Thursday, February 18, 2010

ಸಾವಿನತ್ತ

















ನವ್ಯ ಶೈಲಿಯಲ್ಲೊಂದು ಕವನ ..




almost ಯಾರೂ ಸುಳಿಯದ
ಹಾದಿಯ ಬದಿಯ ಮರ ನಾನು
ಏಕಾಂಗಿ,ಸುತ್ತ ಬರೀ ಬೋಳುಗುಡ್ಡ
ಜೊತೆಯಿರುವುದು ಒಂದೆರಡು ಎಲೆ
ನಾಲ್ಕೈದು ಟೊಂಗೆ ,ಕುಟುಕು ಜೀವ
ಶಿಶಿರದ ಹಂಗಿಲ್ಲ ವಸಂತದ ಗುಂಗಿಲ್ಲ !!
ಬೇರುಗಳು ನೀರನ್ನರಸುತ್ತ ಹೊರಟಿವೆ
ಆದರೆ ಅವೂ ನನ್ನಷ್ಟೆ ದುರ್ಬಲ
ತಲುಪಲಾರವೇನೋ ಜಲ
ಬಿರು ಬಿಸಿಲು,ನನ್ನ ಬುಡಕ್ಕೇ ನೆರಳಿಲ್ಲ
ಬೇರೆಯವರಿಗೆ ದೂರದ ಮಾತು !!
ನೀರೆರೆಯುವರನ್ನಂತೂ ನಾ ಕಾಣೆ
ಆಗೊಮ್ಮೆ ಈಗೊಮ್ಮೆ ನಾಯಿ ಕಾಲೆತ್ತಿದ್ದಷ್ಟೆ!!
ಅಪರೂಪಕ್ಕೆ ಮನುಷ್ಯರೂ !!
ಆದರೂ ಏನೋ ಆಸೆ
ಒಂದೆರಡು ಹನಿ ಮಳೆ ಬರಬಹುದು
ಬೇರುಗಳು ಎಲ್ಲಾದರೂ ಜಲ ಸೇರಿಯಾವು...
ಮೋಡವೇ ಇಲ್ಲದ ಬಾನಿನಲ್ಲಿ
ಸೂರ್ಯ ಕಿಸಕ್ಕನೇ ನಕ್ಕಿದ್ದ,ನಗುತ್ತಲೇ ಇದ್ದಾನೆ
ಜೀವವೇ ಇಲ್ಲದ ಬೇರುಗಳು ಸಾಯಲು
ರೆಡಿಯಾಗಿದ್ದವು ನನ್ನಂತೆ !!
ಅಮರನಲ್ಲ ನಾನು ಮರ !!!

ಪ್ರೀತಿಯಿಂದ ಪ್ರವಿ

11 comments:

ಚುಕ್ಕಿಚಿತ್ತಾರ said...

nice poem .....

Ranjita said...

ಭಾವಗಳ ಜೊತೆ ಶಬ್ದಗಳ ಬಳಕೆ ಸಕ್ಕತ್ತಾಗಿದೆ .. ಓದೋವಾಗ ಬೇರುಗಳ ಆಳಕ್ಕೆ ಇಳಿದಂತಗಿತ್ತು ತುಂಬಾ ಚೆನ್ನಾಗಿದೆ ಪ್ರವೀಣ್

ಮನಸಿನ ಮಾತುಗಳು said...

soooper.!!!.......... :)

Anonymous said...

sakkattagiddu..mostly namma kade mara adu..:p

Manju M Doddamani said...

ಹೊಸ ಶೈಲಿಯಲ್ಲಿ ಸುಂದರಾವಾಗಿ ಮೂಡಿ ಬಂದಿದೆ !

Ashok.V.Shetty, Kodlady said...

ಹೊಸ ಶೈಲಿಯ ಸುಂದರ ಕವನ...ತುಂಬಾ ತುಂಬಾ ಹಿಡಿಸಿತು ಪ್ರವೀಣ್ ...ಭಾವಪೂರ್ಣ, ಅರ್ಥಪೂರ್ಣ ಕವನ,
ನೀರೆರೆಯುವರನ್ನಂತೂ ನಾ ಕಾಣೆ
ಆಗೊಮ್ಮೆ ಈಗೊಮ್ಮೆ ನಾಯಿ ಕಾಲೆತ್ತಿದ್ದಷ್ಟೆ!!
ಸಾಲುಗಳು ಸುಪರ್ಬ್....

ಸಾಗರದಾಚೆಯ ಇಂಚರ said...

ಶೈಲಿಯಲ್ಲಿ ಬಿನ್ನತೆಯಿದೆ
ಫೋಟೋಗಳು ಸೇರಿ ಕವನಕ್ಕೆ ಒಂದು ಹೊಸ ರೂಪ ನೀಡಿದೆ

Amrathananda Shetty said...

chennagide maga....:-)

ಸ್ನೇಹಾ said...

ಬಿರು ಬಿಸಿಲು,ನನ್ನ ಬುಡಕ್ಕೇ ನೆರಳಿಲ್ಲ
ಬೇರೆಯವರಿಗೆ ದೂರದ ಮಾತು !!
ನೀರೆರೆಯುವರನ್ನಂತೂ ನಾ ಕಾಣೆ
ಆಗೊಮ್ಮೆ ಈಗೊಮ್ಮೆ ನಾಯಿ ಕಾಲೆತ್ತಿದ್ದಷ್ಟೆ!!
ಅಪರೂಪಕ್ಕೆ ಮನುಷ್ಯರೂ !!

ಸಖ್ಖತ್ತಾಗಿ ಬಂದಿದೆ...!! :)

ಪ್ರವೀಣ್ ಭಟ್ said...

ಪ್ರೋತ್ಸಾಹಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು..

ಪ್ರೋತ್ಸಾಹ ನಿರಂತರವಾಗಿರಲಿ..



ಹ್ಮ್ಮ್ ಚೇತನಕ್ಕ, ನಮ್ ಕಡೆ 1 ಮರ ನೋಡಿಯೇ ಈ ಕವನ ಹುಟ್ಟಿದ್ದು :)


ಪ್ರವಿ

bharadwaj said...

ತುಂಬಾ ಚೆನ್ನಾಗಿದೆ ಪ್ರವೀಣ್