Monday, November 9, 2009

ನೆನಪುಗಳ ಸಂತೆ

ನೆನಪುಗಳ ಹಾವಳಿಯಿಂದ
ಹಾಳಾಗಿದೆ ನನ್ನೀ ಹೃದಯ
ದಾಳಿಯಿಡುತಿದೆ ಧೈರ್ಯದಿಂದ
ಚೇತರಿಸಿಕೊಳ್ಳಲು ನೀಡದೆ ಸಮಯ

ಶಿಥಿಲವಾಗಿದೆ ಹೃದಯ ಕೋಟೆ
ಎದುರಿಸಲು ವಾಸ್ತವ
ನೆನಪುಗಳೋ ಮೂಟೆ ಮೂಟೆ
ಮರೆತು, ಬದುಕಲು ಸಾಧ್ಯವಾ ?

ಚುಚ್ಚುತಿದೆ ಚೂರಿಯಂತೆ
ಅಪ್ಪಳಿಸುತಿದೆ ಅಲೆಯಂತೆ
ಕ್ಷಣವಷ್ಟೇ ಮರೆತಂತೆ
ಮರೆಯಲಿ ಅವಿತಂತೆ
ಮತ್ತದೇ ನೆನಪುಗಳ ಸಂತೆ

…………………ಪ್ರೀತಿಯಿಂದ ಪ್ರವಿ



3 comments:

If opportunity doesn't knock, build a door. said...

ಚುಚ್ಚುತಿದೆ ಚೂರಿಯಂತೆ
ಅಪ್ಪಳಿಸುತಿದೆ ಅಲೆಯಂತೆ
ಕ್ಷಣವಷ್ಟೇ ಮರೆತಂತೆ
ಮರೆಯಲಿ ಅವಿತಂತೆ
ಮತ್ತದೇ ನೆನಪುಗಳ ಸಂತೆ

....I like it.Simply superb

Ranjita said...

ವವ್ ಸರ್ ತುಂಬಾ ಚೆನ್ನಾಗಿದೆ ..
ನಿಮ್ಮ ಕವಿತೆಗಳ ನೋಡಿ ಮುನಿಸಿಕೊಳ್ಳುವ ಒದತಿಯು ನಸುನಕ್ಕು ಒಳ ನಡೆದಾರು ..

Sunil said...

Thumba chennagide.. good one :)