Monday, April 16, 2012

ನೀಡು ಒಪ್ಪಿಗೆ





ನನ್ನ ಗೆಳತಿಯೊಬ್ಬಳು ಮಾತನಾಡುತ್ತಾ "ಅಯ್ಯೋ ನಿನ್ನ ಕವಿ ಭಾಷೆ ನಂಗೆ ಅರ್ಥ ಆಗಲ್ಲ ಕಣೋ" ಅಂದಾಗ ಮೊದಲೆರಡು ಸಾಲು ಹುಟ್ಟಿತು .. ಆಮೇಲೆ ಅದ್ಕೆ ಸ್ವಲ್ಪ ಪದಗಳ ಅಹಾರ ಹಾಕಿ ಬೆಳೆಸಿದೆ ...

ಚೆನ್ನಾಗಾಗಿದ್ದರೆ ಕ್ರೆಡಿಟ್ ಅವಳಿಗೆ ...

ಇಷ್ಟವಾಗದಿದ್ದರೆ ಹೊಣೆ ನಂದೆ ... ಹಾಗಂತ ರಾಜಿನಾಮೆ ಕೊಡುವುದಿಲ್ಲ :):)


ಕಿವಿ ಹಿಡಿದು ಹೇಳಲೇ ಕವಿಭಾಷೆಯ
ನವಿರಾಗಿ ಹೇಳಲೇ ನವ ಭಾವವ
ಸವಿಯಾಗಿ ಹೇಳಲೇ ಸಾವಿರ ಸಂಭ್ರಮ
ಸರಿಯಾಗಿ ಕೇಳೇ ಅದಕೆ ನೀನೇ ಕಾರಣ

ನವಿಲಾಗಿ ನಲಿಯುತಿದೆ ಮನಸು
ಅನುಮತಿ ಕೇಳಿಲ್ಲ ದಯಮಾಡಿ ಕ್ಷಮಿಸು
ಗರಿಗೆದರಿ ಗಗನಮುಖಿ, ತೋರದಿರು ಮುನಿಸು
ಒಲವಾಗಿರಬಹುದೇ.. ನೀನೇ ತಿಳಿಸು

ಬೇಕೇ ಶಿಕ್ಷೆ, ಕಾಯೋ ಪರೀಕ್ಷೆ
ತಪ್ಪಲ್ಲದಾ ತಪ್ಪಿಗೆ..
ಮನಸು ಮನಸಿನಾ ಅಪ್ಪುಗೆ
ಬೇಕು ತಾನೇ ಪ್ರೀತಿಗೆ ?
ಯಾಕೆ ನಿರೀಕ್ಷೆ,ಸಾಕು ಸಮೀಕ್ಷೆ
ಒಮ್ಮೆ,ಒಮ್ಮೆ ನೀಡು ಒಪ್ಪಿಗೆ





13 comments:

Amrath Shetty said...

sooooooooper.... :)

ಈಶ್ವರ said...

Nice one :)

sunaath said...

ಕವನ ಇಷ್ಟವಾಯಿತು. ನನ್ನ ಮೆಚ್ಚುಗೆಯನ್ನು ನಿಮ್ಮ ಗೆಳತಿಗೆ ದಯವಿಟ್ಟು ದಾಟಿಸಿ.

Basu said...
This comment has been removed by the author.
Basu said...

Tumbaane chennagide Praveen..

ವಾಣಿಶ್ರೀ ಭಟ್ said...

nice one praveen:)

kavyadarsha said...

chenagiddu......

shree said...

chennagidhe kano.. nice...

ranju said...

kavana thumba chenagide... good one :)

ಸುಷ್ಮಾ ಮೂಡುಬಿದಿರೆ said...

ಚೆನ್ನಾಗಿದೆ ಸರ್, ಕ್ರೆಡಿಟ್ ಇಬ್ಬರಿಗೂ ಸಲ್ಲುತ್ತದೆ...

ಕಾವ್ಯಾ ಕಾಶ್ಯಪ್ said...

ಅವ್ಳಿಗೆ ತೋರ್ಸು ಕವನಾನ... ಸಿಕ್ಕೀತು ಒಮ್ಮೆ ಒಪ್ಪಿಗೆ...! ;) ಒಳ್ಳೇದಾಗ್ಲಿ.... :)

ತ್ರಿಲೋಚನ ರಾಜಪ್ಪ(Thrilochana Rajappa) said...

ಚೆನ್ನಾಗಿದೆ!

supritha said...

its very nice...