Thursday, February 4, 2010

ಅಮ್ಮ ನಿನ್ನ ತೋಳಿನಲ್ಲಿ!!





ಅಮ್ಮ ನಿನ್ನ ಮಡಿಲಲ್ಲಿ
ಮತ್ತೊಮ್ಮೆ ಮಗುವಾಗಿ
ಮಲಗೋ ಆಸೆ
ನಾ ನಕ್ಕು ನಿನ್ನ ಮುಖದಲ್ಲೂ
ನಗುವನ್ನು ನೋಡೋ ಆಸೆ

ಅಮ್ಮ ನಿನ್ನ ತೋಳಲ್ಲಿ
ಮತ್ತೊಮ್ಮೆ ತೊನೆಯುತ್ತಾ
ಕೂರೋ ಆಸೆ
ಕಾಟವ ಸಹಿಸದೇ
ಹುಸಿ ಪೆಟ್ಟು ಕೊಟ್ಟಿರಲು
ಸುಮ್ಮನೇ ಸಿಟ್ಟನ್ನು
ಮಾಡೋ ಆಸೆ

ಅಮ್ಮ ನೀ ಕೈ ಹಿಡಿದು ನಡೆದರೂ
ನಾ ತಪ್ಪಿಸಿ ಹೋಗಿ
ಬೀಳೋ ಆಸೆ
ನೋವೇನೂ ಆಗದಿದ್ದರೂ
ನಿನ ಕಂಡು ಸುಮ್ಸುಮ್ನೆ ಅಳುವ ಆಸೆ
ನೀ ನನ್ನ ರಮಿಸುವುದಾ
ಕೇಳೋ ಆಸೆ

ಅಮ್ಮ ನಿನ್ನ ಕೈಯಲ್ಲಿ
ಕೈ ತುತ್ತು ತಿನ್ನೋ ಆಸೆ
ಚಂದಿರನ ತೋರಿಸುತಾ
ನೀ ತುತ್ತು ತಿನಿಸಲು
ನಾ ಹೀಗೆ ಇರುವಾಸೆ
ಮತ್ತೊಮ್ಮೆ ಮಗುವಾಗೋ ಆಸೆ!!!

.... ಪ್ರವಿ

12 comments:

Ashok.V.Shetty, Kodlady said...

ತುಂಬಾ ಚೆನ್ನಾಗಿದೆ..... ನಿಮ್ಮ ಕವನ ನೋಡಿ ಮತ್ತೆ ಮಗುವಾಗೋ ಆಸೆ ಆಗ್ತಾ ಇದೆ....ಸರಳವಾದ ಶಬ್ಧಗಳಲ್ಲಿ ಸುಂದರವಾಗಿ ಬಣ್ಣಿಸಿದ್ದಿರಿ... ಸುಂದರ ಕವನ....ತುಂಬಾ ಇಷ್ಟ ಆಯಿತು...

Manju M Doddamani said...

"ಅಮ್ಮ ನಿನ್ನ ಮಡಿಲಲ್ಲಿ
ಮತ್ತೊಮ್ಮೆ ಮಗುವಾಗಿ
ಮಲಗೋ ಆಸೆ"
ನಿಜವಾಗಲು ಅದ್ಭುತ ಸಾಲುಗಳು ಪ್ರವೀಣ್ ಒಮ್ಮೆ ಅಲ್ಲ ತಾಯಿ ಅನ್ನೋ ಪದ ಈ ಲೋಕದಲ್ಲಿ ಎಲ್ಲಿತನಕ ಇರುತ್ತೋ ಅಲ್ಲಿವರೆಗೂ ನನಗೆ "ಅಮ್ಮನ ಮಡಿಲಲ್ಲಿ ಮಗುವಾಗಿ ಮಲಗೋ ಆಸೆ"

ನಿಮ್ಮ ಈ ಕವನ ನನಗೆ ತುಂಬಾ ಇಷ್ಟ ವಾಯಿತು

Ashok.V.Shetty, Kodlady said...
This comment has been removed by the author.
ಮನಸಿನ ಮಾತುಗಳು said...

chennagide... :) :)

Ravi N said...

ತುಂಬಾ ಚೆನ್ನಾಗಿದೆ ಸರ್,

Unknown said...

Wonderful poem... Superb...

ಪ್ರವೀಣ್ ಭಟ್ said...

Hi Ashok, manju..

tumba dhanyavadagalu.. hmm matte matte maguvaago ase kadtane ide

Pravi

ಪ್ರವೀಣ್ ಭಟ್ said...

Hi Ravi, Divya, Shwetha

Tumba Dhanyavadagalu..

ಸಾಗರದಾಚೆಯ ಇಂಚರ said...

ತುಂಬಾ ಚೆನ್ನಾಗಿ ಬರೆದಿದ್ದಿರ ಸರ್
ಹೀಗೆಯೇ ಬರೆಯುತ್ತಿರಿ

Anonymous said...

ಭಾವಪೂರ್ಣವಾಗಿ ಬರೆದಿದ್ದೀರಿ.

ಪ್ರವೀಣ್ ಭಟ್ said...

Hi Gurumoorthanna and neeli hoovu

Tumbaa dhanyavadagaLu...

Unknown said...

ಕವನ ತುಂಬಾ ಚೆನ್ನಾಗಿದೆ ತುಂಬಾ ಇಷ್ಟ ಆಯಿತು