Monday, November 16, 2009

ನೀ ಬಿಟ್ಟು ಹೋದ ಸ್ವತ್ತು , ಕಾಯುವ ಬಗೆ ಗೊತ್ತು !!!

ಬಾರದಿರಿ ಕಣ್ಣ ಹನಿಗಳೇ
ಅವಳ ಬಿಂಬ ಮಂಜಾದೀತು
ಜಾರದಿರಿ ಕಣ್ಣ ಬಿಂದುಗಳೇ
ಅವಳಿತ್ತ ಮುತ್ತು ಅಳಿಸೀತು

ಮರುಗದಿರು ಮನಸೇ
ಅವಳ ಚಿತ್ರ ಮಸುಕಾದೀತು
ಹೃದಯ,ನೀನೀಗ ರೋಧಿಸೆ
ನೆನಪುಗಳು ಮರೆಯಾದೀತು

ನೀನೀಗ ಜೊತೆಯಿಲ್ಲ
ಸರಿದಿರುವೆ ಬಹುದೂರ
ಜೊತೆಯಿದ್ದ ನೆನಪುಗಳಿವೆಯಲ್ಲ
ನೀ ಸರಿದಸ್ಟೂ, ಅವು ಹತ್ತಿರ

ಕಣ್ಣ ತುಂಬಾ ನಿನ್ನ ಬಿಂಬ
ಕೆನ್ನೆ ತುಂಬಾ ಸಿಹಿ ಮುತ್ತು
ಒಯ್ಯಲಾರೆ ಇದ ನೀ ಜೊತೆ ಹೊತ್ತು
ಮನದ ಮೇಲೆ ಮಾಸದ ಚಿತ್ರ
ಹೃದಯ ತುಂಬಾ ನೆನಪ ಗಾಯ
ಇವೀಗ ನನ್ನದೇ ಸ್ವತ್ತು !!!
ಕಾಯ್ದುಕೊಳ್ಳುವುದು ನನಗೆ ಗೊತ್ತು !!

-------------------------ಪ್ರೀತಿಯಿಂದ ಪ್ರವಿ



18 comments:

Anonymous said...

tumbaa tumbaa chennagide Praveen,, sakkat ishta aytu,,:):)

ಮುಸ್ಸ೦ಜೆ said...

ತು೦ಬಾ ಚೆನ್ನಾಗಿದೆ ಪ್ರವೀಣ್... ಭಾವನಾತ್ಮಕ ಕವನ.

ಓದಿ ಒ೦ದು ಪ್ರಶ್ನೆ ಮೂಡುತ್ತಿದೆ ಉತ್ತರಿಸಬಲ್ಲೆಯಾ?

ಕಣ್ಣ ಹನಿ ಹಿಡಿದಿಟ್ಟೆ,
ಸವಿಮುತ್ತ ನೆನಪಿಟ್ಟೆ
ಮರುಕವ ನೀ ಮುಚ್ಚಿಟ್ಟೆ
ನೆನಪುಗಳ ಕಟ್ಟಿಟ್ಟೆ,
ಬಿ೦ಬವನೂ ಕೊರೆದಿಟ್ಟೆ
ಇವೆಲ್ಲವೂ ನಿನ್ನ ಸ್ವತ್ತು!

ಮತ್ತೇಕೆ ಈ ಮೌನ,
ಮ೦ದಹಾಸವೂ ಮಾಯ,
ಹೊಳಪಿಲ್ಲ ಕ೦ಗಳಲಿ,
ಹುರುಪಿಲ್ಲ ಭಾವದಲಿ
ಹೀಗೇಕೆ ಈ ಸ್ವಾರ್ಥ,
ಇವಲ್ಲವೇ ಅವಳ ಸ್ವತ್ತು?

ಪರಮ್.

Dileep Hegde said...

ಪ್ರವೀಣ್..

ಕವನ ತುಂಬಾ ಚೆನ್ನಾಗಿದೆ...

ಬಾರದಿರಿ ಕಣ್ಣ ಹನಿಗಳೇ
ಅವಳ ಬಿಂಬ ಮಂಜಾದೀತು
ಜಾರದಿರಿ ಕಣ್ಣ ಬಿಂದುಗಳೇ
ಅವಳಿತ್ತ ಮುತ್ತು ಅಳಿಸೀತು

ಮೊದಲ ಈ ಸಾಲುಗಳು ಸಕ್ಕತ್ ಇಷ್ಟವಾದವು...

Ranjita said...

super lines praveen sir ..

Raghu said...

hummmm...woh...wonderful lines...
ಚೆನ್ನಾಗಿದೆ... ಪಯಣ ಮುಂದುವರಿಸಿ...
ನಿಮ್ಮವ,
ರಾಘು.

Ravi N said...
This comment has been removed by the author.
Ravi N said...

ತುಂಬಾ ಚೆನಾಗಿದೆ ಸರ್, ನಿಮ್ಮ ಕಲ್ಪನಾ ಕವನಗಳಿಗೆ ಸ್ಪೂರ್ತಿ ಯಾರು??
ಕವನ ಅಧ್ಬುತವಾಗಿದೆ. ಹೀಗೆ ಬರಿತ ಇರಿ ನಿಮ್ಮಿಂದ ಇನ್ನೂ ಹೆಚ್ಚು ಕವನಗಳ ನಿರೀಕ್ಷೆಯಲ್ಲಿ,

ರವಿ ಎನ್.

Sunil said...

Thumba olleya salugalu? edenu anubhavavo?

ಪ್ರವೀಣ್ ಭಟ್ said...

Hi ಆಕಾಶಬುಟ್ಟಿ
Thanks for you comments!!!

ಪ್ರವೀಣ್ ಭಟ್ said...

ಹಾಯ್ ಪರಮ್,

ಅಭಿಪ್ರಾಯಕ್ಕೆ ಧನ್ಯವಾದಗಳು..


ನನ್ನ ಕಲ್ಪನಾತ್ಮಕ ಕವನಕ್ಕೆ ... ಕಲ್ಪನಾತ್ಮಕ ಪ್ರಶ್ನೆ .. ಕವನ ರೂಪದಲ್ಲಿ ತುಂಬಾ ಚೆನ್ನಾಗಿದೆ.. ಕಲ್ಪನಾತ್ಮಕವಾಗೆ ಉತ್ತರಿಸುವ ಚಿಕ್ಕ ಪ್ರಯತ್ನ..


" ಅವಳಿಲ್ಲದೆ ಬದುಕಲಾರೆ ಎಂಬುದು ಆ ಕ್ಷಣದ ಅನಿಸಿಕೆ .. ಅವಳಿಲ್ಲದೆಯೂ ತುಂಬಾ ಚೆನ್ನಾಗಿ ಬದುಕಬಲ್ಲೆ ಎಂಬುದು ಈ ಕ್ಷಣದ ಸತ್ಯ :) "

ಪ್ರವೀಣ್ ಭಟ್ said...

ಹಾಯ್ ದಿಲೀಪ್,

ಕವನದ ಸಾಲುಗಳನ್ನು ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು..

ಪ್ರವೀಣ್ ಭಟ್ said...

ಹಾಯ್ ರಾಘು,

ಕವನದ ಸಾಲುಗಳನ್ನು ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು..

ಪ್ರವೀಣ್ ಭಟ್ said...

Hi Ranjitha,

tumba tumba Thanks !!!

ಪ್ರವೀಣ್ ಭಟ್ said...

ಹಾಯ್ ರವಿ,

ತುಂಬಾ ಧನ್ಯವಾದಗಳು..

ನನ್ನೀ ಕವನಕ್ಕೆ ಕಲ್ಪನೆಯೇ ಸ್ಪೂರ್ತಿ...:)

ಪ್ರವೀಣ್ ಭಟ್ said...

ಹಾಯ್ ಸುನಿಲ್


ಕವನದ ಸಾಲುಗಳನ್ನು ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು..

ಇಸ್ಟೆಲ್ಲ ದೊಡ್ಡ .. ಅನುಭವ ಏನಿಲ್ಲ :) ಕಲ್ಪನೆಯ ಕೂಸು :)

ಸ್ನೇಹಾ said...

very beautiful praveen....

ನೀನೀಗ ಜೊತೆಯಿಲ್ಲ
ಸರಿದಿರುವೆ ಬಹುದೂರ
ಜೊತೆಯಿದ್ದ ನೆನಪುಗಳಿವೆಯಲ್ಲ
ನೀ ಸರಿದಸ್ಟೂ, ಅವು ಹತ್ತಿರ
very nice....

ಪ್ರವೀಣ್ ಭಟ್ said...

ಹಾಯ್ ಸ್ನೇಹ,


ತುಂಬಾ ಧನ್ಯವಾದಗಳು ಕವನವನ್ನು ಮೆಚ್ಚಿದ್ದಕ್ಕೆ

ಪ್ರವಿ

ashu said...

ನೀನೀಗ ಜೊತೆಯಿಲ್ಲ
ಸರಿದಿರುವೆ ಬಹುದೂರ
ಜೊತೆಯಿದ್ದ ನೆನಪುಗಳಿವೆಯಲ್ಲ
ನೀ ಸರಿದಸ್ಟೂ, ಅವು ಹತ್ತಿರ...

hey idu tumba chenag ide kano..
really felt like crying, by remembering some old memories..
heart touching..