ಮನದ ಹಾಳೆಯ ತುಂಬಾ ನೀನಿಟ್ಟ ಹೆಜ್ಜೆಯ ಗುರುತು
ತೊರೆದು ಹೋಗದಿರು ನನ್ನ ನೀ ಮರೆತು
ನಾನೇನನೂ ಅರಿಯೆ ನಿನ್ನ ಪ್ರೀತಿಯ ಹೊರೆತು
ಬಾಳು ನನ್ನೊಂದಿಗೆ ನನ್ನ ಪ್ರೀತಿಯ ಅರಿತು
ಜೊತೆಯಲಿ ನೀನಿರೆ , ಎಂಥ ಹಿತ ಈ ಇರುಳು
ಮನದ ಮೇಲೆಲ್ಲಾ ಚುಕ್ಕೆಯ ಸಾಲು
ಎದೆಯ ಬಾಂದಳದ ತುಂಬಾ ಪ್ರೀತಿಯ ಬೆಳದಿಂಗಳು
ಸುತ್ತಲು ಬೆಳಕು , ಚೆಲ್ಲಿದಂತೆ ಹಾಲು
ಪುಟದ ತುಂಬೆಲ್ಲ ಕೇವಲ ನಿನ್ನದೇ ಹೆಸರು
ಈ ನಿನ್ನ ನೆನಪುಗಳು ಸದಾ ಹಚ್ಚ ಹಸಿರು
ಯಾವುದ ಮರೆತರೂ ಮರೆಯಲಾಗುವುದೇ ಉಸಿರು
ಹಸಿರು ಉಸಿರಾಗಿ ನೀ ಎಂದೂ ನನ್ನ ಜೊತೆಯಿರು
... ಪ್ರವಿ
ಅವ್ವರಸಿಯ ಸಾರ್ಥಕ ಬದುಕಿನ ಅನಾವರಣ
-
ಬಾಲ್ಯದಲ್ಲಿ ಶಾಲಾದಿನಗಳಲ್ಲಿ ನಡೆಯುತ್ತಿದ್ದ ಛದ್ಮವೇಷ ಸ್ಪರ್ಧೆಯಲ್ಲಿ ಹಲವು ಹೆಣ್ಮಕ್ಕಳು
ಹಾಕುತ್ತಿದ್ದುದು ಕಿತ್ತೂರು ರಾಣಿ ಚೆನ್ನಮ್ಮ, ಉಳ್ಳಾಲದ ಅಬ್ಬಕ್ಕ ರಾಣಿ, ಒನಕೆ ಓಬವ್ವ, ಝಾನ...
4 days ago

1 comment:
Thumbane chennagidhe praveen...
Post a Comment