ಪ್ರೀತಿಯ ಚುಕ್ಕಿಯನಿಟ್ಟು
ಒಲವಿನ ಗೆರೆ ಎಳೆದು
ತರ ತರದ ಬಣ್ಣ ಸುರಿದು
ಮನದ ಅಂಗಳದಲ್ಲಿ
ಹಾಕಿದೆ ನೀ ರಂಗವಲ್ಲಿ
ಹೃದಯವ ಹಸನುಗೊಳಿಸಿ
ಒಲವಿನ ಜೊತೆಗೂಡಿ
ಪ್ರೀತಿಯ ಪಾತಿ ಮಾಡಿ
ಮನದ ಅಂಗಳದಲ್ಲಿ
ಹಬ್ಬಿಸಿದೆ ನೀ ಪ್ರೇಮ ಬಳ್ಳಿ
ರಂಗೋಲಿಯ ರಂಗಿನಲ್ಲಿ
ಹೂವುಗಳ ಹೊಳಪಿನಲ್ಲಿ
ಕಂಗೊಳಿಸುತಿದೆ ರಂಗಿನರಮನೆ
ಮೂಕವಿಸ್ಮಿತ,ನಿನ್ನ ಕಂಡೊಡನೆ
ಮರುಮಾತಾಡದೆ ಬಾ ಸುಮ್ಮನೆ
ನೋಡಿದು ನೀ ಕಟ್ಟಿದ ನಮ್ಮನೆ
ಮನೆಯ ಅಂಗಳದಲ್ಲಿ
ಬೀರಿದೆ ಘಮ,ಬಿರಿದ ಮಲ್ಲಿಗೆ ಚೆಲ್ಲಿ
ನಿನ್ನ ಪ್ರೀತಿಗೆ ಹೇಳಬಹುದೆ ಒಲ್ಲೆ
ನಿನ್ನ ಪ್ರೀತಿಯ ನಾ ಬಿಡಲೊಲ್ಲೆ
ನಾನು ನಲ್ಲ,ಬಾ ನೀನೇ ನನ್ನ ನಲ್ಲೆ
ಪ್ರೀತಿಯಿಂದ ಪ್ರವಿ
14 comments:
hmmm chalo iddu... :)..
ondu kavana sankalana bidugade madalakku.. :).
ಹಾಯ್ ಪ್ರವಿ ......
ಸುಂದರವಾದ ಚುಕ್ಕಿಗಳ ನಿಮ್ಮ ಪ್ರೀತಿಯ ರಂಗವಲ್ಲಿ ತುಂಬಾ ಸೊಗಸಾಗಿದೆ...
ನಿಮ್ಮ ಕವನದಲ್ಲಿರುವ ಭಾವನೆಗಳು ಇಷ್ಟ ಆದವು..
ಸರಳ ಪದಗಳಿಂದ ಕೂಡಿದ ಅತೀ ಸುಂದರ ಕವನ. ಧನ್ಯವಾದಗಳು.....
ಪ್ರೀತಿಯ ರಂಗವಲ್ಲಿ..ಸುಂದರ ಕವನ.
ನಿಮ್ಮವ,
ರಾಘು.
ಪ್ರವೀಣ್ ಲಾಸ್ಟ್ ಪ್ಯಾರ ಸುಪ್ಪ್ಪೆರ್ರೋ ಸೂಪರ್
Hi Reshma, Ashok, Raghu, Ranjitha..
Tumba Thanks.. protsaha heege irali
Pravi
chanaagi baradde... :-)ishta aatu.. :)
ಒಲವಿನಗೆರೆಗಳ ಮಧ್ಯೆ ಮನೆಮಾಡಲಿಚ್ಛಿಸುವ ಮತ್ತು ನಲ್ಲ ತನ್ನ ನಲ್ಲೆಯನ್ನ ಆಹ್ವಾನಿಸುವ ಪರಿ ಚನ್ನಾಗಿದೆ... ಪ್ರವೀಣ್ ..
Hi Divya, Ajad Sir
DhanyavadagaLu Pratikriyege..
Pravi
ಚೆನ್ನಾಗಿದೆ ಪ್ರವೀಣ್.. ಆ ನಿನ್ನ ನಲ್ಲೆ ಬೇಗನೆ ಬ೦ದು ಸೇರಲಿ ಅವಳೇ ಕಟ್ಟಿದ ನಿನ್ನರಮನೆಗೆ :)
channagide pravi :) innu niminda kavangalu hora barali :)
good writing..
Hi Param, Manju,
tumbaa dhanyavaadagaLu
Hi Vanishree,
nanna blog ge suswagatha.. pratikriyege dhanyavaadagaLu
Pravi
cholo iddu
sorry for late coming
ಸುಂದರ ಕವನ.
ರಂಗು ರಂಗಾದ ರಂಗೋಲಿಯಂತೆ ರಂಗಾಗಿರಲಿ ಪ್ರೀತಿ....
Post a Comment