heege hechchu kammi madkoteera antane kalpaneya preeti patralige anta add madideeni :):)

Thanks Manju..

Pravi

bharadwaj said...

Hi Pravi,
channagide guru, antu nim hudgi hesaru indirect aagi helibitte (kalana) congrats...

Rasikara raja Dr.Raj and Dr. Vishnu films nenapige baro thara ide ee letter that too with your own exp innu bhavane tumbi bardidiya...

Next rasikara raja aago hage ide maga husharu... :)

ಪ್ರವೀಣ್ ಭಟ್ said...

Hi Bharadwaj,

Idu anubhava allale.. kalpane aste.. kandita hudugi sikkidaga hethini aytha..

Thanks maraya sikkapatte birudu kotbittidiya :):)

Pravi

bharadwaj said...

Pravi adu kalana alla kalpana (typo) and now i am sure u r alway in kaplana's loka adakke mathe mathe kalpane kalpane anta heltirodu :P :P

ಚುಕ್ಕಿಚಿತ್ತಾರ said...

ಪತ್ರ ಚೆನ್ನಾಗಿದೆ.....!
ಕಲ್ಪನೆಯನ್ನು ವಾಸ್ತವದಲ್ಲಿ ಜಾರಿಗೊಳಿಸಿ ಬಿಡಿ..:)

ಚುಕ್ಕಿಚಿತ್ತಾರ said...

ಪತ್ರ ಚೆನ್ನಾಗಿದೆ.....!
ಕಲ್ಪನೆಯನ್ನು ವಾಸ್ತವದಲ್ಲಿ ಜಾರಿಗೊಳಿಸಿ ಬಿಡಿ..:)

prabhamani nagaraja said...

ನೀವು ಬರೆದ೦ತೆ ಪತ್ರದ ಮೂಲಕ ಭಾವನೆಗಳನ್ನು ತೆರೆದಿಡುವ೦ತೆ, ಮೊಬೈಲ್ ಮಾತು ಅಥವಾ ಮೆಸೇಜ್ ಗಳಲ್ಲಿ ಸಾಧ್ಯವಿಲ್ಲ! ನಿಮ್ಮ ಕಲ್ಪನೆ ವಾಸ್ತವವಾಗಲಿ, ಶೀಘ್ರಮೇವ ಕಲ್ಯಾಣಮಸ್ತು!

ನಾಗರಾಜ್ ವೈದ್ಯ.// ಎನ್ವೀ ವೈದ್ಯಹೆಗ್ಗಾರ್. said...

ಚೂರು ಕನಿಕರ ಇರಲಿ ಮಾರಾಯಾ ಕಳ್ಳುವ ಮುನ್ನ!

sunaath said...

ಪ್ರವೀಣರೆ,
ಪ್ರೇಮಪತ್ರಲೇಖನದಲ್ಲೂ ನೀವು ಪ್ರವೀಣರೇ ಆಗಿರುವಿರಿ. ಅಂದ ಮೇಲೆ ಇದು ಕಲ್ಪನೆಯೆಂದು ನಂಬುವದು ಹೇಗೆ? ಕಲ್ಪನೆಯೇ ಆಗಿದ್ದರೆ ಬೇಗನೇ ವಾಸ್ತವರೂಪಕ್ಕಿಳಿಯಲಿ!

ಆಕಾಶಬುಟ್ಟಿ said...

Praveen...

mastiddalo...aha..jadi male..maleyashte sundaravada,vaddeyaada nenapugalu..

sakkat...:)

Soumya. B said...

hello praveen cute letter.....:) maleyallondu nenapu.. :) ishtaa aatu.. :)

Jayashree said...

Praveen,

"ಕಣ್ಣೀರು ಬಂದಿದ್ದು ನನ್ನ ಮನಸ್ಸಿಗೆ ಗೊತ್ತಾಯಿತೇ ಹೊರತು ಜೋರು ಮಳೆಹನಿಯಲ್ಲಿ ಕೆನ್ನೆಗೆ ಅನುಭವವಾಗಲಿಲ್ಲ" ಇಷ್ಟ ಆತು .. ಜೊತೆಗೆ upload ಮಾಡಿರೋ photo ( ಪತ್ರದಂತಿರೋ ಹುಡುಗ ) .. ನೂ ಸಕ್ಕತ್ ಮ್ಯಾಚ್ ಆಗ್ತು...

Swathi said...

ತುಂಬಾ ಚೆನ್ನಾಗಿದೆ ಪತ್ರ..simalpe agi cutegide..:-) ಆದಸ್ಟು ಕಲ್ಪನೆ ವಾಸ್ತವವಾಗಲಿ..;-)

- ಕತ್ತಲೆ ಮನೆ... said...

mast!!!

Chethana said...

Patra chennagide.....

ವೆಂಕಟ್ರಮಣ ಭಟ್ said...
This comment has been removed by the author.
ವೆಂಕಟ್ರಮಣ ಭಟ್ said...

ಇಂಟರ್ನಲ್ಸ್ ಎಲ್ಲಾ ಹಾಳ್ಬಿದ್ದೊಗ್ಲಿ ಹೇಳಿ ನಿನ್ನ ಕೂಸು ವಾಪಸ್ ಪತ್ರ ಬರೀಲ್ ಕೂತ್ಕಂಡಂಗಿದ್ದು, ಮಳೆ ಸುರಿಯುವ ಹಾಸ್ಟೆಲಿನ ಕಿಟಕಿ ಪಕ್ಕ..(ಈತರ ಟಚ್ ಕೊಟ್ರೆ ಮತ್ತೆನ್ಮಾಡ್ತು ಪಾಪ !!) ಯಾವ್ದಕ್ಕೂ 1 ಫೋನ್ ಹೊಡೆದು ನೋಡು ಮಾರಾಯ..

ಪ್ರಗತಿ ಹೆಗಡೆ said...

ಪ್ರವೀಣ್ ಅವರೇ .. ತುಂಬಾ ಚೆನ್ನಾಗಿದೆ ನಿಮ್ಮ ಪ್ರೇಮ ಪತ್ರ... ನನ್ನದೊಂದು ಹಾರೈಕೆ, ನಿಮ್ಮ ಕಲ್ಪನೆಯ ಹುಡುಗಿ ಬೇಗ ಸಿಗಲಿ...

pavithra said...

Hey Pravi,

Kavithe anthu chennagi Baritira .blog settings anthu sakkattagide.Nim kavithegalannella kale hakidre nim anubhavad mele baridiro hagide. Copy anthu alla ;) ;) ;) Any way keep it up !! rocking yaar... ;) Nimma kanasu nansagali..... ;)

Cheers,
Pavi

ಪ್ರವೀಣ್ ಭಟ್ said...

@chukki chittara

DhanyavaadagaLu.. vastavakke iLisona bidi nidhaanavagai :)

@prabhamani...

Haaraikege dhanyavaadagaLu

ಪ್ರವೀಣ್ ಭಟ್ said...

Hi Sunath Sir..

Idu kalpanene sir.. vastava bandaga khandita heltini.. nimma haaraike idyalva jotege ..

DhanyavadagaLu

Pravi

ಪ್ರವೀಣ್ ಭಟ್ said...

Vaidyare...

Kanikara entako :) Kalaji madti salda :)

Pravi

ಪ್ರವೀಣ್ ಭಟ್ said...

Hi Chetanakka, soumya..

Thanks ista pattiddakke...

Hmm Maleyalli oddeyagi thandiyaadaga bareda patra idu ..:)

Pravi

ಪ್ರವೀಣ್ ಭಟ್ said...

Hi Jayashree, swati, kattalemane, chetana...

ista pattiddakke dhanyavaadagaLU

Pravi

ಪ್ರವೀಣ್ ಭಟ್ said...

Hi Venkataraman..

Houdu maraya papa internal ge odkyala badlu patra barita kootre kasta.. Amele post madakkittu nanu..

Bt post Internals mugdmelene hogtu kanistu.. a kadeyinda entu call ilyapa :)

Thankso comment ge

Pravi

ಪ್ರವೀಣ್ ಭಟ್ said...

Hi Pragathi,

Haaraikeyanna inneradu varsha kaadidalaagide :)

DhanyavaadagaLu

Pravi

ಪ್ರವೀಣ್ ಭಟ್ said...

Hi pavi,

Bere ella kavanada bagge blog settings bagge comment haako bharadalli.. ee patra hegide antane hellilla.. :):)

Thanks for comments

Pravi

ಸೀತಾರಾಮ. ಕೆ. / SITARAM.K said...

ಚೆಂದದ ಪ್ರೇಮಪತ್ರ. ಹುಡುಗಿಯರು ಹಿಂದೆ ಬಿದ್ದಾರು.ಎಚ್ಚರಿಕೆಯಿಂದಿರಿ.

ಬೇಸರವೇ ?ಬೇಸರವೇ ? said...

Nice Praveen

ದಿವ್ಯಾ said...

Hey Pravi,

nange helle ilwallo...:-( very bad...:-( nin chitta kadda chori yaaru??

nin letter nodi nin hudgi full fida agadralli doubt ille taga....;-)

al d bestugalu..:-)

ಪ್ರವೀಣ್ ಭಟ್ said...

Hi Sitaram Sir..

Tumba dhanyavaadagaLu.. mechchiddakke haagu echcharisiddakke !!!
Pravi

ಪ್ರವೀಣ್ ಭಟ್ said...

Hi Besarave.

Tumba thanks

Pravi

ಪ್ರವೀಣ್ ಭಟ್ said...

Hey Divya,

Innu kalpaneyalle iddi.. vastavakke bandaga ninge helthi kandita !!!

Thanks
Pravi

ಜೀವನ ಒಂದು ಪಯಣ... said...

Tumba chennagide ree nimma kalpaneya hudugige baridiro patra....aadare ondu gottagalilla...chandra mattu MaLe ottige hege iroke saadya...MaLe baruvaaga chandra kaNode illa alva...
...still bhaari imaagination bidri nimdu...