ಹೃದಯ ಲೇಖನಿ ತುಂಬಾ
ತುಂಬಿರುವೆ ಪ್ರೀತಿ ಶಾಯಿ
ಮನದ ಪುಸ್ತಕದ ಮೇಲೆ
ಗೀಚಿದ್ದು ನಿನ್ನ ಛಾಯೆ
ಎಳೆದ ಪ್ರತಿ ರೇಖೆಯೂ
ನಿನ್ನದೇ ತದ್ರೂಪ
ಬರೆದ ಪ್ರತಿ ಅಕ್ಷರವೂ
ಬಣ್ಣಿಸಿದೆ ಅಪರೂಪ,ಈ ರೂಪ
ಬರೆದಷ್ಟೂ ಉಂಟು,ನಲ್ಮೆಯ ನಂಟು
ಖಾಲಿಯಾಗುವುದಿಲ್ಲ ಲೇಖನಿ
ಬಗೆದಷ್ಟೂ ಸಿಗುವ,ಮೊಗೆದಷ್ಟೂ ಮಿಗುವ
ಪ್ರೀತಿ ತುಂಬಿದ ಗಣಿ
ವರ್ಣನೆಗೆ ಸಿಗದ,ಬಣ್ಣಿಸಲು ಬಾರದ
ಓ ಸೌಂದರ್ಯ ಖನಿ
ಪುಟ ಪುಟವೂ ಈಗ
ಒಂದೊಂದು ಪದ್ಯ
ಕಿರುಕಥೆ ಮಧ್ಯೆ ಮಧ್ಯ
ಖಾಲಿಯಾಗಿದ್ದ ಮನದ
ಮೂಲೆಯನೂ ಆವರಿಸಿದೆ
ನೀನು ದೀರ್ಘಗದ್ಯ
ಮತ್ತು ಇದು ನಿನ್ನಿಂದ ಮಾತ್ರ ಸಾಧ್ಯ
ಪ್ರೀತಿಯಿಂದ
ಪ್ರವಿ
12 comments:
nice poem.
ಪುಟ ಪುಟವೂ ಈಗ
ಒಂದೊಂದು ಪದ್ಯ
ಕಿರುಕಥೆ ಮಧ್ಯೆ ಮಧ್ಯ
ಖಾಲಿಯಾಗಿದ್ದ ಮನದ
ಮೂಲೆಯನೂ ಆವರಿಸಿದೆ
ನೀನು ದೀರ್ಘಗದ್ಯ
ಮತ್ತು ಇದು ನಿನ್ನಿಂದ ಮಾತ್ರ ಸಾಧ್ಯ
.......ಭಟ್ರೆ, ಇದು ನಿಮ್ಮಿಂದ ಮಾತ್ರ ಸಾಧ್ಯ!
ತುಂಬಾ ಚನ್ನಾಗಿದೆ ಪ್ರವಿ!
ಸರ್
ಕೆಳಗಿನ ಸಾಲುಗಳು
ಪುಟ ಪುಟವೂ ಈಗ
ಒಂದೊಂದು ಪದ್ಯ
ಕಿರುಕಥೆ ಮಧ್ಯೆ ಮಧ್ಯ
ಖಾಲಿಯಾಗಿದ್ದ ಮನದ
ಮೂಲೆಯನೂ ಆವರಿಸಿದೆ
ನೀನು ದೀರ್ಘಗದ್ಯ
ಮತ್ತು ಇದು ನಿನ್ನಿಂದ ಮಾತ್ರ ಸಾಧ್ಯ
ಸುಂದರ
ಒಟ್ಟಿನಲ್ಲಿ ಒಳ್ಳೆಯ ಕವನ
ಪ್ರವೀಣ್ ಭಟ್ರ ಕವನ ಹೇಗಿದ್ದು ಅಂತ ಕವನ ಓದಿನೆ ತಿಳಿಬೆಕಾದ್ದಿಲ್ಲ .. ಹೆಡ್ಡಿಂಗ್ ಓದಿದರೂ ಸಾಕಾಗ್ತು ...
ಕವನ ,ಹೆಡ್ಡಿಂಗ್ ಎಲ್ಲಾ ಸೂಪರ್ ..:)
Hi Manamuktha, kavite, Manju, Gurumoorthanna..
tumba dhanyavaadagaLu.. protsahakke naanu abhaari
Pravi
Hi Ranjitha,
Tumbane Thanks, astella hogalaDa... teera antadden barile :)
Pravi
nice one dude.....
ಪ್ರವೀಣ್ ಭಟ್-
ಸೊಗಸಾದ ಕವಿತೆ..
ನಿಮ್ಮದೇ ನಿರೀಕ್ಷೆಯಲ್ಲಿ..: http://manasinamane.blogspot.com/
Hi Shettre, Guru dese
Tumba Dhanyavaadagalu
Pravi
Tumbaa arthapurnavaagide Praveen, Very Nice...ista aithu.....
Post a Comment