Thursday, May 31, 2012

ಸಂಪದ ಸಾಲು ಪತ್ರಿಕೆಯಲ್ಲಿ ಪ್ರಕಟವಾದ ನನ್ನ 2 ಹೊಸ ಕವನ




ರಾತ್ರಿಯೆಂದರೆ !
=========

ರಾತ್ರಿಯೆಂದರೆ

ಬರೀ ಕತ್ತಲಲ್ಲ
ಬೆತ್ತಲಲ್ಲ
ಸುತ್ತ ಕಾಣುವ 
ಸತ್ತ ಜಗತ್ತಲ್ಲ 

ರಾತ್ರಿಯೆಂದರೆ 

ಬರೀ ಮೌನವಲ್ಲ
ನಿಶ್ಯಬ್ಧ ಗಾನವಲ್ಲ
ಹಗಲಿನ ಖೂನಿಯಲ್ಲ
ತೆವಲಿನ ತೇರಲ್ಲ

ರಾತ್ರಿಯೆಂದರೆ 

ಬರೀ ನಿದ್ದೆಯಲ್ಲ
ಬಚ್ಚಿಡುವ ಸುದ್ದಿಯಲ್ಲ
ಬೀಸಾಕುವ ರದ್ದಿಯಲ್ಲ
ಸ್ವಪ್ನ ಸೌಂದರ್ಯವಲ್ಲ

ರಾತ್ರಿಯೆಂದರೆ 

ಸೃಷ್ಠಿಯ ಕತೃ
ಮನಸ್ಸಿಗೆ ಭ್ರಾತೃ
ಅಳಲಿಗೆ ಸ್ರೋತೃ
ಎಚ್ಚರಿಸುವ ಶತ್ರು 

ರಾತ್ರಿಯೆಂದರೆ

ಅಮೂರ್ತ ಮೌನದೊಳಗಣ ಅರ್ಥ 
ಬೆಳಕ ಹೊತ್ತಿರುವ ಗರ್ಭ
ಹೆತ್ತು ಸಾಯುವ ತ್ಯಾಗಿ
ನಿತ್ಯ ಕಾಯುವ ಯೋಗಿ

ರಾತ್ರಿಯೆಂದರೆ 

ಅವಲೋಕನ
ಆರೋಹಣ , ಅವರೋಹಣ
ಭಿಕ್ಷೆ , ಪರೀಕ್ಷೆ
ನಾಳೆಯ ನಿರೀಕ್ಷೆ, ಪ್ರತೀಕ್ಷೆ 

ರಾತ್ರಿಯೆಂದರೆ

ಹಗಲಿನ ಮಿಥ್ಯವ 
ಹೇಳುವ 
ಬದುಕಿನ ಸತ್ಯ !



ಚಾಟು -- ಅಟ್ಯಾಚು !
============

ಓ...

ಎಷ್ಟೊಂದು ಜನ ಪರದೆಯಾಚೆ
ದೂರ , ಹತ್ತಿರ ಪರಿಧಿಯೇ ಇಲ್ಲ
ಸಮಯದ ಪರಿವೆಯಿಲ್ಲ
ನೆಂಟರೋ... ಭಂಟರೋ
ಆಪ್ತರೋ .. ಅಪ್ರಾಪ್ತರೋ.!

ಕೆಂಪು , ನೀಲಿ ....
ಅರೇ ... ಮತ್ತೊಂದು ಅದೃಶ್ಯ
ಹತ್ತು ಹೆಲ್ಲೋ .. ಹಾಯ್
ಒಂದೆರಡು ಬಾಯ್ ..

ಕಣ್ಣಿಟ್ಟು ನೋಡು
ಕಣ್ಣನೆಟ್ಟು ನೋಡು
ಉಹೂ ಅದ್ಯಾವುದೂ ಬೇಕಿಲ್ಲ..
ಕಣ್ಣು.. ನೆಟ್ ನೋಡು
ಭಾವವೇನೋ.. ಭಾಷೆಯಷ್ಟೇ ..

ಮುಗುಳು ನಗು, ಮಿಗಿಲು ನಗು
ಸಿಗದ ಮುಗಿಲು ನಗು
ಲಿಪ್ಪಿನಲ್ಲೇ ಹುಟ್ಟಿದೆ ಪ್ರೀತಿ
ಆಚೆ ಯಾರೋ ಇಲ್ಲ ಭೀತಿ ..
ಸಿಟ್ಟು ಸೆಡವು, ದುಃಖ
ಎಲ್ಲಾ ಅಲ್ಲೆ ಅಕ್ಕ ಪಕ್ಕ
ಹಾಲ್ಟು ಮಾಡದ ಆಲ್ಟು
ಬದಲಾಗದ ಶಿಫ್ಟು
ನಿಯಂತ್ರಣವಿಲ್ಲದ control
ಒತ್ತರಿಸಿ ಬಂದ ಅಳುವಿಗೂ..
ಮತ್ತದೇ .. ಒತ್ತು ..

ಸೋಲಿಗೊಂದು ಸಾಂತ್ವನ
ಗೆಲುವಿಗೊಂದು ಶಹಭಾಷ್
ಸಂತೈಸುವ ಅಪ್ಪುಗೆ
ಪ್ರೀತಿಯ ಒಪ್ಪಿಗೆ
ಕಣ್ಣೀರು ಒರೆಸುವ ಕೈ
ಹರಿದರೂ ಸಿಗದು ಪರದೆಯಾಚೆ
ಮಿತ್ರರೋ.. ಮಿಥ್ಯವೋ
ಸತ್ತರೋ .. ಸತ್ಯವೋ..
ಸಲ್ಲಾಪ.. ಆಲಾಪ
ಎಷ್ಟು ಮಜಾ,.. ಎಷ್ಟು ನಿಜ.. ?
ನನ್ನದೂ ಜೈ, ನಿನ್ನದೂ ಜೈ..

ಹೆಚ್ಚೋ.. ಹುಚ್ಚೋ...
ಅಚ್ಚು ಮೆಚ್ಚು.. ಭ್ರಮೆಯ ಬದುಕು ....

7 comments:

ಕಾವ್ಯಾ ಕಾಶ್ಯಪ್ said...

nice pravi... :)

ಜಲನಯನ said...

ಪ್ರವೀಣ್ ಚನ್ನಾಗಿವೆ ಎರಡೂ ಕವನ...ಅದ್ರಲ್ಲೂ ಚಾಟು ಅಟ್ಯಾಚು ಸೂಪರ್

Unknown said...

ರಾತ್ರಿಯೆಂದರೆ ಕವನ ತುಂಬಾ ಹಿಡಿಸಿತು ಪ್ರವೀಣ್. ಪ್ರಾಸದ ತ್ರಾಸದ ನಡುವೆಯೂ ಚೆಂದದ ಭಾವಗಳನ್ನು ಹಿಡಿದಿಟ್ಟಿದ್ದೀರಿ.....

sunaath said...

Great!

kavyadarsha said...

Realy nice.. superb.

ಸಂಧ್ಯಾ ಶ್ರೀಧರ್ ಭಟ್ said...

Eradu kavanagalu chennagive.. Chatu atyachu nijakku hidisitu

Dileep Hegde said...

ರಾತ್ರಿಯೆಂದರೆ ತುಂಬಾ ಇಷ್ಟವಾಯ್ತು..