ಮನೆಯಲ್ಲಿ
ಹೆಂಡತಿ ದುಡಿದ ದುಗ್ಗಾಣಿ
ಗಂಡನ ಕೈಯಲ್ಲಿ
ದಿನಸಿಯ ನೆಪದಲ್ಲಿ
ಎರಡು ದಿನದಿಂದ ಅಡುಗೆ ಕಾಣದ
ಪಾತ್ರೆಗಳೂ ಪತರಗುಟ್ಟುತ್ತಿವೆ
ಹಸಿವಿನಿಂದ..
ಮಕ್ಕಳ ಲೆಖ್ಖದಲ್ಲಿ
ಇದು ಶ್ರೀಮಂತ ಕುಟುಂಬ
ಕತ್ತಲೆಯ ಬೆತ್ತಲೆಯಲ್ಲಿ
ಎಂಟೋ ,ಹತ್ತೋ..
ಸತ್ತವು ಬಿಟ್ಟು.
ಜೋತುಬಿದ್ದ ಮೊಲೆಯಲ್ಲಿ
ರಕ್ತ ಹೀರುತ್ತಿದೆ ಕಂದಮ್ಮ
ದೇಹ ಕಟ್ಟಿಗೆ ಗೂಡು
ಕಾಯುತ್ತಿದ್ದಾಳೆ..
ಅಷ್ಟೇ ಅವಳ ಕೆಲಸ
ಕುಡುಕನಿಗಾಗಿ
ಕಟ್ಟಿಕೊಂಡ ಕರ್ಮಕ್ಕಾಗಿ..
ದಾರಿಯಲ್ಲಿ.
ಕರಾಳ ರಾತ್ರಿಯ ನಡುವೆ
ಕುಡುಕ ಮತ್ತು ಕರಿಕುನ್ನಿ
ಕತ್ತಲೆಯೇ ಬೆದರುವಂತೆ
ಕುನ್ನಿ ಮೂಸಿದ್ದೇ ದಾರಿ ಕುಡುಕನಿಗೆ
ಉದ್ದವಿದ್ದಷ್ಟು ಅಗಲವಿಲ್ಲ
ದಿನಸಿ..?
ದೈನೇಸಿ..!!
ಎಲ್ಲಾ ಹೊಟ್ಟೆಲಿದ್ದ ಪರಮಾತ್ಮನಾಟ
ಬಾಯಲ್ಲಿ ಭಗವದ್ಗೀತೆ
ಕೇಳಲು ಕಿವಿ ಬೇಕೆ?
ಕುನ್ನಿಯೇ ಅರ್ಜುನ.
ಕೃತಜ್ನ(ಘ್ನ) ಕುನ್ನಿ
ಮನೆ ಸೇರಿಸಿದೆ..
ಹಸಿದ(??)ಹೆಂಡತಿಯ ಮೇಲೆ
ಬಿದ್ದ ಹದ್ದು..
ಮತ್ತೊಂದಕ್ಕೆ ಮುಹೂರ್ತ.
ಹತ್ತರ ಜೊತೆ ಹನ್ನೊಂದು
ಬೆಳಗ್ಗೆ ಹತ್ತು ಉಳಿದಿದ್ದರೆ..
ಹೆಂಡತಿ ಬದುಕಿದ್ದರೆ..
ಪ್ರೀತಿಯಿಂದ ಪ್ರವಿ
6 comments:
ಹ್ಮ್,,ಕುಡುಕರ ಸಂಸಾರದ ಸ್ಥಿತಿ ಚಿಂತಾಜನಕ..
ತುಂಬಾ ಚೆನ್ನಾಗಿ ಮನ ಮುಟ್ಟುವಂತೆ ಬಣ್ಣಿಸಿದ್ದೀರಾ..
ಹೀಗೆಯೇ ನಿಮ್ಮ ಬರವಣಿಗೆ ಸಾಗಲಿ..
Hai Chetanakka,
hmm dudidadkinta jaasti kuduta.
iga Govnt packet ban madi swalpa olled madidda. ille andre ellelli beko allalli beeltidda
thanks protsaahakke
pravi
Poem touched the heart
good one
ಪ್ರವೀಣ್ ಭಟ್ ,
ನಾನು ಕೂಡ ಇತ್ತೀಚಿಗೆ ಇದೇ ಫೋಟೋ ಹಾಕಿ ಕುಡುಕರ ಬಗ್ಗೆ ಬರೆದಿದ್ದೆ..
ನಿಮ್ಮ ಮಾತುಗಳು ಸತ್ಯವಾದುವು..
Supreb one Praveen, Very Nice...Tumbaa arthapurna, Bhavapurna kavana....Tumbaaane ista aitu....
Hi Gurumoorthanna, Shettre..
tumba dhanyavadagaLu
Pravi
@jnanarpanamastu
Tumba dhanyavaadagaLu.. nimma kavananu nodide very nice one
Post a Comment