Friday, May 14, 2010

ತೊಲಗಿ ನೆನಪುಗಳೇ







ತೊಲಗಿ ನೆನಪುಗಳೇ

ಬದುಕಬೇಕಿದೆ ನಾನು


ಬೇಡ ಬೇಡವೆಂದರೂ

ಅಲೆ ಅಲೆಯಾಗಿ

ಎಳೆ ಎಳೆಯಾಗಿ ಕಣ್ಮುಂದೆ ಬರುವಿರೇಕೆ?

ಹೃದಯವ ಹಿಂಡಿ

ಮನವನು ಕಲಕಿ

ಬೆಂಬಿಡದ ಭೂತವಾಗಿ ಕಾಡುವಿರೇಕೆ?


ಮನಸ ಕೆರೆಯಲ್ಲಿ

ನೆನಪುಗಳೇ..ತಳ ಸೇರಿ

ಕಮಲವಿಲ್ಲದ ಮೇಲೆ

ಕೆಸರಿನ್ಯಾಕೆ?

ಬೇರುಗಳೂ ಸತ್ತಿವೆ

ಚಿಗುರುವಾಸೆ ಉಳಿದಿಲ್ಲ

ಸ್ವಚ್ಛವಾಗಬೇಕಿದೆ ನಾನು

ಅದಾಗದಿದ್ದರೂ..

ಸ್ವಚ್ಛವಾದಂತೆ ತೋರಿಸಬೇಕು ಜಗಕೆ..


ಕಲ್ಲು ಹೊಡೆದು ಕಲಕದಿರಿ

ಹಳಯದೆಲ್ಲವ ಕೆಣಕದಿರಿ

ಆಗ ಕೆಸರಿತ್ತು ನಿಜ..

ಆದರೆ ಜೊತೆ ಕಮಲವೂ ಇತ್ತು..


ತೊಲಗಿ ನೆನಪುಗಳೇ

ಪ್ರೀತಿ ಬದುಕಲಿಲ್ಲ

ಬದುಕ ಪ್ರೀತಿಸಬೇಕಿದೆ


ಪ್ರೀತಿಯಿಂದ ಪ್ರವಿ

12 comments:

ಮುಸ್ಸ೦ಜೆ said...

ತು೦ಬಾ ಹಿಡಿಸಿತು ಪ್ರವೀಣ್. ಅಭಿನ೦ದನೆಗಳು.

ತೇಜಸ್ವಿನಿ ಹೆಗಡೆ said...

ಪ್ರೀತಿ ಬದುಕಲಿಲ್ಲ
ಬದುಕ ಪ್ರೀತಿಸಬೇಕಿದೆ
good lines... good poem.. Ista aayitu.

Raghu said...

ನೆನಪುಗಳನ್ನು ತೊರೆಯೋಕ್ಕೆ ಆಗುತ್ತಾ..? ಸುತ್ತಿ ಸುತ್ತಿ ಬಂದು ನಮ್ಮನು ಕಾಡುತ್ತೆ...
ನಿಮ್ಮವ,
ರಾಘು.

ಮನಸಿನಮನೆಯವನು said...

ಪ್ರವೀಣ್ ಭಟ್ ,

ತಂಪು ತಂಪಾದ ಕವನ..
ತಿಳಿಮನಸ್ಸಿನ ಮೇಲೆ ನೆನಪಹನಿಗಳು ನಿರಂತರವಾಗಿ..

ಪ್ರವೀಣ್ ಭಟ್ said...

Ellarigu dhanyavaadagaLu..

@Raghu

hmm tolagi anta matinalli helidre hoglilla..

adke tolagi antha kavanadalli helde :)
Pravi

Ashok.V.Shetty, Kodlady said...

ಕಲ್ಲು ಹೊಡೆದು ಕಲಕದಿರಿ
ಹಳಯದೆಲ್ಲವ ಕೆಣಕದಿರಿ
ಆಗ ಕೆಸರಿತ್ತು ನಿಜ..
ಆದರೆ ಜೊತೆ ಕಮಲವೂ ಇತ್ತು..

Arthapurna saalugalu sir...Tumbaa Sundara Kavana...ista aitu....

Dileep Hegde said...

ಪ್ರೀತಿ ಬದುಕಲಿಲ್ಲ
ಬದುಕ ಪ್ರೀತಿಸಬೇಕಿದೆ...

ಆಹಾ...!! ಅದ್ಭುತ, ಸುಂದರ, ಮನ ತಟ್ಟುವ ಸಾಲುಗಳು... ಈ ಎರಡು ಸಾಲುಗಳು ಸಾಕು ಪ್ರವಿ.. ನಿಮ್ಮ ಕವನದ ಮಧುರ ಸವಿ ಸವಿಯಲು.. ಉತ್ತಮ ಕವಿತೆಗಾಗಿ ಧನ್ಯವಾದಗಳು...

ಪ್ರವೀಣ್ ಭಟ್ said...

Hi Ashok, Dileep.

tumba dhanyavadagaLu...

Pravi

Unknown said...

I really liked it !!!

ಪ್ರವೀಣ್ ಭಟ್ said...

Thanks Lokesh..

Pravi

Dhanu said...

ಪ್ರೀತಿ ಬದುಕಲಿಲ್ಲ
ಬದುಕ ಪ್ರೀತಿಸಬೇಕಿದೆ

- Loved this line a lot. Nice message.

Raj Hegde said...

ಆಗ ಕೆಸರಿತ್ತು ನಿಜ..

ಆದರೆ ಜೊತೆ ಕಮಲವೂ ಇತ್ತು..
Beautiful Praveen :)