ಸಂಪದ ಸಾಲು ಪತ್ರಿಕೆಯ ಈ ತಿಂಗಳ ಕವನ
ಮಳೆಯೆಂದರೇನು ಮಳ್ಳೇ?
ನಲ್ಲೆ
ಅದು ಜೊತೆ ಹರಿದ ನೆನಪ ಹೊಳೆ
ಮಳೆಯೆಂದರೇನು ಮಳ್ಳೇ?
ಮಲ್ಲೆ
ಅದು ನೀ ಹರಡಿದ ಕಂಪ
ಕಳೆ
ಮಳೆಯೆಂದರೇನು ಮಳ್ಳೇ?
ಕಬ್ಬ ಜಲ್ಲೆ
ಅಗೆದಷ್ಟೂ ಮುಗಿಯದ
ಸವಿಯ ಸೊಳೆ
ಮಳೆಯೆಂದರೇನು ಮಳ್ಳೇ ?
ಕೇಳೇ
ಜೊತೆಯಿರದಿರೆ ನೀ, ಬದುಕು
ಸುಳ್ಳೇ !
ಮಳೆಯೆಂದರೇನು ಮಳ್ಳೇ?
ಪ್ರೀತಿಯಲ್ಲೇ
ತೊಳೆಯುತಿದೆ ಮನದ
ಕೊಳೆ
ಮಳೆಯೆಂದರೇನು ಮಳ್ಳೇ?
ನೀ ಏನ ಬಲ್ಲೆ
ಬಾ ಬೇಗ ಸವಿಯಬೇಕದನ
ನಿನ್ನ ಜೊತೆಯಲ್ಲೇ !
(ಚಿತ್ರ ಕೃಪೆ ಅಂತರ್ಜಾಲ )
7 comments:
ಮಳೆಯೆಂದರೇನು ಮಳ್ಳೇ?
ನಲ್ಲೆ
ಅದು ಜೊತೆ ಹರಿದ ನೆನಪ ಹೊಳೆ
ಮಳೆಯೆಂದರೇನು ಮಳ್ಳೇ?
ಮಲ್ಲೆ
ಅದು ನೀ ಹರಡಿದ ಕಂಪ ಕಳೆ
ತುಂಬಾ ಚಂದದ ಸಾಲುಗಳು....
ಚಂದದ ಕವನ...ಇಷ್ಟವಾಯ್ತು
ಮಳೆಯ ಸಾಲುಗಳ ಚಂದದ ಕವನ ಇಷ್ಟ ಆಯ್ತು :)ilt
maLeya kavanada jte chalisuva chitra chennaagittu...
ಮಳೆಯೆಂದರೇನು ಮಳ್ಳೆ?
ಅದು ಪ್ರವೀಣಕವನದ ಸೋನೆ!
ಅಗೆದಷ್ಟೂ ಮುಗಿಯದ ಸವಿಯ ಸೊಳೆ
ಎನ್ನುವಂತಿದೆ ಈ ಕಾವ್ಯ ಚುಂಬನ.
ನಾವೆಲ್ಲ ಒದ್ದೆ ಒದ್ದೆ...
http://badari-poems.blogspot.in
ಮಳೆಯೆಂದರೇನು ಮಳ್ಳೇ?
ನಲ್ಲೆ
ಅದು ಜೊತೆ ಹರಿದ ನೆನಪ ಹೊಳೆ
ಬಾ ಬೇಗ ಸವಿಯಬೇಕದನ ನಿನ್ನ ಜೊತೆಯಲ್ಲೇ !
ಜೊತೆಯಲ್ಲಿ ಸವಿಯಕೆನ್ನುವ ಹಂಬಲ ಹಿತವಾಗಿದೆ.
ಇಷ್ಟಕ್ಕೂ ಮಳೆ ಅಂದ್ರೇನು ಮಾರಾಯ ಕೊನೆಗೆ..?? ;) ;)
Post a Comment