Friday, November 16, 2012

ಎದ್ದರಷ್ಟೇ ಎದುರಿಸಲು ಸಾಧ್ಯ



ಸಂಪದ ಸಾಲಿನಲ್ಲಿ ಪ್ರಕಟವಾದ ನನ್ನ ಕವನ 

clear ಆಗಿ ಓದಲು ಕೆಳಗೆ ಮತ್ತೆ type ಮಾಡಿದ್ದೀನಿ ಓದಿ 



ಬಲವಿಲ್ಲದವನು
ಬಾಲವೇನೂ....
ಬುಡಕ್ಕಿಟ್ಟರೂ ಅಷ್ಟೇ..
ಲಂಕೆ ಬಿಟ್ಟ
ಹನುಮ ಸುಟ್ಟ
ಭ್ರಷ್ಟ ಸಂತುಷ್ಟ !

ಅಂಡು ತೊಳೆಯಲೂ
ಅಂಡಲೆಯಬೇಕು ಇಲ್ಲಿ !
ಲಂಕೆಯಲ್ಲಿ ಬಾಟಲಿಗಳು
ಸದ್ದು ಮಾಡುತ್ತಿವೆ !

ಹೊಟ್ಟೆಗಿಲ್ಲದೇ ಸತ್ತ
ಹೊಟ್ಟೆ ಹುಳುಗಳ ಮೇಲೆ
ರಾವಣನ ಅರಮನೆ ಮಿರಮಿರ !
ಒಬ್ಬನ ಸಮಾಧಿ
ಇನ್ನೊಬ್ಬನ ಬುನಾದಿ !

ಕೂಳಿಲ್ಲದವನು
ಗೋಳಿಡುತ್ತಿದ್ದಾನೆ !
ಕುಂಭಕರ್ಣನಿಗೆ
ಇನ್ನಾರು ತಿಂಗಳು ನಿದ್ದೆಯಂತೆ !

ರಾಮ ತ್ರೇತಾದಲ್ಲಿ ಇದ್ದನೆಂಬ ಸುದ್ದಿ
ವಿಭೀಷಣನ ವಿಳಾಸ ಸಿಗುತ್ತಿಲ್ಲ !

ಎದ್ದರೆ ಗೆದ್ದೆ
ಬಿದ್ದರೆ ಗುದ್ದೇ ...
ಶಾಯಿ ಬತ್ತಿರುವ ಲೇಖನಿ
ಬದಿಗೊತ್ತಿ
ಬಡ್ಡಾದರೂ ಸರಿ
ಹಿಡಿ ಕತ್ತಿ !

ಮುಂದೊಂದು ದಿನ ರಾವಣ
ಸತ್ತರೂ ಸತ್ತಾನು !

5 comments:

sunaath said...

ಕವನದ ಕೊನೆಯ ಸಾಲುಗಳು ಸ್ಫೂರ್ತಿವತ್ತಾದ ಸಂದೇಶ ನೀಡುತ್ತಿವೆ.

ದಿನಕರ ಮೊಗೇರ said...

ಹೌದು...ಸತ್ತಾನು ರಾವಣ...ಮುಂದಾದರೂ.....
ಚೆನ್ನಾಗಿದೆ ಶೈಲಿ..

nanda hegde said...

ರಾವಣ ವಧೆಯಾಗಲು ರಾಮ ಬೇಕಲ್ಲಾ.ತ್ರೇತಾಯುಗದ ರಾಮನಿಗೂ, ಕಲಿಯುಗದ ರಾಮನಿಗೂ ಕರಾರುವಾಕ್ಕಾದ ವ್ಯತ್ಯಾಸ ಗೊತ್ತಾದರೆ ರಾವಣ ವಧೆಗೆ ರಾಮರನ್ನು ತಯಾರು ಮಾಡಬಹುದು.ಏನೇ ಆದರೂ ರಾವಣವಧೆಯ ಪರಿಕಲ್ಪನಯೇ ಅಭಿನಂದನಾರ್ಹ.ತಮ್ಮನ ಕಲ್ಪನೆ ಛಂದಿದ್ದು.

ಚಿನ್ಮಯ ಭಟ್ said...

ಚೆನ್ನಾಗಿದೆ...ರಾವಣನ ವಧೆ ಆಗಲಿ ಬೇಗ...
ಹೋಲಿಕೆ ಇಷ್ಟವಾಯ್ತು,..
ಬರೆಯುತ್ತಿರಿ...

ನಮಸ್ತೆ...

ಮೌನರಾಗ said...

ಚಂದದ ಕವಿತೆ ಅಣ್ಣಯ್ಯ.. :)