ಮಳೆಯ ನಾ ತಡೆಯಲಾರೆ
ಕೊಡೆಯಾಗಿ ನಾನಿರುವೆ
ಬಿಸಿಲ ನಾ ಬೆದರಿಸಲಾರೆ
ನೆರಳಾಗಿ ಜೊತೆಯಿರುವೆ
ದುಃಖದ ಭಾರದಿ ಬಳಲುತಿರೆ
ಹೆಗಲಿಗೆ ನಾ ಹೆಗಲ್ಕೊಡುವೆ
ಆದರೂ ನಿನ್ನಲಿ ಆಗದಿರೆ
ನಿನ್ನಯ ಭಾರವ ನಾ ಹೊರುವೆ
ಕತ್ತಲೆಯ ನಾ ಕಳುಹಿಸಲಾರೆ
ದೀಪದಿ ಹಾದಿಯ ಬೆಳಗಿಸುವೆ
ದಾರಿಯು ಕಾಣದೆ ತೊಡರುತಿರೆ
ಕೈ ಹಿಡಿದು ಮುನ್ನೆಡೆವೆ
ಕಷ್ಟವೇ ಆದರೂ ಕದಲಲಾರೆ
ಇಷ್ಟದೀ ನಿನ್ನ ರಕ್ಷಿಸುವೆ
ಏನನೂ ಮಾಡದೇ ನಾನಿರಲಾರೆ
ಕಾರಣ ನಿನ್ನನು ಪ್ರೀತಿಸುವೆ
--------------------- ಪ್ರೀತಿಯ ಪ್ರವಿ ...
ಒಂದೆಲೆ ಮೇಲಿನ ಕಾಡು - ಸ. ವೆಂ. ಪೂರ್ಣಿಮಾ
-
https://www.facebook.com/share/p/1ATrCV13Sb/
ದಿನಾಂಕ : 21_07_2024
'ಜೇನುಗಿರಿ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ ಇಲ್ಲಿದೆ. ಓದಿ ನಿಮ್ಮ ಅಭಿಪ್ರಾಯವನ್ನು
ತಿಳಿಸಿ🌼
...
4 days ago
7 comments:
thumba bhavanatmakavagi bardidiya
pade pade odohagide
thumba ista ayithu
chennagi bardidiya
"ಮಳೆಯ ನಾ ತಡೆಯಲಾರೆ
ಕೊಡೆಯಾಗಿ ನಾನಿರುವೆ
ಬಿಸಿಲ ನಾ ಬೆದರಿಸಲಾರೆ
ನೆರಳಾಗಿ ಜೊತೆಯಿರುವೆ"
woooow.... ಆರಂಭದ ಸಾಲುಗಳೇ ಭರ್ಜರಿಯಾಗಿವೆ..!!
ಕವನ ಸಕತ್ ಇಷ್ಟವಾಯ್ತು.. ಬರೆಯುತ್ತಿರಿ...
ದಿಲೀಪ್ ಹೆಗಡೆ
Hi Praveen,
ತುಂಬ ಚೆಂದದ ಕವನ !!!
ಒಂದಕ್ಕೊಂದು ಪದಗಳ ಜೋಡಣೆ suuuuper ...
ಇನ್ನು ಬರೆಯಿರಿ...
keep up the good work!!!
yaradu hel bidappa hogli.. oodi kushi padli...
Thanks Pratima dileep and divya...
nangu gottille yaru heli... sikkidaga kodakagtu heli ivella :)
hey very nice poetry man,, try them for film industry or publish it
Post a Comment