Tuesday, February 15, 2011

ಬುದ್ಧನಾಗುವುದೆಂದರೆ..


ಬುದ್ಧನಾಗುವುದೆಂದರೆ..
ಬರಿದೇ..


ಮಧ್ಯರಾತ್ರಿಯಲಿ
ಸದ್ದಿಲ್ಲದೇ
ಎದ್ದು ಹೋಗುವುದಲ್ಲ

ಮುದ್ದು ಮಡದಿಗೆ
ಸುದ್ದಿ ಹೇಳದೇ
ನಿದ್ದೆಯಲಿ ತೊರೆದು ಹೋಗುವುದಲ್ಲ

ಬುದ್ಧನಾಗುವುದೆಂದರೆ
ಬರಿದೇ..


ರಾಜ್ಯ ಕೋಶ ಬೊಕ್ಕಸವ
ಒದ್ದು ಹೋಗುವುದಲ್ಲ
ಭೋದಿ ವೃಕ್ಷದ ಅಡಿಯಲ್ಲಿ
ಬೂದಿ ಬಳಿದು ಕೂರುವುದಲ್ಲ

ಬುದ್ಧನೆಂದರೆ....


ಕಷ್ಟದ ಕಣ್ಣೀರಿಗೆ ಕರವಸ್ತ್ರ
ಹಿಂಸೆಯ ಎದುರು ಶಾಂತಿಯಸ್ತ್ರ
ಜೀವನ ಮೌಲ್ಯದ ಜ್ಯೋತಿ
ದುರಾಸೆಯ ಅದುಮಿಡುವ ಶಕ್ತಿ
ಬಾಳು ಬೆಳಗುವ ಕಾಂತಿ
ನಿತ್ಯ ಜಂಜಡದ ಮುಕ್ತಿ..

ಬುದ್ಧನೆಂದರೆ....


ಅಷ್ಟ ತತ್ವದ ನಿಷ್ಠ
ಭ್ರಷ್ಟ ಬದಿಯಿಟ್ಟ ಸತ್ಯ
ಪ್ರಾಮಾಣಿಕತೆಯ ಪ್ರತೀಕ
ಕರ್ತವ್ಯದ ಪ್ರತಿ ರೂಪ..
ಕುಗ್ಗಿ ಕೂರದ ಬಗ್ಗಿ ಹೋಗದ ಅಚಲ
ನುಗ್ಗಿಹೋಗುವ ಛಲ..

ಬುದ್ಧನಾಗಬೇಕಾದರೆ..


ಶುದ್ಧನಾಗು,ಸಿದ್ದನಾಗು
ಸಿದ್ದಿಯತ್ತ ಸಾಗು
ಅಸಾಧ್ಯವ ಅಟ್ಟಿ
ಸಾಧನೆಯ ತಟ್ಟಿ
ಹಿಮ್ಮೆಟ್ಟದ ಯೋಧನಾಗು..

ಅರ್ಥವಾಗಬಹುದು .. ಬಾಳು
ವ್ಯರ್ಥವಾದರೆ ಸೋಲು..
ಬುದ್ದನಾಗುವ ಮೊದಲು..
ನಿನಗೆ ನೀ ಬದ್ಧನಾಗು..







30 comments:

ಚುಕ್ಕಿಚಿತ್ತಾರ said...

wow.. fantastic lines...

Manu Varsha said...

ತುಂಬಾ ಚನ್ನಾಗಿದೆ.. ಸರ್..
ಬುದ್ದನಾಗುವ ಮೊದಲು... ನಮಗೆ ನಾವೆ ಬದ್ದನಾಗಿರಬೇಕು.....ತುಂಬಾ ಚನ್ನಾಗಿದೆ

Unknown said...

Awe-inspiring lines. Magnificent one. Keep the same spirit.

ನೆನಪಿನ ದೋಣಿಯ ನಾವಿಕ.. said...

ಏನು ಹೇಳಬೇಕು ಅಂತ ತಿಳಿತಿಲ್ಲ ಪ್ರವೀಣ್.. ಅರ್ಥವತ್ತಾದ ಸಾಲುಗಳು.. ಉತ್ತಮವಾದ ಕವನ..

venkat.bhats said...

ಕೊನೆ ಕೊನೇ ಸಾಲುಗಳಲ್ಲಿ ನಿಜವಾದ ಬುದ್ಧ ಕಾಣುತ್ತಾನೆ, ನಮ್ಮೊಳಗಿನ ಬುದ್ಧ..

V.R.BHAT said...

ಪ್ರ’ಬುದ್ಧ’ ಬರಹ, ಚೆನ್ನಾಗಿದೆ, ಹೀಗೇ ಮುಂದುವರಿಯಲಿ, ಶುಭಮಸ್ತು.

ಮನದಾಳದಿಂದ............ said...

ಬುದ್ಧನಾಗುವುದೆಂದರೆ...........!
ಶುದ್ಧನಾಗು,ಸಿದ್ದನಾಗು
ಸಿದ್ದಿಯತ್ತ ಸಾಗು
ಅಸಾಧ್ಯವ ಅಟ್ಟಿ
ಸಾಧನೆಯ ತಟ್ಟಿ
ಹಿಮ್ಮೆಟ್ಟದ ಯೋಧನಾಗು..
ಸೂಪರ್ ಸಾಲುಗಳು,,,,,,,,,,

Soumya. Bhagwat said...

ಅತ್ಯಂತ ಸುಂದರವಾದ ಕವನ:) ಬಹಳ ಇಷ್ಟವಾಯಿತು. ಯಾವುದಾದರೂ ಸ್ಪರ್ಧೆಗೆ ಅಥವಾ ಪತ್ರಿಕೆಗೆ ಕಳಿಸಿ.

ದಿನಕರ ಮೊಗೇರ said...

vaav.... tumbaa tumbaa tumbaa chennaagive.....

Digwas Bellemane said...

ಸಾಲುಗಳು ತು೦ಬ ಚೆನ್ನಾಗಿದೆ

sunaath said...

ಪ್ರವೀಣ,
ಬುದ್ಧನನ್ನು ಅರ್ಥೈಸುವ, ಅರ್ಥ ಮಾಡಿಕೊಂಡ ಕವನ!

Unknown said...

oh super kano....kaviyaagi tumba chennagi belitidiya....ivella hege holitide ninge? Awesome...keep it up sir...

ಮಹಾಬಲಗಿರಿ ಭಟ್ಟ said...

ಅರ್ಥವಾಗಬಹುದು .. ಬಾಳು
ವ್ಯರ್ಥವಾದರೆ ಸೋಲು..
ಬುದ್ದನಾಗುವ ಮೊದಲು..
ನಿನಗೆ ನೀ ಬದ್ಧನಾಗು..


tumba channagide

Anonymous said...
This comment has been removed by the author.
Unknown said...

Enjoyed all that you hav wrote,, well,,,,, m not getting the perticular word to express myself.. Simply superb.. FANTASTIC...

Narayan Bhat said...

ಚೆನ್ನಾಗಿದೆ..ಓದಿ ಖುಷಿಯಾಯ್ತು.

ಅನಿಲ್ ಬೇಡಗೆ said...

ವಾಹ್,,!!

Manjunath said...

ಸೂಪರ್ ಪ್ರವೀಣ್ ... ತುಂಬಾ ಚೆನ್ನಾಗಿದೆ ...

Ittigecement said...

ಪ್ರವೀಣ...

ಬುದ್ಧನಾಗುವದೆಂದರೆ.. ಬದ್ಧತೆಗೆ..
ಬದ್ಧನಾಗು...

ಎಲ್ಲ ಸಾಲೂಗಳೂ ಅರ್ಥ ಗರ್ಭಿತವಾಗಿವೆ...

Ashok.V.Shetty, Kodlady said...

Hi Praveen,

Sorry for the late comment....Ella salugalu arthapurna...Tumbaane chennagide nimma Kavana...Ishta aitu....

Anonymous said...

ಶುದ್ದನಾಗು..ಸಿದ್ದನಾಗು ಎಂಬ ಸಂದೇಶ ನೀಡುವ ಮೂಲಕ ನಿಜಬುದ್ದನನ್ನ ಎಬ್ಬಿಸಿದ್ದೀರಿ..ಪ್ರವೀಣ್.
ಭೈರಪ್ಪನವರ ನಿರಾಕರಣ ನೆನಪಾಯಿತು..ಖಂಡಿತವಾಗಿಯೂ..

ಮನಸಿನಮನೆಯವನು said...

ಪ್ರಬುದ್ಧ ಬರಹವೇ ಸರಿ..

prabhamani nagaraja said...

ಬುದ್ದನಾಗುವ ಮೊದಲು..
ನಿನಗೆ ನೀ ಬದ್ಧನಾಗು..
arthagarbhitavaada sundara saalugaLa uttama kavana niiDiddakkaagi abhinandanegaLu.

KalavathiMadhusudan said...

tumbaa arthagarbhitavaada kavana.vandanegalu.

shivu.k said...

ಸರ್,

ಬುದ್ಧನಾಗುವ ಮೊದಲು...ನಾವು ಏನಾಗಬೇಕು ಎನ್ನುವುದನ್ನು ತುಂಭಾ ಚೆನ್ನಾಗಿ ಬರೆದಿದ್ದೀರಿ..

ಜಲನಯನ said...

ಪ್ರವೀಣ್ ತುಂಬಾ ಸುಂದರ ಸಾಲುಗಳು ಭಾವ ಮತ್ತು ಗಾಢತೆ ತುಂಬಿದ ಪದ ಬಳಕೆ ಮತ್ತು ಶೈಲಿ ಬಹು ಮೆಚ್ಚುಗೆಯಾದವು,,,ಬುದ್ಧ ಹೇಗೆ ಬುದ್ಧ ಎನ್ನುವುದು ಬುದ್ಧಿವಂತರು ಹೆಚ್ಚು ಮಿಸ್ ಮಾಡಿಕೊಳ್ಳೋ ಅಂಶ..ಅಂತೀರಾ...ಹಹಹ ನಿಜ...

Unknown said...

Hi Praveen..

This is one of my favorite .. really great!

ನೆನಪಿನ ಅಲೆಗಳ ಜೊತೆ ನನ್ನ ಪಯಣ said...

ಅರ್ಥವಾಗಬಹುದು .. ಬಾಳು
ವ್ಯರ್ಥವಾದರೆ ಸೋಲು..
ಬುದ್ದನಾಗುವ ಮೊದಲು..
ನಿನಗೆ ನೀ ಬದ್ಧನಾಗು..
tumba arthaviruva Saalugalu..
Praveena..

Anonymous said...

Did you say you are from sampa?

Racham said...

Nanu ittechege odida tumbaa olleya Kavana. Atyuttama salugalu. Koneya nalku salugalanthu manassu thattuttave.Welldone Praveen. Good Luck