Thursday, February 25, 2010

ಬಾಳ ವ್ಯಾಕರಣ



ಕಡ್ಡಾಯವಾಗಿ ಕನ್ನಡ ವ್ಯಾಕರಣ ಬಲ್ಲವರಿಗೆ ಮಾತ್ರ !!!

ಬಾಲ್ಯ ಒತ್ತಕ್ಷರವಿಲ್ಲದ ಸಾಲು
ಚೂರು ಪಾರು ತಪ್ಪಿದ ಕಾಗುಣಿತ
ಅಡೆ ತಡೆಯಿಲ್ಲದ ಓಟ
ಶಾಲೆ, ಟೀಚರ್ ಗಳ ಕಾಟ
ಸಾಲಿನ ನಡುವೆ ಬರುವ ಕಾಮದಂತೆ,
ಕಾಲೇಜು,ಟೀನೇಜು ಜೊತೆ ಜೊತೆಗೆ
ಓರೆ ಕೋರೆ ನೋಟ ,ಆಡಿದ್ದೇ ಆಟ
ಅರ್ಥ ಕಳೆದುಕೊಂಡಿದೆ ವ್ಯಾಕರಣ
ಮಧ್ಯದಲ್ಲೆಲ್ಲೋ ಅರ್ಧ ವಿರಾಮ!!
ಅದು ಇದು,ಸಿಕ್ಕೀತೋ ಕೆಲಸ
ಕಲಸು ಮೇಲೋಗರ ಈ ಸಮಾಸ
ಹಾಗೂ ಹೀಗೂ ಮದುವೆಯ ಸುಳಿ ಮಧ್ಯ ನಾವು
ಸಪ್ತಪದಿ,ತ್ರಿಪದಿ,ಷಟ್ಪದಿ
ವಾರ್ಧಕ, ಅವಳೋ ಭಾಮಿನಿ
ಒಂದು ಲಘು, ಎರಡು ಗುರು !!!
ಹೂಂ ಈಗ ಸಂಧಿಕಾಲ !!
ಲೋಪವೇ ಹೆಚ್ಚು ,ಅಲ್ಲಲ್ಲಿ ಆದೇಶ
ಬಿಡಲಾಗುವುದೇ ಯಣ್ ಸಂಧಿ
ಪೂರ್ಣಕಾಮ,ಸವರ್ಣದೀರ್ಘ!!
ನೋಡ ನೋಡುತ್ತಲೇ ಆಗಮನ
ಬಂತದೋ ಕಂದ ಪದ್ಯ !!
ಯಮಾತಾರಾಜಭಾನಸಲಗಂ
ಇದು ಸಂಸಾರ ಗಣ
ಲಲಿತ ಸಾಹಿತ್ಯ,ಅಲ್ಲೊಮ್ಮೆ ಇಲ್ಲೊಮ್ಮೆ ರಗಳೆ
ತಲುಪಿ ಬಿಟ್ಟೆವಲ್ಲಾ ಕೊನೆಯ ಅಧ್ಯಾಯ
ಅಪಾರವಾದ ಅರ್ಥ,ಒಮ್ಮೊಮ್ಮೆ ಅಪಾರ್ಥ
ವ್ಯಾಕರಣ ಅಷ್ಟಕ್ಕಷ್ಟೇ.....
ಒತ್ತಕ್ಷ್ರರ,ಸಂಧಿ,ಷಟ್ಪದಿ,ರಗಳೆ,ಛಂದಸ್ಸು
ಯಾವುದೋ... ಎಲ್ಲಾ ತಮಸ್ಸು!!
ಯಮನೂ ಪಾಲಿಸುವ ನಿಯಮ
ವಾಕ್ಯದ ಕೊನೆಗೆ ಪೂರ್ಣ ವಿರಾಮ !!!

ಇತಿ ಶ್ರೀ !!!!

ಪ್ರೀತಿಯಿಂದ ಪ್ರವಿ

13 comments:

Nisha said...

Vyakarana thumba chennagide.

Manju M Doddamani said...

ನವ್ಯ ಶೈಲಯಾಯಲ್ಲಿ ಎಲ್ಲರಿಗೂ ವ್ಯಾಕರಣ ಕಳಿಸ್ತ ಇದ್ದೀರಾ ಒಳ್ಳೆ ಪ್ರಯತ್ನ !

ಪ್ರವೀಣ್ ಭಟ್ said...

Hi Nisha,

Tumba dhanyavaadagaLu

Pravi

ಪ್ರವೀಣ್ ಭಟ್ said...

Hi Manju,

Tumbaa DhanyavaadagaLu,

aadare illi nanu vyakaraNa kalisuttilla.. vyakaranada moolaka jeevana torista idini..

So idu vyakarana ballavarige maatra :)

Pravi

shree said...

he chennagidhe, adre yamatharajabhanasalagam maatra most memorable ... nice praveen...

ಸಾಗರದಾಚೆಯ ಇಂಚರ said...

ಪ್ರವೀಣ,
ತುಂಬಾ ಚೆನ್ನಾಗಿದೆ
ಶಬ್ದಗಳ ಜೋಡಣೆ ಸೂಪರ್

ಮನಸಿನಮನೆಯವನು said...

'ಪ್ರವೀಣ್ ಭಟ್ ' ಅವ್ರೆ..,

ಕನ್ನಡ ವ್ಯಾಕರಣ ಉಪಯೋಗಿಸಿ ಬರೆದ ಈ ಪದ್ಯ ತುಂಬಾನೇ ಸೊಗಸಾಗಿದೆ..
ಉತ್ತಮ ಜೋಡಣೆ,ತುಂಬಾ ಇಷ್ಟವಾಯ್ತು.

Blog is Updated:http://manasinamane.blogspot.com

ಚುಕ್ಕಿಚಿತ್ತಾರ said...

wow.. nice vyaakarana padya...

Ashok.V.Shetty, Kodlady said...

ಹಾಯ್ ಪ್ರವೀಣ್...ತುಂಬಾ ಚೆನ್ನಾಗಿದೆ...ಕನ್ನಡ ವ್ಯಾಕರಣ ಬಳಸಿ ತುಂಬಾ ಸುಂದರವಾಗಿ ಕವನ ಬರೆದಿದ್ದೀರಿ...
ಲೋಪವೇ ಹೆಚ್ಚು ,ಅಲ್ಲಲ್ಲಿ ಆದೇಶ
ಬಿಡಲಾಗುವುದೇ ಯಣ್ ಸಂಧಿ
ಪೂರ್ಣಕಾಮ,ಸವರ್ಣದೀರ್ಘ!!
ನೋಡ ನೋಡುತ್ತಲೇ ಆಗಮನ
ಬಂತದೋ ಕಂದ ಪದ್ಯ !!
ಯಮತಾರಾಜಭಾನಸಲಗಂ
ಇದು ಸಂಸಾರ ಗಣ
ಈ ಸಾಲುಗಳು ತುಂಬಾ ಚೆನ್ನಾಗಿವೆ....

ಪ್ರವೀಣ್ ಭಟ್ said...

Shree, Gurumoorthanna, guru-dese, chukki-chittara and Ashok sir..


Ellarigoo hrutpoorvaka dhanyavaadagaLu..

protsaha nirantaravaagirali

Pravi

ಸಾಗರಿ.. said...

ಈ ಕಾಮೆಂಟು ವ್ಯಾಕರಣದ ಪದ್ಯಕ್ಕೆ..
ಯಮಾತಾರಾಜಭಾನಸಲಗಂ ಅಲ್ಲವೆ?
ಯಮಾತಾ-ಯ ಗಣ
ಮಾತಾರಾ-ಮ ಗಣ
ತಾರಾಜ- ತ ಗಣ
ರಾಜಭಾ- ರ ಗಣ
ಜಭಾನ- ಜ ಗಣ
ಭಾನಸ- ಭ ಗಣ
ನಸಲ- ನ ಗಣ
ಸಲಗಂ- ಸ ಗಣ
ನನಗೂ ವ್ಯಾಕರಣ ಮರೆಯುತ್ತಿದೆ, ಇದು ಸರಿಯಾಗಿದ್ದರೆ ನಿಮ್ಮ ಪದ್ಯದಲ್ಲಿ ಒಂದು ತಿದ್ದುಪಡಿ ಅವಶ್ಯ(ಯಮತಾ ಆಗಿದೆ).

ಪ್ರವೀಣ್ ಭಟ್ said...

ತುಂಬಾ ಧನ್ಯವಾದಗಳು ಸಾಗರಿಯವರೆ..


ವ್ಯಾಕರಣ ಪದ್ಯದಲ್ಲಿ ವ್ಯಾಕರಣ ದೋಷವನ್ನು ತೋರಿಸಿ ತಿದ್ದಿದ್ದಕ್ಕೆ


ತಿದ್ದುಪಡಿ ಮಾಡಲಾಗಿದೆ


ಸಲಹೆ ಸಹಕಾರ ಪ್ರೋತ್ಸಾಹ ಹೀಗೆ ಇರಲಿ


ಪ್ರವಿ

Say it loudly said...

ಇದನ್ನು ಸಭೆಯೊಂದರಲ್ಲಿ ವಾಚಿಸಬಹುದೆ?