Wednesday, July 15, 2009

ಬಯಸಿದೆ ಪ್ರೀತಿ , ತೊರೆದಳು ಗೆಳತಿ


ಪೀಡಿಸಲಾರೆ ನೀ ನನ್ನ ಪ್ರೀತಿಸು ಎಂದು
ಆದರೆ ನಾ ಪ್ರೀತಿಸುವೆ ನಿನ್ನ ಎಂದೆಂದೂ...
ಮನದಲಿ ಪ್ರೀತಿಯಿಲ್ಲದಿರೆ ನಿನ್ನದೇನಿದೆ ತಪ್ಪು
ನನಗೇನಿದೆ ಹಕ್ಕು, ಹೇಳಲು ನನ್ನ ಪ್ರೀತಿಯ ಒಪ್ಪು ..

ಮಗುವಿನಂತ ಮುಗುದೆ ನೀನು, ಬಾಚಿ ಕೊಟ್ಟೆ ಸ್ನೇಹ
ಅರಿಯಲಿಲ್ಲ ನಾನು ಮಾಡಿದೆ ನಿನ್ನ ಮೋಹ
ನಿನದೇನು ತಪ್ಪಿಲ್ಲ , ನೀನೇನು ಮಾಡಿಲ್ಲ
ನನದೂ ತಪ್ಪಲ್ಲ, ಪ್ರೀತಿಗೆ ಕರಣ ಈ ಮನಸೇ ಎಲ್ಲ

ಹೇಳಬಾರದಿತ್ತು ನಿನ್ನಲಿ ನಾ ನನ್ನ ಪ್ರೀತಿ
ಸ್ನೇಹವು ತಪ್ಪಿತು, ಈಗ ಒಂಥರಾ ಭೀತಿ
ಚಡಪಡಿಸುತಿದೆ ಕ್ಷಣ ಕ್ಷಣವೂ ಈ ನನ್ನ ಹೃದಯ
ಮರೆಯಲಾಗುವುದಾ..? ಉತ್ತರ ಹೇಳಬೇಕಿದೆ ಸಮಯ ..

1 comment:

Manju M Doddamani said...

"ಪ್ರೀತಿಗೆ ಕರಣ ಈ ಮನಸೇ ಎಲ್ಲ" tumbaa channagide