Tuesday, March 8, 2011

ಬೆಲೆ ಹೆಚ್ಚಿಸಿಕೊಂಡ ಗಾಂಧಿ ಬಡವನಾದ




ಒಂದು ಎರಡು ಐದು ರೂಪಾಯಿ
ನೋಟಿನಲ್ಲಿದ್ದ ಗಾಂಧೀಜಿ
ಕಳೆದು ಹೋಗಿದ್ದಾನೆ..
ನೋಟಿನೊಂದಿಗೆ....

ನೂರು ಐನೂರು ಸಾವಿರ
ಗಾಂಧಿ ಬೆಲೆ ಏರುತ್ತಿದೆ ಮುಗಿಲೆತ್ತರ
ಬಡವನಿಂದ ಬಹಳ ದೂರ
ಸಿಗದೆ ದೈನೇಸಿಯಾಗಿ ಕೈ ಚಾಚಿದವನು
ಗೊಣಗುತ್ತಿದ್ದಾನೆ..
"
ನೋಟಿಗೆ ಬರುವುದಕ್ಕೂ ಮೊದಲು
ನಮ್ಮವನಾಗಿದ್ದನಿವ ... "

ಕಟ್ಟು ಕಟ್ಟು ನೋಟಿನಲ್ಲಿ
ಕಟ್ಟಿ ಹಾಕಲಾಗಿದೆ..
ಬದಲಾದ ಕೈಗಳೆಷ್ಟೋ..
ಬಳಸಿ ಬಳಲಿಸಿದವರೆಷ್ಟೋ...
ಅದೇ ಹಳೇ ಸೋಡಾ ಗ್ಲಾಸಿನಲ್ಲಿ
ಸುಮ್ಮನೆ ನೋಡುತ್ತಿದ್ದಾನೆ
ದೃಷ್ಟಿಯಿಲ್ಲದವರಂತೆ..
ಕಪ್ಪು ಕನ್ನಡಕ ಹಾಕುವ
ಕಾಮಗಾರಿ ಭರದಿಂದ ಸಾಗಿದೆ...

ಬೊಚ್ಚು ಬಾಯಿಯ ಬಿಚ್ಚು
ನಗುವಿನಲ್ಲಿ ಕಂಡಿದ್ದು..
ಅಟ್ಟಹಾಸ ತಡೆಯಲಾಗದ ಅಸಹಾಯಕತೆ
ಅಟ್ಟಿಸಿ ಹೊರಟವರ ನೋಡಿ ನಿಟ್ಟುಸಿರು
ಗೆದ್ದಲು ಹಿಡಿದ ಕೋಲು
ದಪ್ಪ ಹರಳಿನ ಹಿಂದೆ
ದೃಷ್ಠಿ ಬತ್ತಿದ ಕಣ್ಣು
ಬೆಲೆ ಏರಿದಂತೆಲ್ಲಾ ಗಾಂಧಿ
ಬಡವನಾಗುತ್ತಿದ್ದಾನೆ...
ಇವನೀಗ ದಿವ್ಯ ಮೌನಿ..
ಗಾಂಧಿಗೂ ಗೊತ್ತು ಇದು ಗಾಂಧಿಕಾಲವಲ್ಲ !!!!


11 comments:

Unknown said...

ಹಾಯ್ ಪ್ರವೀಣ್,

ಕವನ as usual superb !!!.. ಅದರ ಜೊತೇಲಿರೋ ಚಿತ್ರ ಗಳು ಇನ್ನೂ superb ..
" ಗಾಂಧಿಗೂ ಗೊತ್ತು ಇದು ಗಾಂಧಿಕಾಲವಲ್ಲ" and ಬಡವನಿಂದ ಬಹಳ ದೂರ,"ನೋಟಿಗೆ ಬರುವುದಕ್ಕೂ ಮೊದಲು
ನಮ್ಮವನಾಗಿದ್ದನಿವ ...ಸಾಲುಗಳು ಇಷ್ಟವಾದವು .....

Unknown said...

super kavana..
very nice and very true also..!!!:)

sunaath said...

‘ಬೆಲೆ ಏರಿದಂತೆಲ್ಲ ಗಾಂಧಿ ಬಡವನಾಗುತ್ತಿದ್ದಾನೆ’!
ಖರೇ ಅದ. ಇಂದು ಬೆಲೆ ಇರುವದು ಮಹಾತ್ಮಾ ಗಾಂಧಿಗಲ್ಲ, ಸೋನಿಯಾ ಗಾಂಧಿಗೆ!

ವಾಣಿಶ್ರೀ ಭಟ್ said...

sakkattagiddu praveen!! KEEP IT UP

Unknown said...

Hey chenagiddu kano....

venkat.bhats said...

ಹೇಯ್ ಭಿನ್ನ ಹಾಗೂ ಸಕಾಲಿಕ ಕವನ. ಕೆಲ ಸಾಲುಗಳು ಚಿಂತೆಗೆ ಹಚ್ಚುವಷ್ಟು strong, good one.

ವಿದ್ಯಾ ರಮೇಶ್ said...

ಎಂದಿನಂತೆ ಸುಂದರ ಕವನ. ನಿಜವಾಗಿಯೂ ಕಾಲದಿಂದ ಕಾಲಕ್ಕೆ ಹಣದ ಮೌಲ್ಯ ಏರುತ್ತಿದೆಯೇ ಹೊರತು ಒಂದಿನಿತು ಇಳಿಯುತ್ತಿಲ್ಲ :(

V.R.BHAT said...

ಒಳ್ಳೆಯ ಅವಲೋಕನ, infact reality, thanks

Ashok.V.Shetty, Kodlady said...

Hi Pravin,

Tumbaa chennagide,igina kaalada nija chitrana nimma kavanadallide... ee salugalu ishtavadavu....Thank u..

ಬೆಲೆ ಏರಿದಂತೆಲ್ಲಾ ಗಾಂಧಿ
ಬಡವನಾಗುತ್ತಿದ್ದಾನೆ...
ಇವನೀಗ ದಿವ್ಯ ಮೌನಿ..
ಗಾಂಧಿಗೂ ಗೊತ್ತು ಇದು ಗಾಂಧಿಕಾಲವಲ್ಲ !!!!

ವಸಂತ said...

ನಿಮ್ಮ ಕವನದ ಸಾಲುಗಳು ಹೊಸತಾಗಿವೆ. ಕೆಲ ಕವಿ ಪಂಡೀತರಂತೆ ಹೆವಿ ಸೌಂಡಿಂಗ್ ಪದಗಳ ಬಳಕೆಗೆ ಸಿಕ್ಕದೇ ಚೆಂದದ, ಕೇಳಲು ಇಂಪಾದ, ಅನುಭವಿಸಲು ಖುಶಿ ಕೊಡುವ ಪದಗಳಲ್ಲಿ ಕವನಗಳು ಮೂಡಿ ಬಂದಿವೆ.. ಹೀಗೆ ಮುಂದುವರೆಸಿ..

ಹರಟೆ ಮಲ್ಲ said...

Very Nice...