Tuesday, August 28, 2012

ಎರಡು ಕವನ , ವಸಂತ ಮತ್ತು ನೆಲವಿಲ್ಲ

ಸಂಪದ ಸಾಲಿನಲ್ಲಿ ಪ್ರಕಟವಾದ ನನ್ನ 2 ಕವನ , clear ಆಗಿ ಓದಲು ಕೆಳಗೆ ಮತ್ತೆ type ಮಾಡಿದ್ದೀನಿ ಓದಿ 




1. ವಸಂತ
=========
ಬದುಕು ಬರೀ ಭ್ರಮೆ , ಸುಳ್ಳೇ,
ಅದು ನೀರ ಮೇಲಿನ ಗುಳ್ಳೆ
ಎಂದು ಸಂತನಾಗ ಹೊರಟವನನ್ನು
ತಡೆದು ನಿಲ್ಲಿಸಿದ್ದು ವಸಂತ !

ಚಿಗುರು ಚೈತ್ರ
ಮಧುರ ಮೈತ್ರ
ಪ್ರತೀ ಧನಿಯೂ ಕೋಗಿಲೆ
ಹೆಜ್ಜೆ ಹೆಜ್ಜೆಯೂ ನವಿಲೇ !

ಗುಳ್ಳೆಗಳ ಮೇಲೆಲ್ಲಾ ಚಿತ್ತಾರ
ಮರೆತೇ ಹೊಯಿತು ಶಿಶಿರ
ಬದುಕೀಗ ಭೂರಮೆ !

ಹಬ್ಬಿರುವ ಹೂವುಗಳ ತಬ್ಬಿ
ಹದ ಮಾಡುತ್ತಿವೆ ದುಂಬಿ
ಸೃಷ್ಠಿಯ ಹುಟ್ಟಿಗೆ ಓಂಕಾರ
ಮನದಲ್ಲಿ ಸಾವಿರ ಆಸೆಗಳ ಝೇಂಕಾರ!

ಸಂತನಾಗ ಹೊರಟವನ
ಮನೆಯಲ್ಲೀಗ ಸಂತೆ
ಶಿಶಿರದ ಬೆನ್ನಲ್ಲೇ ವಸಂತ
ಬೇಕಿಲ್ಲ ಬೋಳಾಗುವ ಚಿಂತೆ
ಯಾಕೆ ಗುಳೆ !
ನೀರು ನಿಜ, ಒಡೆದರೂ ಗುಳ್ಳೆ
ನೀರವದ ನಂತರ ದಿವ್ಯ ಕಲರವ !

2. ನೆಲ- ವಿಲ್ಲಾ !
==========
ನೆಲ ಬಗೆಯುತ್ತಿದ್ದಾರೆ
ನೇಗಿಲಿನಿಂದಲ್ಲ

ಮುಂಗಾರು ಅಭಿಷೇಕವಾದಾಗ
ಮಿದು ಮಾಡಬೇಕು
ಉತ್ತಬೇಕು ಬಿತ್ತಬೇಕು
ಮತ್ತೆ ಮನಸು ಮಗುವಾಗಬೇಕು
ಮೃದುವಾಗಬೇಕು
ಮೈ ಹೊಲಸಾದಂತೆಲ್ಲಾ
ನೆಲ ಹುಲುಸು
ರಟ್ಟೆ ಮುರಿದರೆ ರೊಟ್ಟಿ
ಬಿತ್ತಿದರೆ ಬುತ್ತಿ
ನೆತ್ತರು ನೀರಾಗಬೇಕು
ಬೆವರು ಬಸಿದು ಬರಿದಾಗಬೇಕು

ಯಾವನಿಗೆ ಬೇಕು ?

ರೊಟ್ಟಿ ಬುತ್ತಿ ಅದು ಜಮಾನ
ಬಿಟ್ಟು ಹಣ ತಿನ್ನುತ್ತಿದ್ದಾರೆ ಜನ
ರಟ್ಟೆ ಹೊಟ್ಟೆ ..
ಎಲ್ಲವೂ ಜೀರ್ಣ
ಹಿಡಿ ಮಣ್ಣು ಹಿಂಡಿದರೆ
ಹಿಡಿಯಲಾಗದ ಕೋಟಿ
ಮತ್ತೆ ಮತ್ತೆ ಲೂಟಿ

ಬರೀ ಲೆಖ್ಖಾಚಾರ
ಭೂವಿವಸ್ತ್ರ ಅತ್ಯಾಚಾರ
ಅಗೆದು ಬಗೆದು
ಬರಿದೋ ಬರಿದು
ರಕ್ತ ಬೋರ್ - ಗರೆಯುತಿದೆ
ಕರುಳು ಉರುಳು
ಕತ್ತು ಕುತ್ತು
ಕಗ್ಗೊಲೆ..
ನೆಲಕ್ಕಿಲ್ಲಿಲ್ಲ ನೆಲೆ
ಜೀವಂತ ನೆಲದ ಮೇಲೆ
ಸಿಮೆಂಟಿನ ಸಮಾಧಿ !

ಬಾಯಿ ಮೊಸರು ?
ಮಣ್ಣು ಮುಕ್ಕಲು
ಕೈ ಕೆಸರಾಗಬೇಕಿಲ್ಲ ! 

11 comments:

ಸಂಧ್ಯಾ ಶ್ರೀಧರ್ ಭಟ್ said...

cholo iddu ...

N said...

Congrats and all the best..

umesh desai said...

chennagive kavitessn

ದಿನಕರ ಮೊಗೇರ said...

abhinandane ...chandada kavanakke dhanyavaada..

Dileep Hegde said...

ಸಂತನಾಗ ಹೊರಟೋರನ್ನು ತಡೆದು ನಿಲ್ಸೋದೆ ವಸಂತನ ಕೆಲಸ.. ಎರಡೂ ಕವನಗಳು ಚೆನ್ನಾಗಿವೆ....

ಭೋರ್ ಗರೆಯುತಿದೆ ರಕ್ತ ಓದಿದಾಗ ಅಂದುಕೊಂಡೆ.. ಇನ್ನು ಭೋರ್(ಕೊಳವೆ ಬಾವಿ) ಕೊರೆದರೆ ಹರಿಯೋದು ರಕ್ತವೇ ಹೊರತೂ ನೀರಲ್ಲ.. ಬಾಯಿ ಮೊಸರಾಗಳು ಕೈ ಕೆಸರಾಗಬೇಕಿಲ್ಲ.. ಜಮೀನು ಪತ್ರದ ಮೇಲೆ ಸೈ ಬಿದ್ದರಾಯ್ತು..

Ashok.V.Shetty, Kodlady said...

ಎರಡೂ ಕವನಗಳೂ ಇಷ್ಟ ಆಯಿತು ಭಟ್ರೆ, ಅಭಿನಂದನೆಗಳು.....ಲೈಕ್ ಬರೀತ್ರಿ ಮರ್ರೆ....ಮುಂದುವರ್ಸಿ...

sunaath said...

ಎರಡು ವಿಭಿನ್ನ ಬಗೆಯ ಕವನಗಳನ್ನು ಸುಂದರವಾಗಿ ಬರೆದಿದ್ದೀರಿ. ನೆಲ-ವಿಲ್ಲಾ ಭೂರಮೆಯೇ ಆಗಿರಲಿ ಎಂದು ಪ್ರಾರ್ಥಿಸುತ್ತೇನೆ!

ಪ್ರವೀಣ್ ಭಟ್ said...

Tumba dhanyavaadagaLu ಸಂಧ್ಯಾ ಶ್ರೀಧರ್ ಭಟ್, , ನಟರಾಜು ಎಸ್ ಎಂ, Umesh sir , Dinakar sir , Ashokanna ..

ಪ್ರವೀಣ್ ಭಟ್ said...

Dileep...

allave .. bhoomiyaala batti hogide .. janare janarannu kittu tinnuva dina dooravilla... protsaaha virali heege

Sunaath sir... Prati baravanigeyannoo poorti odi protsahisutteera .. tumba kushi aagutte .. onde vakyadalli erdu kavanagalannu link madiddeera... tumba dhanyavaadagalu

Raghunandan K Hegde said...

ಎರಡೂ ಕವನಗಳೂ ಚೆನ್ನಾಗಿವೆ.

ಮೊದಲನೆಯದರ ಜೀವನ್ಮುಖತೆ, ವಸಂತ ಗಾನದ ಸೊಗಸು ಇಷ್ಟವಾಯಿತು.

ಎರಡನೆಯದು ವಾಸ್ತವದ ಅನಿವಾರ್ಯತೆಗಳ ಚಿತ್ರಣ

ನಿಮ್ಮ ಅಭಿವ್ಯಕ್ತಿಯ ಸ್ವರೂಪ ಚೆಂದ

ಅಭಿನಂದನೆಗಳು

Anonymous said...

ಎರಡೂ ಕವನಗಳು ಬಿಡದೆ ಕಾಡಿದವು ... ಇಷ್ಟವಾಯ್ತು
ಹುಸೇನ್