Thursday, June 6, 2013

ವ್ಯರ್ಥ !

ಸಂಪದ ಸಾಲಿನ ಈ ತಿಂಗಳ ಕವನ !

ಚಿತ್ರ-- ಅಂತರ್ಜಾಲ !





ಬೆಳಕೇನೋ ಬಂತು 
ಬೆಳಗಾದ ಮೇಲೆ
ನಿನ್ನ ನೆನಪಂತೆ !
ರಶ್ಮಿ ಸೋಕಲೇ ಇಲ್ಲ
ನಿನ್ನಂತೆ !

ನಿಚ್ಚಳವಾಗಿದ್ದೆ ನೀನು
ಮೋಡವೂ ಮುಸುಕಿರಲಿಲ್ಲ
ಗೋಡೆಯಲ್ಲ ಅಡ್ಡವಿದ್ದದ್ದು 
ಉದ್ದುದ್ದ ಬೆಳೆದ ಗೋಡೆ
ಹೊರ ಬರಲಿಲ್ಲ
ಒಳ ಬಿಡಲಿಲ್ಲ!

ಪೂರ್ವದಲ್ಲಲ್ಲದಿದ್ದರೂ 
ಕೊನೇ ಪಕ್ಷ
ಪಶ್ಚಿಮದಲ್ಲಿರಬೇಕಿತ್ತು 
ಕಿಟಕಿ!
ಮುಳುಗುವಾಗಲಾದರೂ
ಮುಖ ತೋರುತ್ತಿದ್ದೆಯೇನೋ
ಇಣುಕಿ !

ಉತ್ತರ ದಕ್ಷಿಣದಲ್ಲಿ
ಕಿಟಕಿಯಿಟ್ಟಿದ್ದು 
ವ್ಯರ್ಥವೆಂದು ಅರಿವಾದಾಗ
ಕತ್ತಲಾಗಿತ್ತು !

.. ಪ್ರವೀ... 

7 comments:

ಸಂಧ್ಯಾ ಶ್ರೀಧರ್ ಭಟ್ said...

Good one..!!! ishtavaaytu... :)

Shadakshari said...

As usual, ending note is solid.

- Shadakshari.

ಜೆ.ವಿ.ಎಮ್.ನಾಯ್ಡು said...

ಮದುವೆಗೆ ಮುಂಚೆ ನಿಮ್ಮ ವಾಸ್ತು ಮತ್ತು ಮನೆ ವಾಸ್ತು ಎರಡನ್ನು ಸರಿಮಾಡಿಕೊಳ್ಳಬೇಕಿತ್ತು ಸರ್ ! ಈ ರೀತಿಯ ವಿರಹವೇದನೇ ಆಗ ಇರುತ್ತಿರಲಿಲ್ಲ ಅಲ್ಲವೇ.... ಕವನ ತುಂಬಾ ಚೆನ್ನಾಗಿದೆ.. ಭಾವನೆಗಳನ್ನು ವಿಭಿನ್ನ ಶೈಲಿಯ ಪದಗಳಲ್ಲಿ ಹಿಡಿದಿಟ್ಟಿದ್ದೀರಿ.... ಕೊನೆ ಸಾಲುಗಳಂತು ಇಡಿ ಕವನದ ವಿರಹವನ್ನು ತಿಳಿಸುತ್ತದೆ.... ಬ್ಲಾಗ್ ಕೂಡ ತುಂಬಾ ಚೆನ್ನಾಗಿದೆ..

Badarinath Palavalli said...

ಬಯಸುವುದು ದಕ್ಕುವುದೇ ಇಲ್ಲ ಎನ್ನುವುದು ಇಲ್ಲಿ ಸಾಲು ಸಾಲುಗಳಲ್ಲಿ ಮಿಳಿತವಾಗಿದೆ. ಇದು ನಿಮ್ಮ ಕವಿತೆಯೋ ಅಥವಾ ನಮ್ಮ ಬದುಕಿನ ಕನ್ನಡಿಯೋ ಅರ್ಥವಾಗದಷ್ಟು ನೈಜವಾಗಿದೆ.

sunaath said...

ಪ್ರವೀಣರೆ, ನಿರಾಶೆ ಬೇಡ.
ತಾಳಿದವ ಬಾಳ್ಯಾನು, ಬದುಕಿದವ ಕಂಡಾನು
ಕಾಣಬೇಕಾದಂಥ ಸೊಬಗನೆಲ್ಲ!

ಚಿನ್ಮಯ ಭಟ್ said...

ಚೆನಾಗಿದೆ :)

ದಿನಕರ ಮೊಗೇರ said...


ಎಂಥಹ ಸುಂದರ ಆಸೆ ನಿಮ್ಮದು.... ಹೊಟ್ಟೆಕಿಚ್ಚಾಯ್ತು....
ತುಂಬಾ ಆ ಆ ಆ ಆ ಇಷ್ಟ ಆಯ್ತು....