Wednesday, August 7, 2013

ನಿನ್ನ ಬಯಸುವ ಮಳೆ !

 ಸಂಪದ ಸಾಲು ಪತ್ರಿಕೆಯ  ಈ ತಿಂಗಳ ಕವನ 



ಮಳೆಯೆಂದರೇನು ಮಳ್ಳೇ?
ನಲ್ಲೆ
ಅದು ಜೊತೆ ಹರಿದ ನೆನಪ ಹೊಳೆ
ಮಳೆಯೆಂದರೇನು ಮಳ್ಳೇ?
ಮಲ್ಲೆ
ಅದು ನೀ ಹರಡಿದ ಕಂಪ ಕಳೆ

ಮಳೆಯೆಂದರೇನು ಮಳ್ಳೇ?
ಕಬ್ಬ ಜಲ್ಲೆ
ಅಗೆದಷ್ಟೂ ಮುಗಿಯದ ಸವಿಯ ಸೊಳೆ
ಮಳೆಯೆಂದರೇನು ಮಳ್ಳೇ ?
ಕೇಳೇ
ಜೊತೆಯಿರದಿರೆ ನೀ, ಬದುಕು ಸುಳ್ಳೇ !

ಮಳೆಯೆಂದರೇನು ಮಳ್ಳೇ?
ಪ್ರೀತಿಯಲ್ಲೇ
ತೊಳೆಯುತಿದೆ ಮನದ ಕೊಳೆ
ಮಳೆಯೆಂದರೇನು ಮಳ್ಳೇ?
ನೀ ಏನ ಬಲ್ಲೆ
ಬಾ ಬೇಗ ಸವಿಯಬೇಕದನ ನಿನ್ನ ಜೊತೆಯಲ್ಲೇ !

(ಚಿತ್ರ ಕೃಪೆ ಅಂತರ್ಜಾಲ )

7 comments:

ಕನಸು ಕಂಗಳ ಹುಡುಗ said...

ಮಳೆಯೆಂದರೇನು ಮಳ್ಳೇ?
ನಲ್ಲೆ
ಅದು ಜೊತೆ ಹರಿದ ನೆನಪ ಹೊಳೆ
ಮಳೆಯೆಂದರೇನು ಮಳ್ಳೇ?
ಮಲ್ಲೆ
ಅದು ನೀ ಹರಡಿದ ಕಂಪ ಕಳೆ

ತುಂಬಾ ಚಂದದ ಸಾಲುಗಳು....
ಚಂದದ ಕವನ...ಇಷ್ಟವಾಯ್ತು

Unknown said...

ಮಳೆಯ ಸಾಲುಗಳ ಚಂದದ ಕವನ ಇಷ್ಟ ಆಯ್ತು :)ilt

ದಿನಕರ ಮೊಗೇರ said...

maLeya kavanada jte chalisuva chitra chennaagittu...

sunaath said...

ಮಳೆಯೆಂದರೇನು ಮಳ್ಳೆ?
ಅದು ಪ್ರವೀಣಕವನದ ಸೋನೆ!

Badarinath Palavalli said...

ಅಗೆದಷ್ಟೂ ಮುಗಿಯದ ಸವಿಯ ಸೊಳೆ
ಎನ್ನುವಂತಿದೆ ಈ ಕಾವ್ಯ ಚುಂಬನ.
ನಾವೆಲ್ಲ ಒದ್ದೆ ಒದ್ದೆ...
http://badari-poems.blogspot.in

Vinayak Bhagwat said...

ಮಳೆಯೆಂದರೇನು ಮಳ್ಳೇ?
ನಲ್ಲೆ
ಅದು ಜೊತೆ ಹರಿದ ನೆನಪ ಹೊಳೆ
ಬಾ ಬೇಗ ಸವಿಯಬೇಕದನ ನಿನ್ನ ಜೊತೆಯಲ್ಲೇ !

ಜೊತೆಯಲ್ಲಿ ಸವಿಯಕೆನ್ನುವ ಹಂಬಲ ಹಿತವಾಗಿದೆ.

ಸತೀಶ್ ನಾಯ್ಕ್ said...

ಇಷ್ಟಕ್ಕೂ ಮಳೆ ಅಂದ್ರೇನು ಮಾರಾಯ ಕೊನೆಗೆ..?? ;) ;)