skip to main |
skip to sidebar
ಮುಂಜಾನೆ ವೇಳೆ
ಹಸಿರೆಲೆಯ ಮೇಲೆ
ಇಬ್ಬನಿ ಕಟ್ಟಿದೆ ಮುತ್ತಿನ ತೋರಣ
ಹನಿಹನಿಗಳಲ್ಲಿ
ಹೂ ನಗೆಯ ಚೆಲ್ಲಿ
ಕಾಡುತಿಹ ಬಿಂಬವದು ನೀನೇನಾ?
ಸೋಕಲು ಸೂರ್ಯನ
ಬೆಚ್ಚನೆ ಕಿರಣ
ಇಬ್ಬನಿ ಕರಗಿದೆ ಹೇಳದೇ ಕಾರಣ
ಹನಿಯಲಿ ಹೊಳೆಯುತ
ಸುಮ್ಮನೆ ನಾಚುತಾ
ಕಣ್ತಪ್ಪಿಸಿ ಕಾಣೆಯಾದ ಕಿನ್ನರಿ ನೀನೇನಾ?
ಎಲೆಗಳ ಮರೆಯಲಿ
ಹಕ್ಕಿಯ ಚಿಲಿಪಿಲಿ
ಮತ್ತದೋ ಕೋಗಿಲೆ ಮಂಜುಳ ಗಾನ
ಮಧುರದಿ ಹಾಡಿದ
ಮನವನು ತಣಿಸಿದ
ಕೇಳಲು ಮುದವಾದ ದನಿಯದು ನೀನೇನಾ?
ಮುಸ್ಸಂಜೆ ಸಮಯ
ಸೌಂದರ್ಯಮಯ
ಆಗಸದ ರಂಗೋಲಿಗೆ ನೇಸರನದೇ ಬಣ್ಣ
ಮನ ಕಣಕಣದಲ್ಲೂ
ಕಾಮನಬಿಲ್ಲು
ಮೂಡಿಸಿ ಮಾಯವಾದ ಮೋಹಿನಿ ನೀನೇನಾ?
ಕನ್ನಡಿ ತುಂಬಾ
ನಿನ್ನದೇ ಪ್ರತಿಬಿಂಬ
ಕಾಣದಾದೆ ನನ್ನೇ ನಾ,ನಾನಿನ್ನು ನಾನಾಗಿ ಉಳಿದೇನಾ?
ಎಲ್ಲೆಲ್ಲೂ ನೀನೇ
ಆವರಿಸಿದೆ ನನ್ನೇ
ಉಳಿದಿಲ್ಲ ಅನುಮಾನ,ಈಗ ನೀನೇ-ನಾ !!!
ಪ್ರೀತಿಯಿಂದ ಪ್ರವಿ
26 comments:
tumba chennagide pravi
nice poem pravi ishta aatu
Tumba chennagi ede....!!
naagide.... munduvarisi.......
ಸೊಗಸಾದ ಸಾಲುಗಳು... ತುಂಬಾ ಇಷ್ಟ ಆಯ್ತು...
ಚೆನ್ನಾಗಿದೆ ಕವನ..
ನಿಮ್ಮವ,
ರಾಘು.
supper agide batre nim kavana....
ನೀನೇ-ನಾ !!! edu aste...
very nice kavana.. last para tumba ishta aytu :)
Superb :)
ಹಾಯ್ ಪ್ರವೀಣ್,
ಸುಂದರ ಸಾಲುಗಳು
ಮನವನು ತಣಿಸಿವೆ
ಹೊಸ ಹೊಸ ಬಗೆಯದು
ಕವನದಿ ಕಂಡಿದೆ
ಮನದಲಿ ಒಂದು
ಸಂಶಯ ಮೂಡಿದೆ...ಬರೆದವ ನೀನೇನಾ?? ನೀನೇನಾ? ?
ತುಂಬಾ ತುಂಬಾ ಇಷ್ಟ ಆಯಿತು....
nice one.....
ಕವನ ರಸಮಯವಾಗಿದೆ, ಕೊನೆಯ ಪ್ಯಾರಾ ಅಂತೂ ಬಹಳ ಚೆನ್ನಾಗಿದೆ.
೨ ನೆಯ ಕವಿತೆ ಬಲು ಅಂದ.(
sakkattagiddu!!.. :-)
chenda baradyo
@swathi, soumya, lokesh..
tumba dhanyavadagaLu
Pravi
Dinakar sir...
Thanks.. protsaha irali sada..
Pragathi..
nan blog ge swagatha.. barta iri.. dhanyavadagalu
Raghu, poornima, ranju, manju..
tumba thanks.
Ashok,
Kavanakke kavanadalle protsaha..
dhanyavada.. nane bardiddu :):)
VR bhat sir tumba dhanyavada
Hemanth ..
nan blog ge swagatha.. barta iri.. dhanyavada
sagari..
Thanks a much mechchikondiddakke
kattale mane..
dhanyavaada.. barta iri
Divya, gurumoorthanna..
Thanks mechchikondiddakke...
protsahavirali..
ಇದೊಂಥರಾ ಮೋಹ, ಇಲ್ಲಿದ್ದಾಗ ಅಲ್ಲಿಗೇ ಹೋಗಬೇಕು, ಅಲ್ಲಿಯೇ ಇರಬೇಕು, ಅಲ್ಲಿಗೆ ಹೋದಾಗ ಇಲ್ಲಿಗೆ ಬರಬೇಕು ಎಂಬುದು. ಒಂದಿಷ್ಟು ವರ್ಷ ಒಂದು ಪರಿಸರದಲ್ಲಿ ಹೊಂದಿಕೊಂಡು ಬದುಕಿದವನಿಗೆ ಇನ್ನೊಂದು ಪರಿಸರ ಕ್ರೂರಿಯಂತೇ ಕಾಣುವುದು ನಿಜಕ್ಕೂ ಸುಳ್ಳಲ್ಲ. ಆದರೆ ಬದುಕು ಇರುವುದೇ ಆ ಕ್ರೂರತನದ ನಡುವೆ ಎಂಬುದೂ ಸುಳ್ಳಲ್ಲ. ????
ಒಂದೇ ಸಾಲಿನ ಕಥೆ ಹೇಳ್ತೇನೆ ಈ ಕಮೆಂಟಿನಲ್ಲಿ ನಿಮ್ಮ ಕೊನೆಯ ಸಾಲುಗಳನ್ನ ಓದಿ, ಬೇಸರಿಸಿಕೊಳ್ಳಬೇಡಿ;
`ಕನ್ನಡಿ ತುಂಬಾ ನಿನ್ನದೇ ಪ್ರತಿಬಿಂಬ, ಬಿದ್ದು ಒಡೆದು ಅದು ನೂರು ಚೂರಾದರೆ ಅದರಲ್ಲಿ ನಿನ್ನ ನೂರು ನೂರು ಬಿಂಬ. ನನಗೆ ಬೇಡ ಇಡೀ ಕನ್ನಡಿ!
ಧನ್ಯವಾದ
vinbht.blogspot.com
ಚೆನ್ನಾಗಿದ್ದು...
Hi Vinayaka Bhat..
Yes.. nimma matu akasharshaha satya..
aadare.. kannadi odeyada haage ittukolluvudu namma kaiyallide taane.. aadastu kapadikollabeku.. innu kai meeridaga enu madalu baruvudilla... churada kannadi churada hrudaya... ondu maduvudu kasta..
Pravi
Sridhar,
Dhanyavada... barta iri blog ge..
Pravi
Kavana chennagide.. especially the Last para is too good.
Post a Comment