

ಸಾವಿರ ಸಾವಿರ ಕನಸಿದೋ ಕಣ್ಣಲಿ
ನಲ್ಲೆಯೇ ನಿನ್ನನು ನೋಡಿದ ಕ್ಷಣದಲಿ
ಬೆಳ್ಳನೆ ಬೆಳದಿಂಗಳಿನಾ ನಗೆ
ಮೋಡಿಯ ಮಾಡಿದೆ ಮರೆಯದ ಹಾಗೆ
ಸೂರ್ಯನು ಸಾಟಿಯೇ ಕಣ್ಣಿನ ನೋಟಕೆ
ತನುಮನ ಬೆಳಗಿದೆ ಬೀರಿದ ಬೆಳಕಿಗೆ
ಗುಬ್ಬಚ್ಚಿ ಮರಿ ನೀನು,ನನ್ನೆದೆ ಗೂಡಲಿ
ಸಮಯವೇ ತಿಳಿಯದು ಕೇಳಲು ಚಿಲಿಪಿಲಿ
ಪ್ರೀತಿಯ ಅಪ್ಪುಗೆ ಹೃದಯಕೆ ಸಿಕ್ಕಿದೆ
ಬೆಸುಗೆಯ ಬಿಸಿ ಸನಿಹಕೆ ಸೋಕಿದೆ
ಜೊತೆ ಜೊತೆ ನೀನಿರೆ ಬೇರೇನು ಬೇಕು
ಜತನದಿ ಕಾಯುವೆ,ನೀ ನನ್ನ ಬದುಕು..
ಜೊತೆಯಾಗಿ ಬಾಳುವ ನೂರೂ ಜನ್ಮಕೂ..
ಪ್ರೀತಿಯಿಂದ ಪ್ರವಿ
