Sunday, May 9, 2010

ಮಾತೃ ದೇವೋ ಭವ














ಅಮ್ಮ ಅನ್ನೋ ಪದ ಶಬ್ದಕ್ಕೆ ನಿಲುಕದ್ದು .. ಎರಡುವರೆ ಅಕ್ಷರದಲ್ಲಿ ಸಾವಿರ ಅರ್ಥವನ್ನು , ಸಾವಿರ ಭಾವವನ್ನು ಸೂಚಿಸುತ್ತೆ.

ಅಮ್ಮಂದಿರ ದಿನಾಚರಣೆಯ ಸಂದರ್ಭದಲ್ಲಿ ಈ ಕವನದ ಮೂಲಕ ಅಮ್ಮನಿಗೊಂದು ನಮನ




ಅಮ್ಮ....


ಅಮೃತದ ಕಡಲು,ಆ ನಿನ್ನ ಒಡಲು
ದುಃಖವನು ಮರೆಸಲು ಆ ನಿನ್ನ ಮಡಿಲು
ಬೇರೇನು ಬೇಕಿದೆ ನೀ ಜೊತೆಯಿರಲು
ಅಮ್ಮ,ನೀ ಆ ದೇವತೆಗಿಂತ ಮಿಗಿಲು

ಹೆತ್ತು ಹೊತ್ತು ಸಾಕಿ ಸಲಹಿ
ನಿತ್ಯ ನಿರಂತರ ಪ್ರೀತಿ ಎರೆದೆ
ಸಾವಿರಾರು ಕಷ್ಟದಲ್ಲಿ
ನೋವನುಂಡು ನಲಿವ ನೀಡಿದೆ

ಲಲ್ಲೆಗರೆದು ಮುದ್ದು ಮಾಡಿ
ಮೆಲ್ಲ ಮೆಲ್ಲನೆ ಮಾತ ಕಲಿಸಿದೆ
ಎದ್ದು ಬಿದ್ದು ಎಡವುತಿರಲು
ತಿದ್ದಿತೀಡಿ ನನ್ನನೆಡೆಸಿದೆ
ಬೆಳಕ ಬೀರಿ ದಾರಿ ತೋರಿ
ಬುದ್ದಿ ಹೇಳಿ ಬದುಕ ತಿಳಿಸಿದೆ

ಅಮ್ಮ ನೀನು ಶಬ್ದಾತೀತ
ನಿನ್ನ ಅರ್ಥ ಅನಂತ
ಅಮ್ಮ ನೀನು ಕಾಲಾತೀತ
ನಿನ್ನ ಮಮತೆ ಅನವರತ

ಅಮ್ಮ,ನೀನಿರದಿರೆ
ನನಗೆಲ್ಲಿಯ ಅಸ್ತಿತ್ವ
ನಮಿಪೆ ತಾಯೇ ನಿನಗೆ
ಮಾತೃ ದೇವೋ ಭವ

ಅಮ್ಮ,ನೀ ಪ್ರೀತಿ ತುಂಬಿದ ಕವಿತೆ
ನೀತಿ ತುಂಬಿದ ಕಥೆ
ಬದುಕು ಕಲಿಸಿದ ದೇವತೆ
ನಮಸ್ತೆ ನಮಸ್ತೆ ನಮಸ್ತೆ
ಒಲವಿನೊರತೆ ಓ ಜನ್ಮದಾತೆ

ಪ್ರೀತಿಯಿಂದ ಪ್ರವಿ



17 comments:

Unknown said...

i can tell ultimate!!!!! the word "AMMA" itself makes us to feel like HEAVEN

Ashok.V.Shetty, Kodlady said...

Hiii Praveen, Ammana bagge estu baredaru kadimene, ammana praamukhyatheyannu tumbaa sundaravaagi varnisiddiri....Tumbaa Chennagide...Thanks.

ಪ್ರವೀಣ್ ಭಟ್ said...

Hi Suppi, Ashok..

tumba dhanyavaadagaLu

Pravi

Anonymous said...

sakkat aagi iddu Praveen..

Nijavaagiyoo naavene maadidaroo ammana ruNa teerisuvudu asaadhya..

Unknown said...

Preethi, vatsalya mathu karune evala ammanindane kalthirodu. edakintha hechu koduge e sundara samajake yaru kodalu sadyavila. danyavadagalu Praveen.

ಪ್ರವೀಣ್ ಭಟ್ said...

Hi chetanakka, Ramu..

yava Runa adaru teerislakku adare ammana runa alla..

iga navu heegirodakke karana ammane

dhanyavaadagaLu

Pravi

Vivek - Kiran said...

awsom maga,, and about mother evrything is true, she is appearable godess

Lokesh said...

Tubma chennagi ede... :-)

Ranjita said...

mothers day ge chandada kavana ..
sakkattagiddu praveen :)

ಪ್ರವೀಣ್ ಭಟ್ said...

Hi VP, Lokesh,

Tumba dhanyavaadagaLu

Pravi

ಪ್ರವೀಣ್ ಭಟ್ said...

Hi Ranjitha,

Tumba Thanks .. hinge protsaha kodtiru :)

Pravi

Manju M Doddamani said...

ತುಂಬಾ ಚನ್ನಾಗಿ ಮೂಡಿ ಬಂದಿದೆ ಅಮ್ಮನ ಬಗ್ಗೆ ನಿಮ್ಮ ಕವನ ಹೀಗೆ ಬರಿಯುತ್ತಾ ಇರಿ !

ಪ್ರವೀಣ್ ಭಟ್ said...

Hi Manju

dhanyavaadagalu.. protsaaha nirantaravaagirali

pravi

ಜಲನಯನ said...

ಪ್ರವೀಣ್ ಅಮ್ಮನ ದಿನದ ಕವನ ಅಮ್ಮನ ನೆನಪುಗಳನ್ನು ಕೆದಕುವುದಂತೂ ಖಂಡಿತಾ ಅದರಲ್ಲೂ ನಮ್ಮಂಥ ತಾಯಿನಾಡಿನಿಂದ ಹೊರಗಿರುವ ಮತ್ತು ಅಮ್ಮ ನಿಂದ ದೂರವಿರುವವರಿಗೆ...
ನನ್ನ ಬ್ಲಾಗ್ ಗೆ ಭೇಟಿ ನೋಡಿ...
http://www.jalanayana.blogspot.com

ಪ್ರವೀಣ್ ಭಟ್ said...

ಹಾಯ್ ಜಲನಯನ ಸರ್

ತುಂಬಾ ಧನ್ಯವಾದಗಳು. ಪ್ರೋತ್ಸಾಹ ಸದಾ ಇರಲಿ


ನಿಮ್ಮ ಬರವಣಿಗೆ ಅದ್ಭುತ..

ಪ್ರವಿ

ಸ್ನೇಹಾ said...

Good one Praveen.... :) nicely written...

Anonymous said...

really superb praveen