ಸುತ್ತ ಬಾಗಿಲಿರದ ಮನೆ
ಕಟ್ಟಿಕೊಂಡಿದ್ದು ನಾವೇ...
ಸಿಎಫ್ಎಲ್ ನ ಸಾಮ್ರಾಜ್ಯದಲ್ಲಿ
ಸೂರ್ಯ ರೇಕುಗಳಿಗಿಲ್ಲ ಪ್ರವೇಶ
ತಣ್ಣನೆ ಏಸಿಯ ನಡುವೆ
ಬೀಸುಗಾಳಿಗಿಲ್ಲ ಅವಕಾಶ
ರೋಸು ಲ್ಯಾವೆಂಡರ್ ಮಲ್ಲಿಗೆ
ಕಂಪು ಹರಡುತಿದೆ ಮೆಲ್ಲಗೆ
ಚೆಲ್ಲಾಪಿಲ್ಲಿ ಚಿಲಿಪಿಲಿಯ ಜೊತೆಗೆ
ಬೆರಳ ತುದಿಯಲ್ಲಿ ಜಗತ್ತು
ಕುಣಿಯುತ್ತಲಿತ್ತು,ಗತ್ತು ,ಗಮ್ಮತ್ತು
ಸೂಟು ಬೂಟು ಸೂಟ್ ಕೇಸ್ ಮಧ್ಯ
ಬೇಕಿಲ್ಲ ವಿಶ್ವಾಸ
ಹಣ ಹೆಸರು ಉಚ್ವಾಸ ನಿಶ್ವಾಸ
ಸ್ವರ್ಗಕ್ಕೆ ಮೂರು ಮುಕ್ಕಾಲು ಗೇಣು
ಅಡ್ಡವಿದ್ದದ್ದು ಬರಿದೇ,..ಪರದೆ !!
ಆದರೂ
ಉಸಿರುಗಟ್ಟುತಿದೆಯೇಕೆ?
ಏಸಿಯಲೂ ಮೈ ಒಳಗೆ ಸೆಖೆ
ಕತ್ತು ಹಿಂಡುತಿದೆ . ಎಲ್ಲಾ ಕೃತಕ
ಸುತ್ತ ಕಾಣುವ ಛಾಯೆ ಸೂತಕ
ಪರದೆಯಾಚೆಗಿನ ನಾಕ
ಬರೀ.. ನಾಟಕ
ದಾಟಲಾಗದ ಪರಿಧಿಯಿದು
ಒಳಗೆ ಭಾರೀ ನರಕ
ಎಲ್ಲಿ ಹೋಯಿತು
ಮೊದಲ ಮಳೆಯ ಮಣ್ಣ ಕಂಪು
ಮನವ ತಣಿಸುವ ಹಕ್ಕಿಯಿಂಪು
ಮುತ್ತಿಕ್ಕುವ ಗಾಳಿ,ಮತ್ತೆ ಸೋಕುವ ಸೂರ್ಯ
ಸುತ್ತ ಸೆರುವ ಗೆಳೆಯರ ಗುಂಪು
ಕಳೆದುಕೊಂಡಲ್ಲಿ ಹುಡುಕು
ಕಡಿದುಕೊಂಡಿರುವ ಬದುಕು
ಸುಲಭವಲ್ಲ,ಹೊರ ದಾರಿಯಿಲ್ಲ
ಬಾಗಿಲಿರದ ಗೋಡೆ
ಹೋದಲ್ಲೆಲ್ಲಾ ತಡೆ...
ಒಡೆದು ಅರಳಬೇಕು .. ಇಲ್ಲಾ
ಒಳಗೆ ನರಳಬೇಕು..
----ಪ್ರೀತಿಯಿಂದ ಪ್ರವಿ
ಕಟ್ಟಿಕೊಂಡಿದ್ದು ನಾವೇ...
ಸಿಎಫ್ಎಲ್ ನ ಸಾಮ್ರಾಜ್ಯದಲ್ಲಿ
ಸೂರ್ಯ ರೇಕುಗಳಿಗಿಲ್ಲ ಪ್ರವೇಶ
ತಣ್ಣನೆ ಏಸಿಯ ನಡುವೆ
ಬೀಸುಗಾಳಿಗಿಲ್ಲ ಅವಕಾಶ
ರೋಸು ಲ್ಯಾವೆಂಡರ್ ಮಲ್ಲಿಗೆ
ಕಂಪು ಹರಡುತಿದೆ ಮೆಲ್ಲಗೆ
ಚೆಲ್ಲಾಪಿಲ್ಲಿ ಚಿಲಿಪಿಲಿಯ ಜೊತೆಗೆ
ಬೆರಳ ತುದಿಯಲ್ಲಿ ಜಗತ್ತು
ಕುಣಿಯುತ್ತಲಿತ್ತು,ಗತ್ತು ,ಗಮ್ಮತ್ತು
ಸೂಟು ಬೂಟು ಸೂಟ್ ಕೇಸ್ ಮಧ್ಯ
ಬೇಕಿಲ್ಲ ವಿಶ್ವಾಸ
ಹಣ ಹೆಸರು ಉಚ್ವಾಸ ನಿಶ್ವಾಸ
ಸ್ವರ್ಗಕ್ಕೆ ಮೂರು ಮುಕ್ಕಾಲು ಗೇಣು
ಅಡ್ಡವಿದ್ದದ್ದು ಬರಿದೇ,..ಪರದೆ !!
ಆದರೂ
ಉಸಿರುಗಟ್ಟುತಿದೆಯೇಕೆ?
ಏಸಿಯಲೂ ಮೈ ಒಳಗೆ ಸೆಖೆ
ಕತ್ತು ಹಿಂಡುತಿದೆ . ಎಲ್ಲಾ ಕೃತಕ
ಸುತ್ತ ಕಾಣುವ ಛಾಯೆ ಸೂತಕ
ಪರದೆಯಾಚೆಗಿನ ನಾಕ
ಬರೀ.. ನಾಟಕ
ದಾಟಲಾಗದ ಪರಿಧಿಯಿದು
ಒಳಗೆ ಭಾರೀ ನರಕ
ಎಲ್ಲಿ ಹೋಯಿತು
ಮೊದಲ ಮಳೆಯ ಮಣ್ಣ ಕಂಪು
ಮನವ ತಣಿಸುವ ಹಕ್ಕಿಯಿಂಪು
ಮುತ್ತಿಕ್ಕುವ ಗಾಳಿ,ಮತ್ತೆ ಸೋಕುವ ಸೂರ್ಯ
ಸುತ್ತ ಸೆರುವ ಗೆಳೆಯರ ಗುಂಪು
ಕಳೆದುಕೊಂಡಲ್ಲಿ ಹುಡುಕು
ಕಡಿದುಕೊಂಡಿರುವ ಬದುಕು
ಸುಲಭವಲ್ಲ,ಹೊರ ದಾರಿಯಿಲ್ಲ
ಬಾಗಿಲಿರದ ಗೋಡೆ
ಹೋದಲ್ಲೆಲ್ಲಾ ತಡೆ...
ಒಡೆದು ಅರಳಬೇಕು .. ಇಲ್ಲಾ
ಒಳಗೆ ನರಳಬೇಕು..
----ಪ್ರೀತಿಯಿಂದ ಪ್ರವಿ
10 comments:
ಕವನ ತುಂಬಾ ಚನ್ನಾಗಿದೆ ..
ನಿಮ್ಮ ಕಲ್ಪನೆಗಳು ವಿಭಿನ್ನ ಹಾಗು ಸಮಯೋಚಿತವಾದವು ಇಂತಹ ಕಲ್ಪನೆಗಳು ಎಲ್ಲರಲ್ಲೂ ಇರೋಲ್ಲ ನಿಮ್ಮ ಬರವಣಿಗೆಯ ಪರಿಕಲ್ಪನೆಗಳು ಮತ್ತಷ್ಟು ಮಗದಷ್ಟು ಬರವಣಿಗೆಯ ರೂಪದಲ್ಲಿ ಮೂಡಿ ಬರಲಿ
--
ಸತೀಶ್ ಬಿ ಕನ್ನಡಿಗ
ಅದ್ಭುತ ವಾಗಿದೆ ನಿಮ್ಮ ಕವನ,
ಇದು ಆಧುನಿಕ ಜೀವನದ ಕೈ ಗನ್ನಡಿ..
-Hemanth
hmm... kaledukondalle hudukabekide...
chandada kavana...
ಏಸಿಯಲೂ ಮೈ ಒಳಗೆ ಸೆಖೆ
ಕತ್ತು ಹಿಂಡುತಿದೆ . ಎಲ್ಲಾ ಕೃತಕ
ಸುತ್ತ ಕಾಣುವ ಛಾಯೆ ಸೂತಕ
ಪರದೆಯಾಚೆಗಿನ ನಾಕ
ಬರೀ.. ನಾಟಕ
ದಾಟಲಾಗದ ಪರಿಧಿಯಿದು
ಒಳಗೆ ಭಾರೀ ನರಕ
ನಿಜವಾಗಿಯೂ ಅದ್ಭುತ ಸಾಲುಗಳು...:)
ಕೊನೆಯ ಸಾಲುಗಳು ಇಷ್ಟವಾದವು..
ಒಳ್ಳೇ ಕವನ.. ಜೇಡರ ಬಲೆ ಇದ್ದ ಹಾಗೆ.. ಆದರೆ ಜೇಡಾಕ್ಕಾದ್ರೂ ತಪ್ಪಿಸಿಕೊಂಡು ಹೋಗ್ಬೋದು..
ಪ್ರವೀಣ,
ನಶಿಸುತ್ತಿರುವ ಮಾನವೀಯ ಸಂಬಂಧಗಳ ಬಗೆಗೆ, ಸಹಜ ಜೀವನದ ಬಗೆಗೆ ತುಂಬ ಸೊಗಸಾದ ಕವನ ರಚಿಸಿದ್ದೀರಿ. ಅಭಿನಂದನೆಗಳು.
ಪ್ರವೀಣ್ ಸರ್,
ಹುಡುಕುವುದು ಎಲ್ಲಿ....? ಬಾಗಿಲಿರದ ಮನೆ..... ಕಾಣದ ಕಿಟಕಿಗಳಾ ನಡುವೆ...
ಚೆನ್ನಾಗಿದೆ ಕವನ.....
Hey Pravi , Concept thumba chennagide. IT jeevanada janagala naijatheya kavanavagide.
-Pavi
ನಿಮ್ಮ ಕವನಗಳು ವಾಸ್ತವಕ್ಕೆ ಹತ್ತಿರವಾಗಿದೆ.
ಬಾಗಿಲಿರದ ಗೋಡೆ.. ಹೋದಲೆಲ್ಲಾ ತಡೆ.
ಒಡೆದು ಅರಳಬೇಕು.. ಇಲ್ಲವೇ
ಒಳಗೆ ನರಳಿ ಸಾಯಬೇಕು.
ಇದು ಬಹುಷಃ ಎಲ್ಲರ ಬದುಕು.
Post a Comment