Friday, April 29, 2011

ಕನ್ನಡಿಯೆದುರಿಗೆ ನಿಂತು ..


ನಾ ನಕ್ಕರೆ ನಿನ್ನದೂ
ಅದೇ ಉತ್ತರ
ಅತ್ತರಷ್ಟೇ ನನ್ನೊಂದಿಗೆ
ನೀನು ತತ್ತರ

ಅಳು ನಗು ಚೆಲುವು ಚಿತ್ತಾರ
ಗಂಭೀರ ಗತ್ತು
ಅಲಂಕಾರ,ಅನುಕರಣೆ
ಒಳ ತಿವಿತ ನಿನಗೇನು ಗೊತ್ತು

ಬಲ್ಲೆಯೇನು?
ತಣ್ಣನೆ ನಗುವಿನ ಹಿಂದಿರುವ
ಕುದಿಯುವ ನೋವು
ಹೊಳಪಿನ ನೋಟದ ಹಿಂದಿರುವ
ಕಣ್ಣೀರಿನ ಹರಿವು

ನೀ ಬಿಂಬಿಸಿದ್ದು..
ಪ್ರತಿಬಿಂಬದಲಿ ಮೂಡಿದ್ದು
ಕೇವಲ ನನ್ನ ಬಾಹ್ಯ
ಒಳ ಬಗೆದು ಬಯಲಿಗಿಟ್ಟರೆ
ನೀ ಭರಿಸಲಾಗದ ಅಸಹ್ಯ

ಹೊರಬರಲಾರೆ ನಾನಾಗಿ ನಾ
ಕದಡಬೇಕು ಕಣ್ಣ..
ಇಲ್ಲಾ ಒಡೆಯಬೇಕು ನಿನ್ನ..
ಒಡೆದ ಸಾವಿರ ಚೂರಿನಲ್ಲೂ
ಕಾಣಿಸಿದ್ದು..
ಲಕ್ಷ,ಅಲಕ್ಷ ..ಮುಖವಾಡ

ಪ್ರೀತಿಯಿಂದ ಪ್ರವಿ


10 comments:

sunaath said...

ಓರ್ವ ವ್ಯಕ್ತಿಯ ಒಳಗುದಿ ಹಾಗು ಹೊರಮುಖಗಳನ್ನು ಕನ್ನಡಿಯ ಪ್ರತಿಮೆಯೊಂದಿಗೆ ಬೆಸೆದು, ಸೊಗಸಾಗಿ ಕವನಿಸಿದ್ದೀರಿ.

ವಾಣಿಶ್ರೀ ಭಟ್ said...

chennagide bhavavannu vivarisida reeti.. bareyuttiri

Unknown said...
This comment has been removed by the author.
Unknown said...

ಭಾವನೆಗಳ ನಡುವಿನ ಯುದ್ಧ ಈ ಕವನದಲ್ಲಿ ಚನ್ನಾಗಿ ಮೂಡಿ ಬಂದಿದೆ ಪ್ರವಿ ಒಳ್ಳೆಯ ಕವನ

ದಿನಕರ ಮೊಗೇರ said...

tumbaa chennaagide sir....
ishTa aaytu...

Dileep Hegde said...

ಪ್ರವೀಣ್...
ಹಿಂದಿ ಚಿತ್ರಗೀತೆಯ ಸಾಲೊಂದು ನೆನಪಾಗ್ತಿದೆ.. ಆಯಿನೇ ಕೆ ಸೌ ತುಕಡೆ ಕರ್ಕೆ ಹಮನೇ ದೇಕೆ ಹೈ.. ಏಕ್ ಮೇ ಭಿ ತನ್ಹಾ ತೆ... ಸೌ ಮೇ ಭಿ ಅಕೇಲೇ ಹೈ...
ಹೌದು.. ಕನ್ನಡಿ ನೂರು ಚೂರಾದರೂ ಎಲ್ಲ ಚೂರಲ್ಲೂ ಕಾಣೋದು ಅದೇ... ನಮ್ಮದೇ ಮುಖವಾಡ..

ಕನ್ನಡಿ ತೋರುವುದೆಲ್ಲ ಬರೀ ಬಾಹ್ಯ.. ಅಂತರಂಗದ ಅಸಹ್ಯಗಳನ್ನ ನಾವೇ ಅಗತ್ಯ ಬಂದಾಗ ಹೀಗೆ ಬಗೆದು ತೆಗೆದು ಶುಚಿಗೊಳಿಸಿ ಬಾಹ್ಯ ಜಗತ್ತಿಗೆ ಸಹ್ಯರಾಗೋದೆ ಜೀವನದ ರಹಸ್ಯ..

ಕವನ ತುಂಬಾ ಇಷ್ಟವಾಯ್ತು...

ಕನಸು ಕಂಗಳ ಹುಡುಗ said...

ಸುಂದರ ಸಾಲುಗಳು ಭಾವಗಳು....
ಚನ್ನಾಗಿದೆ ಕನ್ನಡಿಯ ಕವಿತೆ...

V.R.BHAT said...

Nice!

ಶ್ರೀಪಾದು said...

ಕವನ ಕನ್ನಡಿಯಲ್ಲಿ ನಮ್ಮದೇ ಬದುಕಿನ ಭಾವ ಬಿಂಬ :)
ಚನಾಗಿದ್ದು ಪ್ರವೀಣಣ್ಣ

ವೆಂಕಟಕೃಷ್ಣ ಕೆ ಕೆ ಪುತ್ತೂರು said...

oh..ಕನ್ನಡಿ ಬಗ್ಗೆ ನನ್ನದೂ ಒಂದು ಕವನ ಇದೆ.ಓದಿ.
ನಿಮ್ಮ ಕವಿತೆ ಚೆನ್ನಾಗಿದೆ.ಇಷ್ಟವಾಯ್ತು..