skip to main |
skip to sidebar
ನವ್ಯ ಶೈಲಿಯಲ್ಲೊಂದು ಕವನ .. almost ಯಾರೂ ಸುಳಿಯದ ಹಾದಿಯ ಬದಿಯ ಮರ ನಾನುಏಕಾಂಗಿ,ಸುತ್ತ ಬರೀ ಬೋಳುಗುಡ್ಡಜೊತೆಯಿರುವುದು ಒಂದೆರಡು ಎಲೆನಾಲ್ಕೈದು ಟೊಂಗೆ ,ಕುಟುಕು ಜೀವಶಿಶಿರದ ಹಂಗಿಲ್ಲ ವಸಂತದ ಗುಂಗಿಲ್ಲ !!ಬೇರುಗಳು ನೀರನ್ನರಸುತ್ತ ಹೊರಟಿವೆಆದರೆ ಅವೂ ನನ್ನಷ್ಟೆ ದುರ್ಬಲತಲುಪಲಾರವೇನೋ ಜಲಬಿರು ಬಿಸಿಲು,ನನ್ನ ಬುಡಕ್ಕೇ ನೆರಳಿಲ್ಲ ಬೇರೆಯವರಿಗೆ ದೂರದ ಮಾತು !!ನೀರೆರೆಯುವರನ್ನಂತೂ ನಾ ಕಾಣೆಆಗೊಮ್ಮೆ ಈಗೊಮ್ಮೆ ನಾಯಿ ಕಾಲೆತ್ತಿದ್ದಷ್ಟೆ!! ಅಪರೂಪಕ್ಕೆ ಮನುಷ್ಯರೂ !!ಆದರೂ ಏನೋ ಆಸೆಒಂದೆರಡು ಹನಿ ಮಳೆ ಬರಬಹುದುಬೇರುಗಳು ಎಲ್ಲಾದರೂ ಜಲ ಸೇರಿಯಾವು...ಮೋಡವೇ ಇಲ್ಲದ ಬಾನಿನಲ್ಲಿಸೂರ್ಯ ಕಿಸಕ್ಕನೇ ನಕ್ಕಿದ್ದ,ನಗುತ್ತಲೇ ಇದ್ದಾನೆ ಜೀವವೇ ಇಲ್ಲದ ಬೇರುಗಳು ಸಾಯಲು ರೆಡಿಯಾಗಿದ್ದವು ನನ್ನಂತೆ !!ಅಮರನಲ್ಲ ನಾನು ಮರ !!!ಪ್ರೀತಿಯಿಂದ ಪ್ರವಿ
11 comments:
nice poem .....
ಭಾವಗಳ ಜೊತೆ ಶಬ್ದಗಳ ಬಳಕೆ ಸಕ್ಕತ್ತಾಗಿದೆ .. ಓದೋವಾಗ ಬೇರುಗಳ ಆಳಕ್ಕೆ ಇಳಿದಂತಗಿತ್ತು ತುಂಬಾ ಚೆನ್ನಾಗಿದೆ ಪ್ರವೀಣ್
soooper.!!!.......... :)
sakkattagiddu..mostly namma kade mara adu..:p
ಹೊಸ ಶೈಲಿಯಲ್ಲಿ ಸುಂದರಾವಾಗಿ ಮೂಡಿ ಬಂದಿದೆ !
ಹೊಸ ಶೈಲಿಯ ಸುಂದರ ಕವನ...ತುಂಬಾ ತುಂಬಾ ಹಿಡಿಸಿತು ಪ್ರವೀಣ್ ...ಭಾವಪೂರ್ಣ, ಅರ್ಥಪೂರ್ಣ ಕವನ,
ನೀರೆರೆಯುವರನ್ನಂತೂ ನಾ ಕಾಣೆ
ಆಗೊಮ್ಮೆ ಈಗೊಮ್ಮೆ ನಾಯಿ ಕಾಲೆತ್ತಿದ್ದಷ್ಟೆ!!
ಸಾಲುಗಳು ಸುಪರ್ಬ್....
ಶೈಲಿಯಲ್ಲಿ ಬಿನ್ನತೆಯಿದೆ
ಫೋಟೋಗಳು ಸೇರಿ ಕವನಕ್ಕೆ ಒಂದು ಹೊಸ ರೂಪ ನೀಡಿದೆ
chennagide maga....:-)
ಬಿರು ಬಿಸಿಲು,ನನ್ನ ಬುಡಕ್ಕೇ ನೆರಳಿಲ್ಲ
ಬೇರೆಯವರಿಗೆ ದೂರದ ಮಾತು !!
ನೀರೆರೆಯುವರನ್ನಂತೂ ನಾ ಕಾಣೆ
ಆಗೊಮ್ಮೆ ಈಗೊಮ್ಮೆ ನಾಯಿ ಕಾಲೆತ್ತಿದ್ದಷ್ಟೆ!!
ಅಪರೂಪಕ್ಕೆ ಮನುಷ್ಯರೂ !!
ಸಖ್ಖತ್ತಾಗಿ ಬಂದಿದೆ...!! :)
ಪ್ರೋತ್ಸಾಹಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು..
ಪ್ರೋತ್ಸಾಹ ನಿರಂತರವಾಗಿರಲಿ..
ಹ್ಮ್ಮ್ ಚೇತನಕ್ಕ, ನಮ್ ಕಡೆ 1 ಮರ ನೋಡಿಯೇ ಈ ಕವನ ಹುಟ್ಟಿದ್ದು :)
ಪ್ರವಿ
ತುಂಬಾ ಚೆನ್ನಾಗಿದೆ ಪ್ರವೀಣ್
Post a Comment