Monday, December 7, 2009

ಪ್ರಾಯ ಮತ್ತು ಕನಸು !!!







ಸುತ್ತಲೂ ಕತ್ತಲು
ಕತ್ತಲ ಮರೆಸಲು ಚಾದರ
ಹೊದ್ದು ಮಲಗಿದ್ದೇ,
ಆವರಿಸಿ ಬರುತಿದೆ ನಿದ್ದೆ

ಎಚ್ಚರ ನಿದ್ರೆಯ ನಡುವೆ
ತೂರಿ ಬರುತಿದೆ ಬೆಳಕು
ಕತ್ತಲೆಯೇ ಕುಗ್ಗಿದೆ
ಚಾದರದಿ ನುಗ್ಗಿದೆ
ಕಣ್ಣ ತುಂಬಾ ಹೊಳಪು

ಚೆಲುವು ಚಿತ್ತಾರ
ಒನಪು ವಯ್ಯಾರ
ಮನಸು ಮನೋಹರ
ಕನಸುಗಳ ಸಾಗರ

ಮುಚ್ಚಿದ ರೆಪ್ಪೆಯೊಳಗೆ
ಮೆಚ್ಚಿದ ಚಿತ್ರ
ತೋಳ ತೆಕ್ಕೆಯಲಿ
ಮೆಲ್ಲ ತೆವಳುವ ಪಾತ್ರ

ಹಾಗೆ ಹೊರಳಾಡುತಿರಲು
ಸ್ವರ್ಗ ಹತ್ತಿರತ್ತಿರ
ಮೆಲ್ಲಗೆ ಗಲ್ಲ ಕಚ್ಚಲು
ಛೇ!! ಆಗಿಬಿಟ್ಟಿದೆ ಎಚ್ಚರ !!

ಕಣ್ಣ ತೆರೆದರೆ ಕಡುಗಪ್ಪು
ತೆಕ್ಕೆಯಲಿ ದಿಂಬು ಭದ್ರ!!
ಹೊರಳಾಡಿದ ಕುರುಹು
ಹಾಸಿಗೆಯ ಹೊರಗೆ !!!
ಚಾದರ ನಾಚಿ ನೀರಾಗಿ,
ಕಾಲಡಿಯಲ್ಲಡಗಿದೆ!!!!

---------------------ಪ್ರೀತಿಯ ಪ್ರವಿ

12 comments:

Ravi N said...

ಭಟ್ಟರಿಗೆ ಭಟ್ಟರೇ ಸಾಟಿ.....ಆ ಯೋಗರಾಜ್ ಭಟ್ ಅವರ ಕಲ್ಪನೆಗೂ ನಿಮ್ಮ ಕಲ್ಪನೆಗೂ ಎಲ್ಲೋ ಅವಿನಾಭಾವ ಸಂಭಂದ ಅಂತ ಕಾಣುತ್ತೆ ಪ್ರವೀಣ್.

ಕಲ್ಪನೆಯ ಸಾಲುಗಳು, ನೀವು ಕಣ್ಣು ಮುಚ್ಚಿ ಕಾಣೋ ಕನಸನ್ನೂ ಕವನವನ್ನಾಗಿಸುವ ಕವಿ.

ವಂದನೆಗಳು....ಅಭಿನಂದನೆಗಳು.

Manju M Doddamani said...

ತುಂಬಾ ಚನ್ನಾಗಿದೆ ಈ ಕವಿತೆ ನಿಮ್ಮ ಅನುಭವ ಅನಿಸುತ್ತೆ .....
ಸ್ವರ್ಗ ಹತ್ತಿರತ್ತಿರ ಹಾಗೆ ಛೇ!! ಆಗಿಬಿಟ್ಟಿದೆ ಎಚ್ಚರ ಸಾಲುಗಳು ತುಂಬಾ ಹಿಡಿಸಿತು.
ಹಾಸ್ಯ ಅಂದರೆ ತೆಕ್ಕೆಯಲಿ ದಿಂಬು ಭದ್ರ!

Raghu said...

ನಿಮ್ಮ ಕವನ ಚೆನ್ನಾಗಿದೆ ಸರ್.. ಕೀಪ್ ಬ್ಲಾಗಿಂಗ್... :)
ನಿಮ್ಮವ,
ರಾಘು.

Ashok.V.Shetty, Kodlady said...

Nice One Praveen...

ಪ್ರವೀಣ್ ಭಟ್ said...

ಹಾಯ್ ರವಿ,


ವಂದನೆಗೆ ಅಭಿನಂದನೆ .. ಅಭಿನಂದನೆಗೆ ವಂದನೆ !!!


ಧನ್ಯವಾದಗಳು ..


ಪ್ರವಿ

ಪ್ರವೀಣ್ ಭಟ್ said...

ಹಾಯ್ ಮಂಜು...


ಸ್ವಲ್ಪ ಕಲ್ಪನೆ . ಜಾಸ್ತಿ ಅನುಭವ !!!


ಧನ್ಯವಾದ ನಿಮ್ಮ ಅನಿಸಿಕೆಗೆ !

ಪ್ರವಿ

ಪ್ರವೀಣ್ ಭಟ್ said...

ಹಾಯ್ ರಾಘು,


ತುಂಬಾ ಧನ್ಯವಾದಗಳು

ಪ್ರವಿ

ಪ್ರವೀಣ್ ಭಟ್ said...

ಹಾಯ್ ಅಶೋಕ್ ,

ತುಂಬಾ ಧನ್ಯವಾದಗಳು

ಪ್ರವಿ

ಚುಕ್ಕಿಚಿತ್ತಾರ said...

ಚ೦ದದ ಕವಿತೆ..
ವಯಸಿನ ಕನಸು...ಕನವರಿಕೆ...

ಸಾಗರದಾಚೆಯ ಇಂಚರ said...

ಎಂಥಹ ಮಧುರ ಕವನ
ಅಂದದ ಸಾಲುಗಳು
ಭೇಷ್

ಪ್ರವೀಣ್ ಭಟ್ said...

ಹಾಯ್ ವಿಜಯಶ್ರೀ,

ತುಂಬ ಧನ್ಯವಾದಗಳು...

ಪ್ರವೀಣ್ ಭಟ್ said...

ಗುರುಮೂರ್ತಿ ಯವರೆ ತುಂಬಾ ಧನ್ಯವಾದಗಳು . ಕವನವನ್ನು ಮೆಚ್ಚಿದ್ದಕ್ಕೆ