Thursday, March 4, 2010

ಎಚ್ಚೆತ್ತುಕೊಳ್ಳೋ ಮೂಡ ಮನುಜ































ಸುತ್ತ ರಣ ಬಿಸಿಲು
ಕಣಕಣವೊ ಸುಡುವಂತೆ
ಕಾಂಕ್ರೀಟ್ ಕಾಡಿನ ನಡುವೆ
ಹಾಯುತಿದ್ದ ಕಿರಣಗಳು
ಲೇಸರ್ ನ ಪಡಿಯಚ್ಚು
ಬಹುಮಹಡಿ ಮುಂದೊಂದು ಬೋನ್ಸಾಯ್
ಹಾಕಿದೆ ಪ್ರಕೃತಿ ರಕ್ಷಣೆಯ ಸೋಗು
ಬಿಸಿಲು ತಡೆಯುವುದೆಲ್ಲಿಂದ
ಬಿದ್ದರೆ ತಾನೇ !!
ಒಂದೇ ಒಂದು ಮರವಿಲ್ಲ
ಬಟ್ಟಾಂಬಯಲಿನಲ್ಲಿ!!!
ಬಿರಿದ ಭೂಮಿ ಆದಷ್ಟು
ಕಿರಣವ ಒಳ ತಳ್ಳುತ್ತಿದೆ !!
ಗರಗಸ ಕೊಡಲಿ ಹಿಡಿದ
ಮರಭಕ್ಷಕರೂ ಹೊರತಲ್ಲ ಸೆಖೆಗೆ
"ಅಯ್ಯಯ್ಯಪ್ಪಾ ಉರಿ ಬಿಸ್ಲು", ಹೇಳುತಿದ್ದ ಮಾತು !!!
ಅದೇ ಮರದ ನೆರಳಲ್ಲಿ ಕುಳಿತು!!
ಹತ್ತಿಪ್ಪತ್ತು ಹನಿ ನೀರಿದ್ದ ಕೆರೆ (!)ಯಲ್ಲಿ
ಮುಖ ನೋಡುತ್ತಾ ಹೇಳುತಿದ್ದ ಸೂರ್ಯ
ಸರ್ವ ಜೀವಕ್ಕೇ ನಾನೇ ಆಧಾರ
ಕೊನೆಯ ಹನಿಯೂ ಆರುತ್ತಿದ್ದಂತೆ
ಕೂಗಿದುವು ಇದ್ದೆರಡು ಮೀನುಗಳು
ಸೂರ್ಯ,ನೀನೊಬ್ಬ ಸುಳ್ಳುಕೋರ
ಬೀಗುತಿದ್ದ ಸೂರ್ಯನೂ ಕುಗ್ಗಿದ
ಆದರೆ ಮನುಜ!!! ಮಜಾ!!
ಸೈಟಿಗಾಯಿತಲ್ಲಾ ಒಂದು ಜಾಗ
ಅಳೆಯುತ್ತಿದಾನೆ ಟೇಪು ಹಿಡಿದು
ಸತ್ತುಬಿದ್ದ ಮೀನನ್ನು ತುಳಿದು!!
ತಲೆಗೊಂದು ಛತ್ರಿ,
ಬಿಸಿಲೇರಿದಂತೆಲ್ಲಾ ಬಿಸ್ಲೇರಿ!
ಬೆಂಕಿ ಬಿದ್ದ ಭೂಮಿ ಹೇಳುತಿತ್ತು
ಇದನೆಲ್ಲಾ ನೋಡಿ...
ಹೂಂ , ವಿನಾಶ ದೂರವಿಲ್ಲ
ಅಳಿ, ಆರಡಿ.. ಮೂರಡಿ..



ಎಚ್ಚೆತ್ತುಕೊಳ್ಳೋ........


ಪ್ರೀತಿಯಿಂದ ಪ್ರವಿ

11 comments:

Anonymous said...

aaradi mooradinoo sigtaa ilya, booking ilde..kashtiddu..:(

Sakkat kavana,, vastavikatege hidida kannadi..

ಚುಕ್ಕಿಚಿತ್ತಾರ said...

ಮನುಶ್ಯನ ದುರಾಸೆಯ ಪ್ರತಿಬಿ೦ಬದ೦ತಿದೆ...
ನಿಮ್ಮ ಕವಿತೆ...

ಸಾಗರಿ.. said...

ಈ ಕಾಮೆಂಟು ವ್ಯಾಕರಣದ ಪದ್ಯಕ್ಕೆ..
ಯಮಾತಾರಾಜಭಾನಸಲಗಂ ಅಲ್ಲವೆ?
ಯಮಾತಾ-ಯ ಗಣ
ಮಾತಾರಾ-ಮ ಗಣ
ತಾರಾಜ- ತ ಗಣ
ರಾಜಭಾ- ರ ಗಣ
ಜಭಾನ- ಜ ಗಣ
ಭಾನಸ- ಭ ಗಣ
ನಸಲ- ನ ಗಣ
ಸಲಗಂ- ಸ ಗಣ
ನನಗೂ ವ್ಯಾಕರಣ ಮರೆಯುತ್ತಿದೆ, ಇದು ಸರಿಯಾಗಿದ್ದರೆ ನಿಮ್ಮ ಪದ್ಯದಲ್ಲಿ ಒಂದು ತಿದ್ದುಪಡಿ ಅವಶ್ಯ(ಯಮತಾ ಆಗಿದೆ).

ಪ್ರವೀಣ್ ಭಟ್ said...

ತುಂಬಾ ಧನ್ಯವಾದಗಳು ಸಾಗರಿಯವರೆ..


ವ್ಯಾಕರಣ ಪದ್ಯದಲ್ಲಿ ವ್ಯಾಕರಣ ದೋಷವನ್ನು ತೋರಿಸಿ ತಿದ್ದಿದ್ದಕ್ಕೆ


ತಿದ್ದುಪಡಿ ಮಾಡಲಾಗಿದೆ


ಸಲಹೆ ಸಹಕಾರ ಪ್ರೋತ್ಸಾಹ ಹೀಗೆ ಇರಲಿ


ಪ್ರವಿ

ಪ್ರವೀಣ್ ಭಟ್ said...

Hi Chetanakka, Vijashree,

tumbaa dhanyavaadagaLu

heege protsaahavirali

Pravi

ಮನಸಿನಮನೆಯವನು said...

'ಪ್ರವೀಣ್ ಭಟ್' ಅವ್ರೆ..,

ಒಂದು ಮಾತು ಹೇಳಬೇಕೆನಿಸುತ್ತಿದೆ:' ಗುರುವೇ ದೇವ್ರು ಎಲ್ಲರ ಆಟನೂ ನೋಡ್ತಾ ಇರ್ತಾನಂತೆ.., ಜಾಸ್ತಿ ಆದ್ರೆ ಅವ್ನೆ ಕೆಳಕ್ಕಿಳಿದು ಪಾದ ಮಡಗಿ ಪಾತಾಳಕ್ಕೆ ತುಳಿದು ಹೋಗತಾನಂತೆ..!!"


ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ:http:/manasinamane.blogspot.com

Ashok.V.Shetty, Kodlady said...

ಪ್ರವೀಣ್ ತುಂಬಾ ಚೆನ್ನಾಗಿದೆ, ಹೊಸ ತರದ ಕವನ, ಹೊಸ ಶೈಲಿ, ತುಂಬಾ ಅರ್ಥಗರ್ಭಿತವಾಗಿದೆ....

ತಲೆಗೊಂದು ಛತ್ರಿ,
ಬಿಸಿಲೇರಿದಂತೆಲ್ಲಾ ಬಿಸ್ಲೇರಿ!
ಬೆಂಕಿ ಬಿದ್ದ ಭೂಮಿ ಹೇಳುತಿತ್ತು
ಇದನೆಲ್ಲಾ ನೋಡಿ...
ಹೂಂ , ವಿನಾಶ ದೂರವಿಲ್ಲ
ಅಳಿ, ಆರಡಿ.. ಮೂರಡಿ..

ಈ ಸಾಲುಗಳು superbbbbbbbbbbbbbb.....ತುಂಬಾ ಸುಂದರ ಕವನ....ನಂಗೆ ತುಂಬಾನೇ ಇಷ್ಟ ಆಯಿತು...

ಪ್ರವೀಣ್ ಭಟ್ said...

Hi gurudese..

tumba dhanyavaadaLu..

nimma manasina manege nuggi.. nimmella kavanagalannu looti madi nanna manasinalli tumbikondu bandideeni..

Pravi

ಪ್ರವೀಣ್ ಭಟ್ said...

Hi Ashok,

Nimma protsaaha nange modalinindaloo ide.. innu heege irali..

kelvondu sala nimma protsaahane nanage bareyalu prerane..

Pravi

ಮನಮುಕ್ತಾ said...

ವಾಸ್ತವದ ಚಿತ್ರಣ..ಕಟುಸತ್ಯ!..ವಿವರವಾಗಿ ಕವನದಲ್ಲಿ ತು೦ಬಿ ಬ೦ದಿದೆ.ಚೆನ್ನಾಗಿ ಬರೆದಿದ್ದೀರಿ.

Raghu said...

ಕವನ ತುಂಬಾ ಚೆನ್ನಾಗಿದೆ..
ನಿಮ್ಮವ,
ರಾಘು.