Tuesday, October 29, 2013

ನಾ ಕವಿಯಲ್ಲ !





























ನಾ ಕವಿಯಲ್ಲ 

ತೋಚಿದ ಗೀಚುತ್ತೇನೆ
ಪ್ರಾಸ ಹಾಕಿ
ಉಳಿಯಬಾರದಲ್ಲ ಭಾವಗಳು
ಹಾಗೆ ಬಾಕಿ !

ನಾ ಕವಿಯಲ್ಲ 
ನೀ ಬಾಚಿಕೊಟ್ಟ ಪ್ರೀತಿಯೆಲ್ಲಾ 
ಇಲ್ಲಿ ಕವನ 
ಒಣ ನೆಲದಲ್ಲೂ , ಮನದಲ್ಲೂ 
ಹಸಿರ ವನ !

ನಾ ಕವಿಯಲ್ಲ
ಎಲ್ಲ ಸಿಕ್ಕರೆ ಬಾಳು ನಕ್ಕರೆ
ಕವನದಲ್ಲೂ ಸಕ್ಕರೆ 
ನಲ್ಲೆ  ನೀನು ತೊರೆದರೆ
ಬರಹದಲ್ಲೂ ತೊಂದರೆ 
ಕಹಿಯೇ ಅಲ್ಲೂ , ನಾ  ಖರೆ

ನಾ ಕವಿಯಲ್ಲ
ಭಾವನೆ ಉಕ್ಕಿದಾಗ 
ಲೇಖನಿ ಬಿಕ್ಕುತ್ತದೆ 
ದುಃಖಕ್ಕೆ ಹರಿದದ್ದು ಕಣ್ಣೀರು
ಮತ್ತು ಖುಷಿಗೆ ಪನ್ನೀರು !

................................. ಪ್ರೀತಿಯಿಂದ ಪ್ರವಿ 

(ಸಂಪದ ಸಾಲು ಪತ್ರಿಕೆಯ ಈ ತಿಂಗಳ ಕವನ ) 


7 comments:

ಸಂಧ್ಯಾ ಶ್ರೀಧರ್ ಭಟ್ said...

ಯಾರಂದಿದ್ದು ನೀ ಕವಿಯಲ್ಲ ಅಂತ ? ಕವಿಯಲ್ಲ ಕವಿಯಲ್ಲ ಎನ್ನುತ್ತಲೇ ಚಂದದೊಂದು ಕವಿತೆ ಕಣ್ಮುಂದೆ ..:)

ಮಂಜಿನ ಹನಿ said...

ಭಾವನೆ ಉಕ್ಕಿದಾಗ
ಲೇಖನಿ ಬಿಕ್ಕುತ್ತದೆ
ದುಃಖಕ್ಕೆ ಹರಿದದ್ದು ಕಣ್ಣೀರು
ಮತ್ತು ಖುಷಿಗೆ ಪನ್ನೀರು !
ಈ ಸಾಲುಗಳು ಕಾವ್ಯಕ್ಕೆ ಎಳೆದು ಕೂರಿಸುವಂತವು. ಚೆಂದದ ಕವನ. ಸರಳ ಪದಗಳು ಚೇತೋಹಾರಿಯಾಗಿ ಲಾಸ್ಯವಾಡಿವೆ :)

- ಪ್ರಸಾದ್.ಡಿ.ವಿ.

sunaath said...

ನೀವು ನೂರಕ್ಕೆ ನೂರರಷ್ಟು ಕವಿ ಎಂದು ನಿಮ್ಮ ಕವನವೇ ಸಾರುತ್ತದೆ!

Badarinath Palavalli said...

'ನಲ್ಲೆ ನೀನು ತೊರೆದರೆ
ಬರಹದಲ್ಲೂ ತೊಂದರೆ'

ನಿಜ ನಿಜ...

ಸತೀಶ್ ನಾಯ್ಕ್ said...

Very nice ley.. :)

Unknown said...

ಬರವಣಿಗೆಯ ಶೈಲಿ ಮೆಚ್ಚುಗೆಯಾಯಿತು...

Unknown said...

ಬರವಣಿಗೆಯ ಶೈಲಿ ಮೆಚ್ಚುಗೆಯಾಯಿತು...