ಮನದ ಹೊಸ್ತಿಲಿಗೆ ಬಂದು
ಒಳಗೆ ನೀ ಬರಲೊಲ್ಲೆ
ತುಂಬು ಪ್ರೀತಿಯ ಸ್ವಾಗತ ನಿನಗೆ
ಒಳಗೆ ಬಾ ಓ ನಲ್ಲೆ
ಹೃದಯ ಶೃಂಗರಿಸಿರುವೆ
ಒಲವ ಹೂವುಗಳಿಂದ
ಕಾಲಿಡು ಒಳಗೆ ಪ್ರೀತಿಯಿಂದ
ಅದುವೇ ನನಗೆ ಮಹದಾನಂದ
ಮನದ ಮೂಲೆ ಮೂಲೆಯೂ
ಬೇಡುತಿದೆ ನಿನ್ನಾಗಮನ
ಹಿoದೋಡದೆ ಮುಂದಡಿಯಿಡು
ಮಾಡು ಮನಸ ಪಾವನ
ಬಾ ನನ್ನೀ ಪ್ರೀತಿಯ ಒಪ್ಪಿಕೋ
ಹೃದಯದ ಒಳಗೆ ಬಂದು
ಮನಸಲಿ ಮನಸ ಅಪ್ಪಿಕೋ
ಧಮನಿ ಧಮನಿಯಲು ಹರಿದು
ಇರು ನೀ ನಿನ್ನಿಸ್ಟದಂತೆ
ಈ ಹೃದಯ ಕೋಣೆಯೇ ನಿನದು
--------------------------ಪ್ರವಿ
ತುಷಾರ'ದಲ್ಲಿ ನನ್ನ ಲಲಿತ ಪ್ರಬಂಧ 'ಬಾವಿಯೋ ಬವಣೆಯೋ!'
-
https://www.facebook.com/share/p/1DprVZSfF8/
👆ಹಿಂದಿನ ತಿಂಗಳ(ಸೆಪ್ಟೆಂಬರ್2026) 'ತುಷಾರ'ದಲ್ಲಿ ಪ್ರಕಟವಾದ ನನ್ನ ಲಲಿತ ಪ್ರಬಂಧ
'ಬಾವಿಯೋ ಬವಣೆಯೋ!' ನಿಮ್ಮ ಪ್ರೀತಿಯ ಓದಿಗೆ...
5 days ago

No comments:
Post a Comment