ಬಿಸಿಲಲಿ ಬೆಂದಿಹ ಭೂಮಿಗೆ
ಮಳೆಹನಿ ಸೋಕಿದೆ
ವಿರಹದಿ ತಪಿಸಿದ ಹೃದಯಕೆ
ಪ್ರೀತಿಯು ಸಿಕ್ಕಿದೆ
ನೀರನು ಹೀರಿದ ಭುವಿಯು
ನಳನಳಿಸಿ ನಲಿಯುತಿದೆ
ಹೃದಯದಿ ಹೊಕ್ಕಿಹ ಪ್ರೀತಿ
ಹಿತವಾಗಿ ಹರಿಯುತಿದೆ
ಚಿಪ್ಪಲಿ ಸೇರಿದ ಹನಿಯು
ಮುತ್ತಾಗಿ ಮೆರೆಯುತಿದೆ
ಎದೆಯಲಿ ಬಿದ್ದ ಪ್ರೀತಿ ಹನಿಯು
ಮೆತ್ತಗೆ ಮುತ್ತಾಗುತಿದೆ
ಮುತ್ತದೋ ಮಿನುಗುತಿದೆ
ಹೃದಯವು ಹೊಳೆಯುತಿದೆ!!!
=== ಪ್ರೀತಿಯ ಪ್ರವಿ
14 comments:
mast iddu kavana...:)
"ನೀರನು ಹೀರಿದ ಭುವಿಯು
ನಳನಳಿಸಿ ನಲಿಯುತಿದೆ
ಹೃದಯದಿ ಹೊಕ್ಕಿಹ ಪ್ರೀತಿ
ಹಿತವಾಗಿ ಹರಿಯುತಿದೆ"
Lines superb!!!...:)
hmm,, sakkattaagiddu.. awesome..:)
viraha viragige sikka sanihadantide.... nimma kavana...
muddagideeeeeeeeee........
ತು೦ಬಾ ಚೆನ್ನಾಗಿದೆ ಪ್ರವಿ. ಪ್ರೀತಿಯ ಹಿತ, ಮುತ್ತಿನ ಮಿನುಗು ಹೃದಯದ ಹೊಳಪು wow very nice :)
ತುಂಬಾ ಧನ್ಯವಾದಗಳು .. ದಿವ್ಯಾ, ಚೇತನ ..
ಹಾರ್ ಅರುಣ್ , ಪರಮ್ ,
ಧನ್ಯವಾದಗಳು ಪ್ರೋತ್ಸಾಹ ಹೀಗೆ ಇರಲಿ
Tumbaaa Chennagide....Nice wordings....Arthapurna kavana....
ಚಿಪ್ಪಲಿ ಸೇರಿದ ಹನಿಯು
ಮುತ್ತಾಗಿ ಮೆರೆಯುತಿದೆ
ಎದೆಯಲಿ ಬಿದ್ದ ಪ್ರೀತಿ ಹನಿಯು
ಮೆತ್ತಗೆ ಮುತ್ತಾಗುತಿದೆ
ಎಂಥಹ ಅರ್ಥ ಗರ್ಭಿತ ಸಾಲುಗಳು
ಸುಂದರ ಕವನ
Tumba DhanyavadagaLu Ashok
ಹಾಯ್ ಗುರುಮೂರ್ತಣ್ಣ,
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.. ಧನ್ಯವಾದಗಳು
ಪ್ರವಿ
ಎದೆಯಲಿ ಬಿದ್ದ ಪ್ರೀತಿ ಹನಿಯು
ಮೆತ್ತಗೆ ಮುತ್ತಾಗುತಿದೆ
ಮುತ್ತದೋ ಮಿನುಗುತಿದೆ
ಹೃದಯವು ಹೊಳೆಯುತಿದೆ!!!
superb
ಹಾಯ್ ರಂಜಿತ
ತುಂಬಾ ಧನ್ಯವಾದಗಳು . ಪ್ರೋತ್ಸಾಹ ನಿರಂತರವಾಗಿರಲಿ
ಪ್ರವಿ
'ಪ್ರವೀಣ್ ಭಟ್' ಅವ್ರೆ..,
ಹೃದಯ ಹೊಳೆಯಲು ಅಲ್ಲಿ ಬಿದ್ದ ಬೆಳಕಾವುದು..
ನನ್ನ 'ಮನಸಿನಮನೆ'ಗೆ ಬನ್ನಿ:http://manasinamane.blogspot.com/
Tumbaa DhanyavadagaLu gurugaLe..
nimma manassina manege bandu. tea kudadu bande.. :)
Post a Comment