Monday, February 1, 2010

ಕೂಡಿ ಬಂದ ಗಳಿಗೆ




ನನ್ನೆದೆ ಗೂಡಲಿ ನಿನ್ನದೇ ಚಿಲಿಪಿಲಿ
ನಿನ್ನನು ಸೇರಲು ಸುಮ್ಮನೆ ಗಲಿಬಿಲಿ
ಮನಸಿನ ತುಂಬಾ ತಣ್ಣನೆ ಕೋಲಾಹಲ
ನೋಡುವ ತವಕವೇ,ತಣಿಯದ ಕುತೂಹಲ

ಸಾವಿರ ಮಾತನು ಹೇಳಲು ಬಂದೆನು
ನಿನ್ನನು ನೋಡಲು ಮಾತನೇ ಮರೆತೆನು
ನೋಟವೇ ಹೇಳಿದೆ ನನ್ನೆದೆ ಮಾತನು
ನಿನ್ನಯ ಉತ್ತರ ಕೇಳದೇ ಹೋಗೆನು

ಜೊತೆ ಜೊತೆ ನಡೆದಿರೆ ಅದೇನೋ ರೋಮಾಂಚನ
ಕೈಗೆ ಕೈ ತಗುಲಲು ಅದೇಕೋ ತುಸು ಕಂಪನ
ಸಾವಿರ ಅರ್ಥವ ಹೇಳಿದೆ ನಡುವಿನ ಮೌನ
ಯಾವುದೂ ತಿಳಿಯದೆ ಚಡಪಡಿಸುತಿದೆ ಮನ

ಮುದ್ದಿನ ಕಣ್ಣಲಿ ಮಿಂಚಿನ ಹೊಳಪಿದೆ
ನನ್ನೀ ಪ್ರೀತಿಯ ಪ್ರಶ್ನೆಗೆ ಉತ್ತರ ಸಿಕ್ಕಿದೆ
ಕಂಡೆನು ಪ್ರೀತಿಯ ನಿನ್ನಯ ಕಣ್ಣಲೂ
ಕಾದಿರುವ ಶುಭಗಳಿಗೆ,ತೆರೆಯಿತು ಭಾಗ್ಯದ ಬಾಗಿಲು.

..............ಪ್ರವಿ

16 comments:

Ashok.V.Shetty, Kodlady said...

Praveen......Tumbaa Tumbaa Tumbaaa chennagide......padgala hagu praasa jodane sogasaagide....Very Beautiful one......

Manju M Doddamani said...

ಪ್ರವಿಣ್ :) ತುಂಬಾ ಹಿಡಿಸ್ತು ಚನ್ನಾಗಿದೆ ಕೆಲವೊಂದು ಸಾಲುಗಳು ಮನೋಹರವಾಗಿ ಮೂಡಿಬಂದಿವೆ :)

ಪ್ರವೀಣ್ ಭಟ್ said...

ಹಾಯ್ ಅಶೋಕ್ ಮತ್ತು ಮಂಜು...

ತುಂಬಾ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಪ್ರವೀಣ,
ಕುಮಾರ್ ಸಾನು ಗೆ ಕೊಟ್ಟರೆ ಮತ್ತೊಂದು ಮುಂಗಾರು ಮಳೆಯ ಅನಿಸುತಿದೆ ಯಾಕೋ ಇಂದು
ಹಾಡಂತೆ ಹಿಟ್ ಆಗೋದು ಗ್ಯಾರಂಟೀ
ತುಂಬಾ ಚೆನ್ನಾಗಿದೆ

ಪ್ರವೀಣ್ ಭಟ್ said...

ತುಂಬಾ ಧನ್ಯವಾದಗಳು ಗುರುಮೂರ್ತಣ್ಣ

ಗೌತಮ್ ಹೆಗಡೆ said...

praasa majavaagide:) nice..

ಚುಕ್ಕಿಚಿತ್ತಾರ said...

ಚನ್ನಾಗಿವೆ...ಕವನದ ಸಾಲುಗಳು...

Anonymous said...

sakkat romantic aagide.. ishtavaaytu..

ಪ್ರವೀಣ್ ಭಟ್ said...

ತುಂಬಾ ಧನ್ಯವಾದಗಳು ಗೌತಮ್ , ವಿಜಯಶ್ರೀ ಮತ್ತು ಚೇತನಕ್ಕ ಅವರಿಗೆ

Unknown said...

Very beautiful!!!!

Ravi N said...

ವ್ಹಾವ್, ತುಂಬಾನೆ ಸೊಗಸಾಗಿದೆ ಸರ್....ನಿಮ್ಮ ಭಾವ ಬಿಂಬಿಸುವ ಪರಿ...ನಿಜಕ್ಕೂ ಅದ್ಭುತ.

ಪ್ರವೀಣ್ ಭಟ್ said...

Thanks Theja

ಪ್ರವೀಣ್ ಭಟ್ said...

ತುಂಬಾ ಧನ್ಯವಾದಗಳು ರವಿ

Ashok.V.Shetty, Kodlady said...

ತುಂಬಾ ಚೆನ್ನಾಗಿದೆ..... ನಿಮ್ಮ ಕವನ ನೋಡಿ ಮತ್ತೆ ಮಗುವಾಗೋ ಆಸೆ ಆಗ್ತಾ ಇದೆ....ಸರಳವಾದ ಶಬ್ಧಗಳಲ್ಲಿ ಸುಂದರವಾಗಿ ಬಣ್ಣಿಸಿದ್ದಿರಿ... ಸುಂದರ ಕವನ....ತುಂಬಾ ಇಷ್ಟ ಆಯಿತು..

Unknown said...

So wonderful... Nijavaglu idakke raaga haki hadidare superb...

ಪ್ರವೀಣ್ ಭಟ್ said...

Hi Shwetha,

Tumba tumba dhanyavadaglu

Pravi