Wednesday, June 16, 2010

ಸತ್ತ ಪ್ರೀತಿಗೊಂದು ಗೋರಿ



ಸತ್ತ ಪ್ರೀತಿಯ ನೆನಪಲ್ಲೊಂದು

ಗೋರಿ ಕಟ್ಟಿರುವೆ

ನೆನಪುಗಳು ಕರಗದಂತೆ

ತಾಜ್ ಮಹಲ್ ನಿವಾಳಿಸಿ

ಒಗೆಯಬೇಕು ಹಾಗೆ...


ಜಲ್ಲಿ:ನೀ ಕೊಟ್ಟ ಉಡುಗೋರೆ

ಮರಳು:ಉಳಿಸಿಹೋದ ಪ್ರೀತಿಚೂರು

ಸಿಮೆಂಟ್ :ನೀ ಬರೆದ ಪತ್ರ

ನೀರು..? ಕಣ್ಣೀರು..

ನೆನಪುಗಳು ಒಳಗೆ ಭದ್ರ

[ಹೃದಯ ಛಿದ್ರ ಛಿದ್ರ ]


ಜನನ:

ಪ್ರೀತಿ ಹುಟ್ಟಿದ ದಿನ ನೆನಪಿಲ್ಲ

ನಿನ್ನ ನೋಡಿದಾಗಲೋ

ನೋಡಿ ನಡೆದಾಗಲೋ

ಕಣ್ಣು ಮಾತನಾಡಿದಾಗಲೋ

ತುಟಿ ಅರಳಿದಾಗಲೋ

ಸಧ್ಯಕ್ಕೆ:ಪ್ರೀತಿ ನಿವೇದಿಸಿಕೊಂಡ ದಿನ

ಆಮೇಲೆ ಪ್ರತೀ ದಿನ


ಮರಣ:

ಮರೆಯಲಾರದ ದಿನಾಂಖ

ಕಾರಣ,ಸತ್ತ ದಿನವೇ ಕಟ್ಟಿದ ಗೋರಿ

ಕೆತ್ತಿದ ಈ ಬರಹ

:ನೀನು ಏಕಾಏಕಿ ಕೈ ಕೊಟ್ಟ ದಿನ

ಕೈ ಬಿಟ್ಟ ಕ್ಷಣ

ತಿರುಗಿ ನೋಡದೇ ಹೋದ ದಿನ

ತುಟಿಯಲ್ಲಿ ಅಟ್ಟಹಾಸವೋ..

ಅಸಹಾಯಕತೆಯೋ..


ಶ್ರದ್ಧಾಂಜಲಿ ಕಳಿಸುವ ವಿಳಾಸ

ಆರದ ಗಾಯ

c/o ಭಗ್ನ ಹೃದಯ

ಮುರಿದ ನಿಲಯ

ಅಪಘಾತ ವಲಯ

PIN:ಅವಶ್ಯಕತೆ ಇದಿಯಾ?

ಅನಿಸುತ್ತಿಲ್ಲ.....


...ಅಮರ ಪ್ರೇಮಿ..


ಪ್ರೀತಿಯಿಂದ ಪ್ರವಿ



17 comments:

ಮನದಾಳದಿಂದ............ said...

ಯಾಕೋ ಏನೋ
ಪ್ರೀತಿಗೊಂದು ಗೋರಿ?
ನೆನಪುಗಳಿಗಿಲ್ಲ ಸಾವು
ಅದನ್ಯಾಕೆ ಮರೆತಿರಿ?
ಚೆನ್ನಾಗಿದೆ...........
ಕೈ ಕೊಟ್ಟ ಪ್ರೇಮಿಯ ನೆನಪುಗಳಿಗೆ ಗೋರಿ ಕಟ್ಟಿದ ನಿಮ್ಮ ರೀತಿ ಚೆನ್ನಾಗಿದೆ.
ಸುಂದರ ಕವನ.....

Dileep Hegde said...

ಕವನ ತುಂಬಾ ಇಷ್ಟವಾಯ್ತು ಪ್ರವೀ..
ಗೋರಿ ಕಟ್ಟಿ ಬಧ್ರವಾಗಿ ಬಚ್ಚಿಟ್ಟರೂ ಅಲ್ಲೇ ಗೋರಿಯ ಗೋಡೆಯ ಬಿರುಕಿನ ಮಧ್ಯೆ ಪ್ರೀತಿ ಮತ್ತೆ ಚಿಗುರೊಡೆದಿರುತ್ತದೆ.. ಪ್ರೀತಿಯ ಸಾವು ಸಾಧ್ಯವಿಲ್ಲದ ಮಾತು...

ಸಾಗರಿ.. said...

ಬಹಳ ಚೆನ್ನಾಗಿದೆ ಗೋರಿ ಕಟ್ಟಿಸಿದ ರೀತಿ. ಕವನ ಕೂಡ ಬಹಳ ಚೆನ್ನಾಗಿದೆ

Soumya. Bhagwat said...

ನಿಜ ತುಂಬಾ ಚೆನ್ನಾಗಿ ಮೂಡಿ ಬಂದಿದೆ . ಪ್ರೀತಿಗೆ ಸಾವಿಲ್ಲ. ಸಾಯುವುದು ಮನುಷ್ಯರು .

ಪ್ರವೀಣ್ ಭಟ್ said...

Hi Praveen,

Hmm nenapugalige savilla.. dina dina kadutte .. kelvondu kushipadisutte kelvondu dukka.. adaru marevu manushyana sahaja guna.. onderadu maretu hodaru hogabahudu kala kaleda haage.. yavudu mareyalichchisada amara premiya kavana idu

protsahakke dhanyavaadagaLu

Pravi

ಪ್ರವೀಣ್ ಭಟ್ said...

Hi Dileep,

Protsahakke dhanyavaadagalu..

ee kavanada palige .. ee amara premiya paalige preeti sikkilla..

so ivana palige preeti satta haage..

nimma haaraikeyante preeti matte goriya madyadinda chigurodeyali..

amara premige sigo prema amaravagirali

Pravi

ಪ್ರವೀಣ್ ಭಟ್ said...

Hi Sagari,

Tumba bhanyavaaagaLu

Pravi

ಪ್ರವೀಣ್ ಭಟ್ said...

Hi Soumya,

DhanyavaadagaLu.. protsaha heege irali sada..

hmm preeti nirantara. preeti nitya.. sayodu naavu.. adare ee amara premiya palige preeti sattide mattu huttisidavare sayisidaru...

Pravi

ಮನದಾಳದಿಂದ............ said...

ಒಮ್ಮೆ ಬಿಡುವು ಮಾಡಿಕೊಂಡು ನಮ್ಮ ಬ್ಲಾಗ್ ಮನೆಯ ಅಂಗಳಕ್ಕೂ ಬನ್ನಿ ಸ್ವಾಮಿ........
http://pravi-manadaaladinda.blogspot.com

ಸಾಗರದಾಚೆಯ ಇಂಚರ said...

Praveen

mast baradyo

© ಹರೀಶ್ said...

ನಮಸ್ಕಾರ ಪ್ರವೀಣ್ ರವರೆ
ನಿಮ್ಮ ನೋವಿನ ಗೋರಿ ಚನ್ನಾಗಿದೆ.
ನಾವು ಪ್ರೀತಿಸಿದ ಹೃದಯಗಳು ನಮ್ಮೊಳಗೆ ನೋವು ಹುದುಗಿಸಿಟ್ಟು ಮರೆಯಾದಾಗ ಅದನ್ನ ನಾವು ಮರೆಯಲು ಪ್ರಯತ್ನಿಸಿದರು,ಅದಕ್ಕೆ ಗೋರಿ ಕಟ್ಟಿದರು ಅದು ಮರೆಯಾಗುವುದೆ ಪ್ರವೀಣ್ ರವರೆ ?
ನಾವು ಬಾಹ್ಯವಾಗಿ ಗೋರಿ ಕಟ್ಟಿಕೊಳ್ಳಬಹುದು ಆದರೆ ಅಂತರಂಗದಲ್ಲಿ ನಮ್ಮೊಳಗೆ ನಾವಿರುವ ತನಕ ಅದು ಅದು ನೆನಪಾಗಿ ಕಾಡುತ್ತದೆ.

ಹೊನ್ನ ಹನಿ
http://honnahani.blogspot.com/
ಬಿಡುವಾದಗ ನನ್ನ ಬ್ಲಾಗಿಗೂ ಬೇಟಿ ಕೊಡಿ

ಪ್ರವೀಣ್ ಭಟ್ said...

Hi Hareesh,

nanna blog ge swagatha.. mattu dhanyavadagaLu

amara premi a nenapugallannu maribaradu antane gori kattiddu.. gori olage badravagirali anta..

nimma blog ge bande iga :)

pravi

Manju M Doddamani said...

ಪ್ರವೀಣ್ ನಿಮ್ಮ ಎಲ್ಲಾ ಕವನಗಳಲ್ಲಿ ನನಗೆ ಇದು ತುಂಬಾ ಇಷ್ಟ ಆಯ್ತು
ಹೊಸ ಥರ ಅನಿಸ್ತ ಇದೇ ತುಂಬಾ ಚನ್ನಾಗಿದೆ ನಿಮ್ಮ ಮುಂದಿನ ಎಲ್ಲಾ ಪ್ರಯತ್ನಗಳು ಶುಭವಾಗಲಿ ಹೀಗೆ ಬರೆಯುತ್ತಿರಿ :)

http://doddamanimanju.blogspot.com/

http://manjukaraguvamunna.blogspot.com/

ಮನಸಿನಮನೆಯವನು said...

ಪ್ರವೀಣ್ ಭಟ್ ,

ಇದೇನೋ ಹೊಸದೇ ರೀತಿಯದು.
ಚೆನ್ನಾಗಿದೆ.

ಪ್ರವೀಣ್ ಭಟ್ said...

Hi Manju, Jnanarpanamastu..

Tumba dhanyavadagaLu sada protsahisuttiri

pravi

Ashok.V.Shetty, Kodlady said...

ಹಾಯ್ ಪ್ರವೀಣ್ ಸರ್,

ತಡವಾಗಿ ಪ್ರತಿಕ್ರಿಯಿಸುತ್ತಿರುವುದಕ್ಕೆ ಕ್ಷಮೆ ಇರಲಿ.....

ವಿಭಿನ್ನ ಶೈಲಿಯ ಕವನ...ಇತ್ತೀಚಿನ ನಿಮ್ಮ ಎಲ್ಲ ಕವನಗಳು ಹೊಸ ಹೊಸ ಶೈಲಿಯಲ್ಲಿ ಮೂಡಿಬರುತ್ತಿರುವುದನ್ನು ನೋಡಿ ತುಂಬಾ ಕುಶಿ ಆಯಿತು.. ಎಲ್ಲ ಕವನಗಳಲ್ಲಿಯೂ ಹೊಸತನ ಕಂಡು ಬರುತ್ತಿದೆ. ಎಲ್ಲ ಸಾಲುಗಳು ಅರ್ಥಪೂರ್ಣ....ಆದರೂ

ಶ್ರದ್ಧಾಂಜಲಿ ಕಳಿಸುವ ವಿಳಾಸ
ಆರದ ಗಾಯ
c/o ಭಗ್ನ ಹೃದಯ
ಮುರಿದ ನಿಲಯ
ಅಪಘಾತ ವಲಯ
PIN:ಅವಶ್ಯಕತೆ ಇದಿಯಾ?
ಅನಿಸುತ್ತಿಲ್ಲ.....

ಈ ಸಾಲುಗಳು ತುಂಬಾ ಹಿಡಿಸಿದವು.....ತುಂಬಾ ಸುಂದರ ಕವನ......

ashu said...

Superb kano.. ee kavana tumba ishat aytu nanage.. :)