ಅರಗಿಸಿಕೊಳ್ಳಲಾರೆ ನಾ..
ಹೇಳದೇ ಹೋಗು ಕಾರಣ !
ಹೇಳದೇ ಹೋಗು ಕಾರಣ !
ಒಳಗೆ ಉರಿವ ಒಲವ ಭಾದೆ
ಹರಿದು ಬಂತು, ತಡೆಯದಾದೆ
ಅಳಿದ ಮೇಲೆ ನಿನ್ನ ಪ್ರೀತಿ
ಅಳುವು ತಾನೆ ನನ್ನ ಸಾಥಿ !
ಕೆಳಗೆ ಬಿದ್ದ ಹನಿಯ ತುಂಬಾ
ಹೊರಟು ನಿಂತ ನಿನ್ನ ಬಿಂಬ ..
ಅರಗಿಸಿಕೊಳ್ಳಲಾರೆ ನಾ..
ಹೇಳದೇ ಹೋಗು ಕಾರಣ !
ಹರಿದು ಬಂತು, ತಡೆಯದಾದೆ
ಅಳಿದ ಮೇಲೆ ನಿನ್ನ ಪ್ರೀತಿ
ಅಳುವು ತಾನೆ ನನ್ನ ಸಾಥಿ !
ಕೆಳಗೆ ಬಿದ್ದ ಹನಿಯ ತುಂಬಾ
ಹೊರಟು ನಿಂತ ನಿನ್ನ ಬಿಂಬ ..
ಅರಗಿಸಿಕೊಳ್ಳಲಾರೆ ನಾ..
ಹೇಳದೇ ಹೋಗು ಕಾರಣ !
ಕನಸಲ್ಲಿ ಬಾ ಎಂದೆ
ಕನಸಾದೆಯಲ್ಲೇ..
ವಶವಾಗು ಬಾ ಎಂದೆ
ವಿಷವಾದೆಯಲ್ಲೇ ..
ಅದ್ಯಾವ ಮೋಡಿ ಮರೆಸೀತು ನನ್ನ
ಅದೇಕೆ ಇಂತಾ ನಿರಾಕರಣ
ಅರಗಿಸಿಕೊಳ್ಳಲಾರೆ ನಾ..
ಹೇಳದೇ ಹೋಗು ಕಾರಣ !
ಕನಸಾದೆಯಲ್ಲೇ..
ವಶವಾಗು ಬಾ ಎಂದೆ
ವಿಷವಾದೆಯಲ್ಲೇ ..
ಅದ್ಯಾವ ಮೋಡಿ ಮರೆಸೀತು ನನ್ನ
ಅದೇಕೆ ಇಂತಾ ನಿರಾಕರಣ
ಅರಗಿಸಿಕೊಳ್ಳಲಾರೆ ನಾ..
ಹೇಳದೇ ಹೋಗು ಕಾರಣ !
ಸತ್ತು ಹೋಗಿದೆ ಮನಸು
ಅರ್ಥವಾಗದು ಏನೂ..
ವ್ಯರ್ಥವಾಗುವ ಮಾತು
ಸಾವಿರ ಸಾರಿ ಹೇಳಿದರೂನೂ
ಆದ ಗಾಯ ಮಾಯಬೇಕು
ಅಲ್ಲಿ ತನಕ ಕಾಯಬೇಕು
ಬಿಟ್ಟ ಮೇಲೆ ನೀನು ನನ್ನ
ಸುಮ್ಮನೇಕೆ ಕಾಲಹರಣ
ಅರಗಿಸಿಕೊಳ್ಳಲಾರೆ ನಾ..
ಹೇಳದೇ ಹೋಗು ಕಾರಣ !
ಅರ್ಥವಾಗದು ಏನೂ..
ವ್ಯರ್ಥವಾಗುವ ಮಾತು
ಸಾವಿರ ಸಾರಿ ಹೇಳಿದರೂನೂ
ಆದ ಗಾಯ ಮಾಯಬೇಕು
ಅಲ್ಲಿ ತನಕ ಕಾಯಬೇಕು
ಬಿಟ್ಟ ಮೇಲೆ ನೀನು ನನ್ನ
ಸುಮ್ಮನೇಕೆ ಕಾಲಹರಣ
ಅರಗಿಸಿಕೊಳ್ಳಲಾರೆ ನಾ..
ಹೇಳದೇ ಹೋಗು ಕಾರಣ !
7 comments:
ಸಂಕಟದ ಮುಖವೊಂದನ್ನು ತೋರುವ ಉತ್ತಮ ಭಾವಗೀತೆ.
ಅಳಲು ತುಂಬಿದ ಸಾಲ್ಗಳು
Welcome back..
ತುಂಬಾ ಸಮಯದ ನಂತರ ದುಖದಲ್ಲೇ ಶುರುಮಾಡ್ದಾಂಗಿದ್ದು .. ಕವನ ಚನ್ನಾಗಿದೆ,
ಭಾವಗಳು ಬಹಳ ಚೆನ್ನಾಗಿ ನಿರೂಪಿತವಾಗಿವೆ...
very nice
ಅರೆ ಪ್ರವಿ...! ಎಲ್ಲಿ ಕಳ್ದೊಗಿದ್ದೆ ಇಷ್ಟ್ ದಿನ....?! ಇಷ್ಟು ದಿನದ ಮೇಲೆ ಬಂದು ಕೂಡ ದುಃಖದ ಸಾಲು ಎಂತಕ್ಕೆ..?? ಸಾಲುಗಳು ಸೂಪರ್ ಇದ್ದು ಹೇಳದು ಸುಳ್ಳಲ್ಲ ಮತ್ತೆ... :)
ಸುನಾಥ್ ಸರ.. ವಿಚಲಿತ .. IKB ಮೌನರಾಗ ಕಾವ್ಯ .. ಎಲ್ಲರಿಗೂ ಧನ್ಯವಾದ .. ಸುಖಕ್ಕಿಂತ ದುಃಖದ ತೀವ್ರತೆ ಜಾಸ್ತಿ ಅಲ್ವ :) .. next ಒಳ್ಳೆ ಕುಷಿ ಪೋಸ್ಟ್ ಹಾಕಿದ್ದಿ .. ನೋಡಿ
Hi Pravi,
ellidri marayre? kambk illa ???
Chennagide nimma kavana....
Post a Comment