Monday, September 14, 2009

ನನ್ನವಳ ರಕ್ಷಣೆ ನನ್ನ ಹೊಣೆ :)

ಮಳೆಯೇ ನೀ ಮರೆಯಾಗು
ನನ್ನವಳು ನೆಂದಾಳು
ಬಿಸಿಲೆ ನೀ ಬದಿಗೋಗು
ನನ್ನವಳು ಬೆಂದಾಳು

ಬಿರುಗಾಳಿ ಬೀಸದಿರು
ನಿನ್ನಬ್ಬರವಿನ್ನು ಸಾಕು
ತಂಗಾಳಿ ಬಳಿಸಾಗು
ನನ್ನವಳ ಮುಖ ಸೋಕು

ಚಂದಿರನೆ ಚಲಿಸದಿರು
ಬೆಳದಿಂಗಳಲಿ ನಿಂತಿಹಳು ನನ್ನವಳು
ಮೋಡಗಳೇ, ಮರೆಸದಿರಿ ಚಂದಿರನ
ಚೆದುರೀತು ನನ್ನವಳ ಕನಸುಗಳು

5 comments:

Manju M Doddamani said...

"ಪ್ರೀತಿಸಿದರೆ ಸಾಲದು ಆ ಪ್ರೀತಿನ ರಕ್ಷಿಸಿ ಬೆಳಸ ಬೇಕು ಅದೇ ನಮ್ಮ ಪ್ರೀತಿ ಮೇಲೆ ನಾವು ಇಡಬೇಕಾದ ಹೊಣೆ"
ಅನ್ನೋ ಒಂದು ಸುಂದರ ಸಂದೇಶವನ್ನ ಈ ಕವಿತೆಯಲ್ಲಿ ಸುಗಸಾಗಿ ಕಟ್ಟಿ ಹಾಕಿದ್ದೀರ ತುಂಬಾ ಚನ್ನಾಗಿದೆ

ಇಂತಿ ನಿಮ್ಮ
"ದೊಡ್ಡಮನಿ.ಮಂಜು"

Manjunath said...

ತುಂಬಾ ಚೆನ್ನಾಗಿ ಬರಿತಿಯಾ ಪ್ರವೀಣ...
ಆರ್ಕುಟ್ಅಲ್ಲಿ ನಿನ್ನ ಬ್ಲಾಗ್ ಲಿಂಕ್ ಸಿಕ್ತು ... ಎಲ್ಲ ಕವಿತೆಗಳು ತುಂಬಾ ಚೆನ್ನಾಗಿವೆ .. ಹೀಗೆ ಬರೀತಾ ಇರು ...

Ranjita said...

tumba chennagide rakshane mado reei ... heege barita iri :)

Dileep Hegde said...

ಆಹಾ... ತುಂಬಾ ಚೆನ್ನಾಗಿ ಬರೆದಿದ್ದೀರಾ ಪ್ರವೀಣ್...

"ಮೋಡಗಳೇ, ಮರೆಸದಿರಿ ಚಂದಿರನ
ಚೆದುರೀತು ನನ್ನವಳ ಕನಸುಗಳು"

ಸುಂದರ ಸಾಲುಗಳು... ನಿಜಕ್ಕೂ ನಿಮ್ಮವಳ ರಕ್ಷಣೆಗೆ ಕಟಿಬದ್ದರಾಗೆ ನಿಂತಿದ್ದೀರಾ... ಇಷ್ಟವಾಯ್ತು...

ದಿಲೀಪ್ ಹೆಗಡೆ

Ashok.V.Shetty, Kodlady said...

ನಾವು ಯಾರನ್ನು ಪ್ರೀತಿ ಸುತ್ತೆವೋ ಅವರ ರಕ್ಷಣೆ ಮಾಡಬೇಕಾದದ್ದು ನಮ್ಮ ಕರ್ತವ್ಯ...ನೀವು ಮಾಡ್ತಾ ಇರೋ ರೀತಿ ಅದ್ಭುತವಾಗಿದೆ ...ಪ್ರವೀಣ್ ವೆರಿ ನೈಸ್....