ಮನದ ಹೊಸ್ತಿಲಿಗೆ ಬಂದು
ಒಳಗೆ ನೀ ಬರಲೊಲ್ಲೆ
ತುಂಬು ಪ್ರೀತಿಯ ಸ್ವಾಗತ ನಿನಗೆ
ಒಳಗೆ ಬಾ ಓ ನಲ್ಲೆ
ಹೃದಯ ಶೃಂಗರಿಸಿರುವೆ
ಒಲವ ಹೂವುಗಳಿಂದ
ಕಾಲಿಡು ಒಳಗೆ ಪ್ರೀತಿಯಿಂದ
ಅದುವೇ ನನಗೆ ಮಹದಾನಂದ
ಮನದ ಮೂಲೆ ಮೂಲೆಯೂ
ಬೇಡುತಿದೆ ನಿನ್ನಾಗಮನ
ಹಿoದೋಡದೆ ಮುಂದಡಿಯಿಡು
ಮಾಡು ಮನಸ ಪಾವನ
ಬಾ ನನ್ನೀ ಪ್ರೀತಿಯ ಒಪ್ಪಿಕೋ
ಹೃದಯದ ಒಳಗೆ ಬಂದು
ಮನಸಲಿ ಮನಸ ಅಪ್ಪಿಕೋ
ಧಮನಿ ಧಮನಿಯಲು ಹರಿದು
ಇರು ನೀ ನಿನ್ನಿಸ್ಟದಂತೆ
ಈ ಹೃದಯ ಕೋಣೆಯೇ ನಿನದು
--------------------------ಪ್ರವಿ
ಲಲಿತ ಪ್ರಬಂಧ - 'ಓಟ ಓಟ ಹಿಂದೋಟ'
-
ಹಿಂದಿನ ವಾರದ ( ಏಪ್ರಿಲ್10, 2025) 'ಸುಧಾ' ಪತ್ರಿಕೆಯ 'ಭಿನ್ನನೋಟ'ದಲ್ಲಿ
ಪ್ರಕಟವಾಗಿರುವ ನನ್ನ ಲಲಿತ ಪ್ರಬಂಧ - 'ಓಟ ಓಟ ಹಿಂದೋಟ'
ನಿಮ್ಮ ಪ್ರೀತಿಯ ಓದಿಗೆ🌼
'ಸುಧಾ' ಪತ್ರಿಕ...
1 day ago
No comments:
Post a Comment