Friday, September 17, 2010

ಭವತಿ ಭಿಕ್ಷಾಂದೇಹಿ !!!
ಹೆಸರು
ನೋಡಿದೊಡನೆ ನೆನಪಿಗೆ ಬರುವುದು ವಟುಗಳು ಭಿಕ್ಷಾಪಾತ್ರೆ ಹಿಡಿದಿರುವುದು.ಉಪನಯನದ ನಂತರ ಕೇವಲ ಬದುಕಿನಕಷ್ಟ ಗೊತ್ತಾಗಲಿ ಎಂದು ಕಳಿಸುವ ಒಂದು ಕ್ರಿಯೆ ಮಾತ್ರವಾಗಿತ್ತು .ಆದರೆ ನಾನು ಹೇಳ ಹೊರಟಿರುವುದು ಅವರ ಬಗ್ಗೆ ಅಲ್ಲ.ಪ್ರತೀ ಊರಿನಲ್ಲಿ, ಪ್ರತಿ ಪೇಟೆಯಲ್ಲಿ, ಕಂಡ ಕಂಡ ಸಿಗ್ನಲ್ ಗಳಲ್ಲಿ ಹಿಂಡು ಹಿಂಡಾಗಿ ಬರುವ ,ಭಿಕ್ಷಾಟನೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡವರ ಬಗ್ಗೆ.ಕೆಲವೊಬ್ಬರು ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕು ಭಿಕ್ಷುಕರಾಗಿರುತ್ತಾರೆ,ಹಲವಾರು ಜನ ಭಿಕ್ಷೆ ಬೇದುವುದಕ್ಕೇ ಪರಿಸ್ಥಿತಿ ಸೃಸ್ಠಿಸಿಕೊಳ್ಳುತ್ತಾರೆ.ದೇಹದಲ್ಲಿ ಶಕ್ತಿಯಿದ್ದೂ, ತೋಳಿನಲ್ಲಿ ಬಲವಿದ್ದರೂ ,ಕಷ್ಟಪಟ್ಟು ದುಡಿಯಲಾಗದ ಸೋಮಾರಿಗಳು ಹೊಟ್ಟೆಪಾಡಿಗೆ ಕಂಡು ಕೊಳ್ಳುವ ಮಾರ್ಗ ಭಿಕ್ಷಾಟನೆ.ಇವರಿಗೆ ದಿನಕ್ಕೊಂದು ಅಂಗವಿಕಲತೆ,ದಿನಕ್ಕೊಂದು ಸಿಗ್ನಲ್..ಬೇಡುವುದಕ್ಕೆ ಸಾವಿರ ಕಾರಣಗಳು.ಇಂತಹವರನ್ನು ಖಂಡಿತಾ ಹಣ ನೀಡಿ ಪ್ರೋತ್ಸಾಹಿಸಬಾರದು

ಪರಿಸ್ಥಿತಿ
ಒತ್ತಡಕ್ಕೆ ಸಿಲುಕಿ ಭಿಕ್ಷುಕರಾಗುವವರ ಕಥೆಯೇ ಬೇರೆ.ಜೀವನ ಪೂರ್ತಿ ಸಂಸಾರಕ್ಕಗಿ ದುಡಿದು, ಇನ್ನು ದೇಹದಲ್ಲಿ ತ್ರಾಣವಿಲ್ಲದಾಗ ಅದೇ ಸಂಸಾರ ಅವನ/ ಹೊರ ಹಾಕಿದಾಗ ಅನಿವಾರ್ಯವಾಗಿ ಭಿಕ್ಷಾಟನೆಗೆ ಇಳಿಯಬೇಕಾಗುತ್ತದೆ. ಯಾರು ವಾರಸುದಾರರಿಲ್ಲದಿದ್ದಾಗ ದುಡಿಯುವ ಅಂಗಗಳೂ ಊನವಾದಾಗ ಹೊಟ್ಟೆಪಾಡು,ಅಸಹಾಯಕತೆ.. ಬೇರೆಯವರ ಮುಂದೆ ಕೈಚಾಚುವಂತೆ ಮಾಡುತ್ತದೆ .ನನ್ನ ಪ್ರಕಾರ ಇವರಿಗೆ ಭಿಕ್ಷೆ ನೀಡುವುದರಲ್ಲಿ ಯಾವ ತಪ್ಪಿಲ್ಲ..

ಇನ್ನೊಂದು ಆಘಾತಕಾರಿ ಸಂಗತಿ ಎಂದರೆ ಭಿಕ್ಷಾಟನೆ ಧಂದೆಯಾಗಿ ಬೆಳೆದಿರುವುದು.ಶಾಲೆಗೆ ಹೋಗಬೇಕಾದ ಮಕ್ಕಳು,ಅನಾಥಮಕ್ಕಳನ್ನು ಹಿಡಿದು ತಂದು ಊರು ಕೇರಿ ಗೊತ್ತಿಲ್ಲದ ಜಾಗದಲ್ಲಿ ಭಿಕ್ಷಾಟನೆಗಿಳಿಸುತ್ತಾರೆ.ಬೇಡಲೇಬೇಕು ,ಇಲ್ಲದಿದ್ದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ.ಒಂದೊಂದು ಮಕ್ಕಳಿಗೆ ಒಂದೊಂದು ಜಾಗಕ್ಕೆ , ವಯಸ್ಸಿಗೆ ತಕ್ಕಂತೆ ಟಾರ್ಗೆಟ್.ಅಸ್ಟು ಹಣ ಗಳಿಸಲೇ ಬೇಕು.ಇದರಲ್ಲಿ ಮಕ್ಕಳಿಗೆ ನಯಾಪೈಸೆಯೂ ದೊರೆಯುವುದಿಲ್ಲ ಎಲ್ಲಾ ಧಂದೆಗಿಳಿಸಿದವರಿಗೆ.ಇವರಿಗೆ ಹಿಡಿ ಕೂಳು ಸಿಕ್ಕರೆ ಹೆಚ್ಚು .ಭಿಕ್ಷೆ ಸರಿಯಾಗಿ ಸಿಗದಿದ್ದರೆ ಟಾರ್ಗೆಟ್ ರೀಚ್ ಆಗಲು ಪಿಕ್ ಪಾಕೆಟ್ ಮಾಡಲೂ ಹೆದರುವುದಿಲ್ಲ.ಹಾಗಾದರೆ ಇಂತವರಿಗೆ ಭಿಕ್ಷೆ ನೀಡಬೇಕೆ? ನನಗೂ ಗೊತ್ತಿಲ್ಲ..

ಎಲ್ಲ
ಯೋಚಿಸಿದಾಗ ಸಂಪೂರ್ಣ ಭಿಕ್ಷಾಟನೆ ನಿರ್ಮೂಲನೆ ಸಾಧ್ಯವೇ?ಎನ್ನುವ ಜಿಜ್ನಾಸೆ ಮೂಡುವುದು ಸಹಜ.ಸ್ವಲ್ಪ ಕಷ್ಟವಾದರೂ ಖಂಡಿತ ಸಾಧ್ಯ. ಎಲ್ಲರಲ್ಲಿ ಒಂದು ಸ್ವಸ್ಥ ಸಮಾಜ ನಿರ್ಮಾಣ ಮಾಡಬೇಕೆಂಬ ಕಳಕಳಿ ಬರಬೇಕು ಅಸ್ಟೇ .ದುಡಿದು ತಿನ್ನಲು ಸಾಧ್ಯವಿರುವವರಿಗೆ,ಸ್ವಾಭಿಮಾನ ಆತ್ಮವಿಶ್ವಾಸ ಹುಟ್ಟಿಸಿ ದುಡಿಯಲು ಅವಕಾಶ ನೀಡಬೇಕು.ಸ್ವಲ್ಪ ಅಂಗವಿಕಲತೆಯುಳ್ಳವರಿಗೆ, ಅವರಿಗೆ ಸಾಧ್ಯವಾಗುವಂತಹ ಕೆಲಸದಲ್ಲಿ ತರಬೇತಿ ಕೊಟ್ಟು ಬದುಕು ರೂಪಿಸಿಕೊಳ್ಳಲು ಸಹಾಯ ಮಾಡಬೇಕು.ಮಕ್ಕಳನ್ನು ದಂದಾಗಾರರ ಕಪಿಮುಷ್ಠಿಯಿಂದ ತಪ್ಪಿಸಿ,ತಿಳಿ ಹೇಳಿ ಓದಲು ನೆರವಾಗಬೇಕು. ಏನೂ ಮಾಡಲಾಗದ ಮುದುಕರು ಅಂಗವಿಕಲರಿಗೆ ಅವರಿಗೆಂದೇ ಇರುವ ಜಾಗಕ್ಕೆ ಸೇರಿಸಬೇಕು.ದಾನಿಗಳಿಂದ ಸಂಗ್ರಹಿಸಿ ಬದುಕಲು ನೆರವಾಗಬೇಕು.ಒಬ್ಬರಿಂದ ಇದು ಅಸಾಧ್ಯ, ಒಂದು ಸಂಸ್ಥೆಯಿಂದ , ಸರ್ಕಾರದಿಂದ ಮಾತ್ರ ಇದನ್ನು ಕಾರ್ಯರೂಪಕ್ಕೆ ತರಲು ಸಾಧ್ಯ.

ಭಿಕ್ಷುಕರ
ಉದ್ದಾರಕ್ಕೆಂದೇ ಇರುವ ಪುನರ್ವಸತಿ ಕೇಂದ್ರದ ಬಗ್ಗೆ ಎಲ್ಲರಿಗೂ ತಿಳಿದದ್ದೇ."ಭಿಕ್ಷೆ ಬೇಡಿದರೆ-ಒಂದು ದಿನ ಸಿಗದಿದ್ದರೂ-ಕೊನೇ ಪಕ್ಷ ಜೀವವಾದರೂ ಉಳಿಯುತ್ತದೆ ಇಲ್ಲಿದ್ದರೆ ಅದೂ ಇಲ್ಲ" ಎನ್ನೋ ಭಾವನೆ ಭಿಕ್ಷುಕರಲ್ಲಿಮೂಡುವಂತಾಗಿದೆ.ಸತ್ತ ಜೀವಕ್ಕೆ ಲೆಖ್ಖವೂ ಇಲ್ಲ ಬೆಲೆಯೂ ಇಲ್ಲ.ಹೇಳಿಕೇಳಿಕೊಳ್ಳುವವರೂ ಮೊದಲೇ ಇಲ್ಲ.ಬದುಕು ಕಟ್ಟಿಕೊಳ್ಳಲುಬಂದವರು ಜೀವ ಉಳಿಸಿಕೊಳ್ಳಲು ಅಲ್ಲಿಂದ ತಪ್ಪಿಸಿಕೊಂಡು ಓಡಿಹೋಗುವ ಸಂದರ್ಭ ಬಂದಿದ್ದು ವಿಪರ್ಯಾಸ.ಬರೆದಸ್ಟೂ ಇದೆ ಬಿಡಿ ಅಲ್ಲಿನ ಅವ್ಯವಸ್ಥೆ....

ಅಸಹಾಯಕತೆ,ಅಂಗವಿಕಲತೆ , ಪರಿಸ್ಥಿತಿಯ ಒತ್ತಡದಿಂದ ಹೇಗೆ ಭಿಕ್ಷಾಟನೆಗಿಳಿಯುತ್ತರೆ , ಹೇಗೆ ಅನಿವಾರ್ಯವಾಗುತ್ತದೆಎನ್ನುವುದಕ್ಕೆ ಸಣ್ಣ ಕವನ.
ಹಾಗಂತ ನಾನು ಖಂಡಿತ ಭಿಕ್ಷಾಟನೆಯನ್ನು ಪ್ರೋತ್ಸಾಹಿಸುವುದಿಲ್ಲ.

ಅಮ್ಮ
..ಅಮ್ಮ ,ಅಣ್ಣ ಅಣ್ಣ..
ನೋಡಿ ನೋಡಿ ಬದಲಿಸಬೇಕು ಮಾತಿನ ಬಣ್ಣ
ಪೂರ್ವಕೃತ ? ಸ್ವಯಂಕೃತ ?
ಅಂತೂ ಪರಾಧೀನ..

ಛೀ,ತೂ ಮುಂದಕ್ಕೆ ಹೋಗು..
ದುಡಿದು ತಿನ್ನಲಿಕ್ಕೇನು ದಾಡಿ
ಅಂಗವಿಕಲತೆಯ ಸೋಗು
ನೋಡಲೂ ಇಲ್ಲ ನನ್ನ,ಎಲ್ಲರಲೂ ಒಂದೇ ನುಡಿ

ಅಂದು,ರಟ್ಟೆ ಮುರಿದು ಹೊಟ್ಟೆ ಕಟ್ಟಿಕೊಂಡೆ
ನನ್ನದೊಂದೇ ಅಲ್ಲ,ನನ್ನವರ ಹೊಣೆಯೂ ನಂದೇ..
ಏನೂ ಗಿಟ್ಟಿಸಲಾಗದೀಗ ನನ್ನಿಂದ..
ಸತ್ತಿರುವ ಮುದುಕ.
ಮೈ ನಡುಕ..
ಕಿವಿ ದೂರ..ಕಣ್ಣಲ್ಲಿ ಪೊರೆ
ನನ್ನ ದೇಹ ನನಗೇ ಹೊರೆ..
ನನ್ನವರಿಗೂ...
ಇಂದೋ ನಾಳೆನೋ
ಬದುಕಬೇಕಲ್ಲ ಅಲ್ಲಿವರೆಗೂ..
ಹೊಟ್ಟೆ ಪಾಡು,ಹೊರಡು ಮುಂದೆ
ಭವತಿ ಭಿಕ್ಷಾಂದೇಹಿ..
ಅಸಹಾಯಕ. ನಾನೊಬ್ಬ ಭಿಕ್ಷುಕ..

ಹೋಗಾಚೆ ದೂರ
ಶಾಲೆಗೆ ಹೋಗಬೇಕಾದ ಪೋರ..
ಆಗುವುದಿಲ್ಲವೇ ನಾಚಿಕೆ..
ಹೀಗೆ ಕೈ ಚಾಚುವುದಕೆ..

ಶಾಲೆ,ಹೆಸರು ಕೇಳಿದೊಡೆ
ಕಣ್ಣಲ್ಲಿ ನೂರು ಕನಸು
ಕನಸಷ್ಟೆ,ಸೇರಿಸುವರಾರು
ಆಗಲೇ ಕಳೆಯುತಿದೆ ವಯಸು
ಬೇಡಲೇಬೇಕು ಅನಿವಾರ್ಯ
ಅವರು?? ವಹಿಸಿದ್ದ ಕಾರ್ಯ..
ನಿನ್ನೆ ಕಣ್ಣೆರಡು ಕಾಣ..
ಇಂದು ಕಾಲೊಂದು ಊನ
ನಾಳೆ ಮತ್ತೊಂದು ..ಚಾಚಲೇಬೇಕು ಕೈನ
ಜಾಗ ಬದಲು..
ತಪ್ಪಿದರೆ ಚಾಟಿ.. ಬಾರುಕೋಲು
ತಪ್ಪದಿರೆ? ಬೇಡಿದ್ದು ಅವರಿಗೆ
ಹಿಡಿಕೂಳು ಹೊಟ್ಟೆಗೆ..ಹುಟ್ಟಿದ ತಪ್ಪಿಗೆ
ಹೊಟ್ಟೆಪಾಡು ಹೊರಡು ಮುಂದೆ
ಭವತಿ ಭಿಕ್ಷಾಂದೇಹಿ..
ಬಾಲಕ,ಅಮಾಯಕ..ನಾನೊಬ್ಬ ಭಿಕ್ಷುಕ


ಚಿಲ್ಲರೆ ಇಲ್ಲ ಛೀ,ತೂ ಅನ್ನುವ ಮುನ್ನ ಒಮ್ಮೆ ಯೋಚಿಸಿ.ಹಾಗೆ ಭಿಕ್ಷೆ ನೀಡುವ ಮುನ್ನ ಒಂದಲ್ಲ ಎರಡು ಸಲ ಯೋಚಿಸಿ ದುಡಿದುತಿನ್ನುವ ಸಮರ್ಥನಿರುವವನಿಗೆ ಕೊಡುವುದರಲ್ಲಿ ಯಾವ ಅರ್ಥವೂ ಇಲ್ಲ....

ಆತ್ಮವಿಶ್ವಾಸವಿದ್ದರೆ,ಸ್ವಲ್ಪ ಶಕ್ತಿಯಿದ್ದರೆ .. ಸಾಮಾನ್ಯ ಅಂಗವಿಕಲತೆ ಅಂಗವಿಕಲತೆಯಲ್ಲ ಸ್ವಾಭಿಮಾನಿಯಾಗಿಬದುಕಬಹುದೆನ್ನುವುದಕ್ಕೆ ಕೆಳಗಿನ ವೀಡಿಯೋ ನೋಡಿ

http://www.youtube.com/watch?v=8YF-ES8Q1zk

"IGNORANCE OF ABILITY BRINGS DISABILITY"

ಪ್ರೀತಿಯಿಂದ ಪ್ರವಿ22 comments:

sunaath said...

ಪ್ರವೀಣ,
ಭಿಕ್ಷುಕರನ್ನು ಕಂಡರೆ ಮರುಕ ಹುಟ್ಟುತ್ತದೆ. ಆದರೆ ಅವರ ಹಿಂದಿರುವ ಜಾಲವನ್ನು ನೆನಸಿಕೊಂಡರೆ ಭಯವಾಗುತ್ತದೆ. ಈ ಭಿಕ್ಷಾಟನೆಯ ಹಿಂದಿರುವ ಮಾಫಿಯಾಕ್ಕೆ ರಾಜಕೀಯ ಶಕ್ತಿಯೂ ಇರಬಹುದು, ಅಲ್ಲವೆ?

ಮನದಾಳದಿಂದ............ said...

ಪ್ರವೀಣ್,
ಬಿಕ್ಷುಕರ ಕರಾಳ ಜೀವನ ದರ್ಶನ ನಮಗೆ ನಿತ್ಯವೂ ಲಭಿಸುತ್ತದೆ. ಅಂತೆಯೇ ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನ ಬಿಕ್ಷುಕರ ಪುನರ್ವಸತಿ ಕೇಂದ್ರದಲ್ಲಿ ನಡೆದ ಘಟನೆಗಳು ಎಂತಹ ಕಟುಕರ ಮನವನ್ನಾದರೂ ಕರಗಿಸದೆ ಇರಲಾರದು.
ನಿಮ್ಮ ಲೇಖನ, ಕವನ ವಸ್ತವದ್ಕ್ಕೆ ಹಿಡಿದ ಕನ್ನಡಿ.

ದಿನಕರ ಮೊಗೇರ.. said...

ಪ್ರವೀಣ್,
ತುಂಬಾ ಸೊಗಸಾಗಿ ಬರೆದಿದ್ದೀರಾ..... ನಿಮ್ಮ ಕವನದಲ್ಲಿ ಕಥೆಯನ್ನೇ ಹೇಳಿದ್ದೀರಾ.... ಹೌದು , ನಿಮ್ಮ ಹಾಗೆ ನಾನೂ ಭಿಕ್ಶಾಟನೆಯನ್ನು ವಿರೋದಿಸುತ್ತೇನೆ.... ಆದರೆ ಯಾರಾದರೂ ಮುದುಕರು ಮಕ್ಕಳು ಬಂದರೆ ನನಗೆ ತಿಳಿಯದೆಯೆ ಕೈಯಿ ಕಿಸೆಗೆ ಹೋಗತ್ತೆ.....ಧನ್ಯವಾದ ಉತ್ತಮ ಬರಹಕ್ಕೆ....

ಜಲನಯನ said...

ಪ್ರವಿ, ನಿಮ್ಮ ಕಾಳಜಿಪರ ಲೇಖನ ಬಹಳ ಇಷ್ಟವಾಯ್ತು. ಕೆಲವು ಚಲನ ಚಿತ್ರಗಳಲ್ಲೂ ಇದನ್ನೇ ಕಥಾವಸ್ತುವನ್ನಾಗಿ ಬಿಂಬಿಸಿರುವುದು ತಿಳಿದ ವಿಷವೇ. ಅಸಹಾಯಕ ಮುದಿ, ಅಂಗವಿಕಲ ಮುಂತಾದವರಿಗೆ ಭಿಕ್ಷೆ ಹಾಕಿದರೂ ಪರವಾಗಿಲ್ಲ ಆದ್ರೆ ಸೋಗು ಭಿಕ್ಷುಕರು, ಮಕ್ಕಳಲನ್ನು ಮುಂದಿಟ್ಟುಕೊಂಡು ಬೇಡುವ ದಷ್ಟ-ಪುಷ್ಟರಿಗೆ ಏನೆನ್ನಬೇಕು...?
ಒಳ್ಳೆಯ ಚಿಂತನೆ ಭರಿತ ಲೇಖನ.

Ammu said...

Hai praveen Sir....
Sundaravagi chitrisiddira sir. Bikshatane annodu iga nivu helidage mamuli agbittide.
adara hindiro satyagaleshto novugaleshto artagaleshto ella kuda bikshatane mado avrige matra gottu adu bitre a devrige gottu alva artapurnavagide.

Anonymous said...

sakkattaagiddu Praveen...

nijavaagiyoo angavikala bhikshukarannu kandare paapa annistu..arogyavanta janaroo bhikshatanege iliyuvudu vishadada sangati..

Nice one..Keep writing..

ashokkodlady said...

ಹಾಯ್ ಪ್ರವೀಣ್,

ಭಿಕ್ಷಾಟನೆಯ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ. ವಾಹನಗಳಲ್ಲಿ ಹೋಗುತ್ತಿರಬೇಕಾದರೆ ಸಿಗ್ನಲ್ ಗಳಲ್ಲಿ ಸಿಕ್ಕಿಕೊಂಡರೆ ಇದೊಂದು ಹೊಸ ಸಮಸ್ಯೆಯಾಗಿಬಿಟ್ಟಿದೆ, ಒಬ್ಬರಿಗೆ ಕಾಸು ಕೊಟ್ಟರೆ ಹಿಂದೆ ಹಿಂದೆ ಬರುವ ಇನ್ನು ಕೆಲವು ಭಿಕ್ಷುಕರು, ಒಟ್ಟಾರೆ ಇದೊಂದು ಒಂದು ಕಾಟವಾಗಿ ಬಿಟ್ಟಿದೆ. ಚಿಕ್ಕ ಮಕ್ಕಳನ್ನು ಬಗಲಿನಲ್ಲಿ ಇಟ್ಟುಕೊಂಡು ಅವುಗಳನ್ನು ಬಲವಂತವಾಗಿ ಅಳುವಂತೆ ಮಾಡಿ ಭಿಕ್ಷೆ ಬೇಡುವ ಮಹಿಳೆಯರನ್ನು ನೋಡಿ ಕೋಪದ ಜೊತೆಗೆ ಕರುಣೆಯು ಮೂಡುತ್ತದೆ. ಇದೊಂದು ಸಾಮಾಜಿಕ ಸಮಸ್ಯೆಯಾಕಿಬಿಟ್ಟಿದೆ.

ನಿಮ್ಮ ಕವನ ತುಂಬಾ ಅರ್ಥಪೂರ್ಣವಾಗಿದೆ, ಕವನದ ಮೂಲಕ ಚೆನ್ನಾಗಿ ಭಿಕ್ಸುಕರನ್ನು ವರ್ಣಿಸಿದ್ದೀರಿ. ಜೊತೆಗೆ ವೀಡಿಯೊ ನು ಚೆನ್ನಾಗಿದೆ. ಉತ್ತಮ ಬರಹ ಇಷ್ಟ ಆಯಿತು.

prabhamani nagaraja said...

ಭಿಕ್ಷುಕರ ಸಮಸ್ಯೆಯ ವಿವಿಧ ಮುಖಗಳನ್ನು ತೆರೆದಿಟ್ಟ ಚಿ೦ತನ ಯೋಗ್ಯ ಲೇಖನ. ಬಹಳ ಚೆನ್ನಾಗಿ ಬರೆದಿದ್ದೀರಿ. ಧನ್ಯವಾದಗಳು. ನನ್ನ ಬ್ಲಾಗ್ ಗೆ ಒಮ್ಮೆ ಭೇಟಿ ಕೊಡಿ.

ಕವಿತೆ said...

ರೋಡ್ ಕ್ರಾಸಿಂಗ್ ಸೇತುವೆಯ ತುಕ್ಕು ಹಿಡಿದ ಮಡಟ್ಟಿಲಿನ ಮೇಲೆ ಕುಂತು ಕೈಚಾಚುತ್ತಾ ಮೊಲೆಯೂಡಿಸಿದ ಆ ಮಹಾ ತಾಯಿ ಮಗುವಿನ ಮೈತುಂಬಾ ಭಿಕ್ಷಾಟನೆಯ ಗುಣವನ್ನೇ ತುಂಬಿದಳಾ...? ಯಾಕೋ ಮೊದಲ ಬಾರಿಗೆ ಹುಬ್ಬಳ್ಳಿಗೆ ಕಾಲಿಟ್ಟಾಗ ಹಾಗನಿಸಿಬಿಟ್ಟಿತ್ತು.ಮೆಟ್ಟಿಲಿಳಿದು ಕೊಂಚ ಮುಂದೆ ಸಾಗಿದೊಡನೆಯೇ ಹತ್ತಾರು ಹುಡುಗರ ದಂಡು ಬಂದು ಒಂದು ರೂಪಾಯಿಗಾಗಿ ಮುತ್ತಿಗೆ ಹಾಕಿತ್ತು... ಕೊಡಲೋ ಬೇಡವೋ ಗೊಂದಲ...ಕೊಟ್ಟೆ.
ಅದೇ ದಿನ ಸಂಜೆ ಪತ್ರಿಕೆಯಲ್ಲೊಂದು ಬ್ರೇಕಿಂಗ್ ನ್ಯೂಸ್, ಈ ಭಿಕ್ಷುಕಿ ಮೂರಂತಸ್ಥಿನ ಮನೆಯೊಡತಿ!
ದಾಳಿ ನಡೆಸಿದ ಪೋಲಿಸರು ದಾಖಲೆಗಳನ್ನು ಕೆದಕಿದಾಗ ಇಪ್ಪತ್ತು ಲಕ್ಷಕ್ಕೂ ಹೆಚ್ಚಿನ ಕೈ ಸಾಲ ನೀಡಿದ್ದಾಳೆ ಆಕೆ!
ಹೀಗಿರುವಾಗಲೂ ಅವಳ ದಿನ ನಿತ್ಯದ ಕಾಯಕ... ಭವತಿ ಭಿಕ್ಷಾಂದೇಹಿ!!!!


ಏನನ್ನೋಣ ಪ್ರವೀಣ್ ಇದಕ್ಕೆ?

ನಾಗರಾಜ್ ವೈದ್ಯ.// ಎನ್ವೀ ವೈದ್ಯಹೆಗ್ಗಾರ್. said...

ರೋಡ್ ಕ್ರಾಸಿಂಗ್ ಸೇತುವೆಯ ತುಕ್ಕು ಹಿಡಿದ ಮಡಟ್ಟಿಲಿನ ಮೇಲೆ ಕುಂತು ಕೈಚಾಚುತ್ತಾ ಮೊಲೆಯೂಡಿಸಿದ ಆ ಮಹಾ ತಾಯಿ ಮಗುವಿನ ಮೈತುಂಬಾ ಭಿಕ್ಷಾಟನೆಯ ಗುಣವನ್ನೇ ತುಂಬಿದಳಾ...? ಯಾಕೋ ಮೊದಲ ಬಾರಿಗೆ ಹುಬ್ಬಳ್ಳಿಗೆ ಕಾಲಿಟ್ಟಾಗ ಹಾಗನಿಸಿಬಿಟ್ಟಿತ್ತು.ಮೆಟ್ಟಿಲಿಳಿದು ಕೊಂಚ ಮುಂದೆ ಸಾಗಿದೊಡನೆಯೇ ಹತ್ತಾರು ಹುಡುಗರ ದಂಡು ಬಂದು ಒಂದು ರೂಪಾಯಿಗಾಗಿ ಮುತ್ತಿಗೆ ಹಾಕಿತ್ತು... ಕೊಡಲೋ ಬೇಡವೋ ಗೊಂದಲ...ಕೊಟ್ಟೆ.
ಅದೇ ದಿನ ಸಂಜೆ ಪತ್ರಿಕೆಯಲ್ಲೊಂದು ಬ್ರೇಕಿಂಗ್ ನ್ಯೂಸ್, ಈ ಭಿಕ್ಷುಕಿ ಮೂರಂತಸ್ಥಿನ ಮನೆಯೊಡತಿ!
ದಾಳಿ ನಡೆಸಿದ ಪೋಲಿಸರು ದಾಖಲೆಗಳನ್ನು ಕೆದಕಿದಾಗ ಇಪ್ಪತ್ತು ಲಕ್ಷಕ್ಕೂ ಹೆಚ್ಚಿನ ಕೈ ಸಾಲ ನೀಡಿದ್ದಾಳೆ ಆಕೆ!
ಹೀಗಿರುವಾಗಲೂ ಅವಳ ದಿನ ನಿತ್ಯದ ಕಾಯಕ... ಭವತಿ ಭಿಕ್ಷಾಂದೇಹಿ!!!!


ಏನನ್ನೋಣ ಪ್ರವೀಣ್ ಇದಕ್ಕೆ?
- ನಾಗರಾಜ್ ವೈದ್ಯ

Venkatakrishna.K.K. said...

ಚಿ೦ತನ ಯೋಗ್ಯ ಲೇಖನ. ಬಹಳ ಚೆನ್ನಾಗಿ ಬರೆದಿದ್ದೀರಿ. ಧನ್ಯವಾದಗಳು

ಚುಕ್ಕಿಚಿತ್ತಾರ said...

chintanege hachchuva lekhana...

ಪ್ರವೀಣ್ ಭಟ್ said...

Hi Sunath sir,

Yes .. Dodda dodda jalave ide. monne nanna friends heltha idru. magunu kooda rent ge tandu bhikshe bedtare anta.. yes.. bhikshukara veshadalli bhayotpadane kooda nedita ide.. rajakeeya preritavoo agirabahudu..

Nanna blog ge swagatha barta iri heege..

Dhanyavaada
Pravi

ಪ್ರವೀಣ್ ಭಟ್ said...

Hi Praveen..

hmm estu karunajanaka katheyallava Bhikshukara punarvasati kendradalli.. jeeva ulisikollalu odi hoguva paristiti.. haage alliya adhikarigale bhikshege kaluhista iddaru anno maatu ide..

Dhanyavada sir.

Pravi

ಪ್ರವೀಣ್ ಭಟ್ said...

Hi dinakar sir..

Hmm estestu gattiyiruvavaru bhikshe beduttare.. nanu avara kade tirugiyu noduvudilla.. adare kailagadavaru mudukaru bandare neevu helidante kisege kai hoguttade. abhiprayakke dhanyavaada

pravi

ಪ್ರವೀಣ್ ಭಟ್ said...

Hi Ajaad sir..

Dhanyavaadagalu... dina bussalli bartha nodta idde.. haage a video nodidaga baribeku annistu... illi asali bhikshukaru ardakkinta kammiye.. ella nakaligale..

Pravi

ಪ್ರವೀಣ್ ಭಟ್ said...

Hi Ammu,

Yes.. yaru asliyo yaru nakaliyo.. yarige bhikshatane anivaryavo.. adara hinde est jana iddaro. devare balla..

Dhanyavada.. heege barta iri..

ಪ್ರವೀಣ್ ಭಟ್ said...

Chetanakka..

Sumara dina admele blog kade bainde..

ella easy yagi duddu madoke hogta.. adke arogyavantaru iliyadu.. kelvond bhikshukaru erderdu mane kattisidvada 1 moolada prakara.. bhikshe bedine. ist labha irakidre yar bidta alda.. navu kodakodre nodakku..

Dhanyavaada

Pravi

ಪ್ರವೀಣ್ ಭಟ್ said...

Hi Ashok,

Erde matinalli bhikshukaru enen madtare anta helidri.. yes. obbarige kottare.. nalkaidu hudugarantu hindene iratare..

Dhanyavaada nimma abhiprayakke

Pravi

ಪ್ರವೀಣ್ ಭಟ್ said...

Hi prabhamani ..

DhanyavadagaLu.. nimma blogige Bheti kodalu horate eega alli siguva..

Pravi

ಪ್ರವೀಣ್ ಭಟ್ said...

Hi Vaidyare...

Yes nanu keliddeeni odiddeni ee matanna.. illi haraku angiyali kolaku maiyalli bhikshe beduvavaru.. eraderadu bangale kattisiddare.. idu sulabhadalli duddu maduva vidana.. atmabhimana iddoru yaru ee reethi madolla. avaranna tiddo javabdari namma melu ide...

nimma udaharane chennagide...

Dhanyavada
Pravi

ಪ್ರವೀಣ್ ಭಟ್ said...

Hi Venkatakrishna sir

Swagatha nanna blog ge.. dhanyavaada nimma abhiprayakke..


.. chukki chittara..

DhanyavvadagaLu nimma abhiprayakke..

Pravi